ಮುಂಬಯಿ: ಚಲನಚಿತ್ರ ಮತ್ತು ದೂರದರ್ಶನ ಮಹಿಳಾ ವಿಭಾಗ ಮುಂಬಯಿ ವತಿಯಿಂದ ಕ್ರಿಕೆಟ್ ಫಾರ್ ಯುನಿಟಿ ಟ್ರೋಫಿ ಮಹಿಳಾ ಕ್ರಿಕೆಟ್ ಪಂದ್ಯಾಟವು ಇತ್ತೀಚೆಗೆ ಮೀರಾರೋಡ್ ಪೂರ್ವದ ಸೆಕ್ಟರ್-10 ರ ಸರ್ದಾರ್ ವಲ್ಲಭಭಾಯಿ ಪಟೇಲ್ ಮೈದಾನದಲ್ಲಿ ನಡೆಯಿತು.
ಸ್ಥಳೀಯ ನಗರ ಸೇವಕಿ ಮತ್ತು ಚಲನಚಿತ್ರ ಮತ್ತು ದೂರರ್ಶನ ಜಿಲ್ಲಾ ಮಹಿಳಾಧ್ಯಕ್ಷೆ ಹೇತಲ್ ಪರ್ಮಾರ್ ಅವರ ಪ್ರಾಯೋಜಕತ್ವದಲ್ಲಿ ನಡೆದ ಪಂದ್ಯಾಟವನ್ನು ಸ್ಥಳೀಯ ನಗರ ಸೇವಕಿ ಹೇತಲ್ ಪರ್ಮಾರ್ ಮತ್ತು ನಗರ ಸೇವಕ ಪ್ರಶಾಂತ್ ದಳ್ವಿ ಇವರು ಉದ್ಘಾಟಿಸಿ ಕ್ರೀಡಾಳುಗಳಿಗೆ ಶುಭಹಾರೈಸಿದರು.
ಉದ್ಘಾಟನ ಪಂದ್ಯದಲ್ಲಿ ರಾಯರ ಬಳಗ ಮೀರಾರೋಡ್ ತಂಡವು ಪ್ರತಾಂಜಲಿ ಇಲೆವೆನ್ ತಂಡವನ್ನು ಎದುರಿಸಿದ್ದು, ಮೊದಲು ಬ್ಯಾಟಿಂಗ್ ಮಾಡಿದ ರಾಯರ ಬಳಗ ತಂಡವು ವಿಕೆಟ್ ನಷ್ಟವಿಲ್ಲದೆ ಐದು ಓವರ್‌ಗಳಲ್ಲಿ 93 ರನ್ ಬಾರಿಸಿತು. ಸತತ ಮೂರು ಪಂದ್ಯ ಆಡಿದ ರಾಯರ ಬಳಗ ತಂಡವು ಅಂತಿಮವಾಗಿ ಫೈನಲ್ ಪ್ರವೇಶಿಸಿತು.
ಫೈನಲ್‌ನಲ್ಲಿ ಕ್ವೀನ್ಸ್ ಇಲೆವೆನ್ ತಂಡವು ವಿನ್ನರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಮೀರಾರೋಡ್ ರಾಯರ ಬಳಗ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ರಾಯರ ಬಳಗ ತಂಡದ ನಿಶಾ ಶೆಟ್ಟಿ ಇವರು ಪಂದ್ಯ ಪುರುಷೋತ್ತಮ, ರಾಯರ ಬಳಗ ತಂಡದ ನೈವೇದ್ಯಾ ಬಂಗೇರ ಇವರು ಪಂದ್ಯ ಪುರುಷೋತ್ತಮ ಹಾಗೂ ರಾಯರ ಬಳಗದ ಸ್ಟಾÂನ್ಸಿ ಮೆಂಡೋನ್ಸಾ ಇವರು ಉತ್ತಮ ಎಸೆಗಾರ್ತಿ ಪ್ರಶಸ್ತಿಯನ್ನು ಪಡೆದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮೀರಾ-ಭಾಯಂದರ್ ಶಾಸಕ ನರೇಂದ್ರ ಮೆಹ್ತಾ, ಮೀರಾ-ಭಾಯಂದರ್ ಮೇಯರ್ ಡಿಂಪಲ್ ಮೆಹ್ತಾ, ಮೀರಾ-ಭಾಯಂದರ್ ನಗರ ಸೇವಕಿ ವಂದನಾ ಭಾವ್ಸರ್, ಮೀರಾ-ಭಾಯಂದರ್ ನಗರ ಸೇವಕ ಪ್ರಶಾಂತ್ ದಳ್ವಿ, ಎಂಬಿಎಂಸಿ ನಗರ ಸೇವಕಿ ಹೇತಲ್ ಪಾರ್ಮರ್, ಧಾರವಾಹಿ ನಟ ಗುಲ್ಶನ್ ಪಾಂಡೆ ಮೊದಲಾದವರು ಉಪಸ್ಥಿತರಿದ್ದರು.
ಚಲನಚಿತ್ರ, ದೂರದರ್ಶನ ಜಿಲ್ಲಾ ಮಹಿಳಾಧ್ಯಕ್ಷೆ, ನಗರ ಸೇವಕಿ ಹೇತಲ್ ಪಾರ್ಮರ್ ಇವರ ಸಹಕಾರದೊಂದಿಗೆ ನಡೆದ ಪಂದ್ಯಾಟದಲ್ಲಿ ಭಾರತೀಯ ಜನ ಪಕ್ಷದ ಮೀರಾ-ಭಾಯಂದರ್ ಘಟಕವು ಸಂಪೂರ್ಣವಾಗಿ ಸಹಕರಿಸಿತು. ಹೇತಲ್ ಪಾರ್ಮರ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.