Advertisement

ಮುಂಬಯಿ: 1ಲಕ್ಷ ದಾಟಿದ ಚೇತರಿಸಿಕೊಂಡವರ ಸಂಖ್ಯೆ

06:27 PM Aug 11, 2020 | Suhan S |

ಮುಂಬಯಿ, ಆ. 10: ನಗರದಲ್ಲಿ ಇದುವರೆಗೆ ಪತ್ತೆಯಾದ 1.31 ಲಕ್ಷ ಕೋವಿಡ್ ಸೋಂಕಿತರಲ್ಲಿ ಚೇತರಿಸಿಕೊಂಡವರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಪ್ರಸ್ತುತ ನಗರದ ಚೇತರಿಕೆ ದರವು ಶೇ. 77ರಷ್ಟಿದ್ದು, ಇದು ರಾಜ್ಯ ಶೇ. 66.76 ಮತ್ತು ರಾಷ್ಟ್ರೀಯ ಶೇ. 67.98ರಷ್ಟು ಸರಾಸರಿ ಚೇತರಿಕೆ ದರಗಳನ್ನು ಕ್ರಮವಾಗಿ ಮೀರಿದೆ.

Advertisement

ಮುಂಬಯಿಯಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,21,012 ತಲುಪಿದ್ದು, ರಾಜ್ಯ ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ ಒಟ್ಟು ಸಾವಿನ ಸಂಖ್ಯೆ 6, 693 ಆಗಿದೆ. ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡ 1,239 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಒಟ್ಟು 9,389 ಸೋಂಕಿತರಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ನಗರದಲ್ಲಿ ಒಟ್ಟು 20,124 ಸಕ್ರಿಯ ಪ್ರಕರಣಗಳಿದ್ದು, ಚೇತರಿಕೆ ಪ್ರಮಾಣವು ಶೇ. 73ರಷ್ಟಿದೆ. ಗುರುವಾರದವರೆಗೆ ಒಟ್ಟು 5.83 ಲಕ್ಷ ಕೋವಿಡ್‌ ಪರೀಕ್ಷೆಗಳನ್ನು ನಡೆಸಿದೆ. ಶುಕ್ರವಾರದ ವೇಳೆಗೆ ಚೇತರಿಸಿಕೊಂಡವರ ಸಂಖ್ಯೆ 1 ಲಕ್ಷವನ್ನು ದಾಟಿದ್ದು, ಪ್ರತಿದಿನ ಸರಾಸರಿ 1,000 ಸೋಂಕಿತರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಬಿಎಂಸಿ ತಿಳಿಸಿದೆ.

ತ್ವರಿತ ಕ್ರೀಯಾ ಯೋಜನೆಯಿಂದ ಕಡಿಮೆ ಬಿಎಂಸಿ ಅಧಿಕಾರಿಯೋಬ್ಬರು ಮಾತನಾಡಿ, ನಗರದ ಚೇತರಿಕೆ ದರವು ಜೂನ್‌ ಮಧ್ಯದಿಂದ ಶೇ. 50ರಷ್ಟಿದ್ದಾಗ ಗಮನಾರ್ಹ ಸುಧಾರಣೆ ಕಂಡಿದೆ, ಅವರ ಬಳಿಕ ಮುಂಬಯಿ ಮಹಾನಗರ ಪಾಲಿಕೆ ಸೋಂಕು ಹರಡುವಿಕೆಯನ್ನು ಒಳಗೊಂಡಿರುವ ತ್ವರಿತ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿತು. ಚೇತರಿಕೆ ದರ ಜುಲೈ 1ರಂದು ಶೇ. 57ಕ್ಕೆ ಮತ್ತು ಮತ್ತು ಜುಲೈ 15ರಂದು ಶೇ. 70ಕ್ಕೆ ಸುಧಾರಿಸಿದೆ. ಸುಧಾರಿತ ರೋಗನಿರೋಧಕ ಶಕ್ತಿ, ಆರಂಭಿಕ ಪತ್ತೆ ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆಯ ಕಾರಣದಿಂದಾಗಿ ಸುಧಾರಿತ ಚೇತರಿಕೆಯ ಪ್ರಮಾಣವು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

ರಾಜ್ಯ ಕಾರ್ಯಪಡೆಯ ಸದಸ್ಯ ಶಶಾಂಕ್‌ ಜೋಶಿ ಅವರು ಮಾತನಾಡಿ, ಹೆಚ್ಚುತ್ತಿರುವ ಚೇತರಿಕೆ ದರದ ಹಿಂದೆ ಎರಡು ಪ್ರಮುಖ ಕಾರಣಗಳಿರಬಹುದು. ಮುಂಬಯಿಗರ ರೋಗನಿರೋಧಕ ಶಕ್ತಿ ಉತ್ತಮವಾಗಿದ್ದು, ಇದು ಇತ್ತೀಚೆಗೆ ನಡೆಸಿದ ಸಿರೊ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಚೇತರಿಸಿಕೊಂಡ ವ್ಯಕ್ತಿಗಳನ್ನು ಗುರುತಿಸಲು ಮತ್ತು ಸೋಂಕು ಹರಡುವಿಕೆಯನ್ನು ಅಂದಾಜು ಮಾಡಲು ಜುಲೈ 3ರಂದು ಬಿಎಂಸಿಯಿಂದ ಆರ್‌ ನಾರ್ತ್‌ ವಾರ್ಡ್‌ನ ದಹಿಸರ್‌, ಎಂ-ವೆಸ್ಟ್‌ ವಾರ್ಡ್‌ನ ಚೆಂಬೂರು ಮತ್ತು ಎಫ್‌- ನಾರ್ತ್‌ ವಾರ್ಡ್‌ನ ಸಯಾನ್‌ ವಾರ್ಡ್‌ಗಳ 6,936 ಜನರಸಿರೊ ಸಮೀಕ್ಷೆಯನ್ನು ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.

ಬಿವೈಎಲ್‌ ನಾಯರ್‌ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮಾಧವ್‌ ಸಾಥೆ ಅವರು ಮಾತನಾಡಿ, ಕೋವಿಡ್ ಸೋಂಕು ಆನುವಂಶಿಕ ಬದಲಾವಣೆಗಳ ಮೂಲಕ ಹೋಗುತ್ತದೆ ಎಂದು ಗುರುತಿಸಲಾಗಿದೆ. ಇದು ಒಂದು ರೀತಿಯ ರೂಪಾಂತರವಾಗಿದ್ದು, ಸೋಂಕು ವೇಗವಾಗಿ ಹರಡುತ್ತದೆ. ಆದರೆ ಅದರ ತೀವ್ರತೆಯು ಕಡಿಮೆಯಾಗುತ್ತದೆ. ಹೆಚ್ಚುತ್ತಿರುವ ಚೇತರಿಕೆ ದರದ ಹಿಂದೆ ಇದು ಒಂದು ಅಂಶವಾಗಿರಬಹುದು. ಆದಾಗ್ಯೂ ಶೀಘ್ರವಾಗಿ ಆ್ಯಂಟಿಜೆನ್‌ ಪರೀಕ್ಷೆಯ ಮೂಲಕ ಆರಂಭಿಕ ಪತ್ತೆ ಮತ್ತು ಆರಂಭಿಕ ಚಿಕಿತ್ಸೆಯು ಚೇತರಿಕೆ ಹೆಚ್ಚಿಸಲು ಮತ್ತು ಮರಣ ಪ್ರಮಾಣವನ್ನು ತಗ್ಗಿಸಲು ಪ್ರಮುಖವಾಗಬಹುದು. ತಜ್ಞರು ಮುಂದೆ ಆನುವಂಶಿಕ ಬದಲಾವಣೆಗಳನ್ನು ತಿಳಿಯಲು ಸಂಶೋಧನಾ ಅಧ್ಯಯನವನ್ನು ನಡೆಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಭವಿಷ್ಯದ ಸಾರ್ವಜನಿಕ ಆರೋಗ್ಯ ನೀತಿಗಳನ್ನು ರೂಪಿಸಬೇಕು ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next