Advertisement

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

02:42 PM Jul 27, 2024 | Team Udayavani |

ಮುಂಬಯಿ: ದಿನ ಬೆಳಗಾದರೆ ಜನ ಮೊದಲು ಎದ್ದು ನೋಡುವುದು ಮೊಬೈಲ್… ಅದು ಗಂಟೆ ನೋಡಲು ಆಗಿರಬಹುದು ಅಥವಾ ಬೇರೆಯಾವುದೇ ವಿಚಾರಗಳೂ ಆಗಿರಬಹುದು ಆಮೇಲೆ ಉಳಿದ ಕೆಲಸ, ಹಾಗಾಗಿ ಮೊಬೈಲ್ ಗೀಳು ಎಲ್ಲರ ಮೇಲೂ ಪ್ರಭಾವ ಬೀರಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

Advertisement

ಇದರ ಬೆನ್ನಲ್ಲೇ ಯುವಕ, ಯುವತಿಯರಲ್ಲಿ ರೀಲ್ಸ್ ಹುಚ್ಚಾಟ ಹೆಚ್ಚಾಗತೊಡಗಿದೆ ತಾವು ಹೋದಲ್ಲೆಲ್ಲಾ ಸಣ್ಣ ಸಣ್ಣ ವಿಡಿಯೋ ಕ್ಲಿಪ್ಪಿಂಗ್ಸ್ ಮಾಡಿ ಅಪ್ ಲೋಡ್ ಮಾಡುವುದು ಅಥವಾ ಬೇರೆ ರೀಲ್ಸ್ ಗಳನ್ನು ನೋಡುವುದರಲ್ಲೇ ಹೆಚ್ಚಿನ ಸಮಯಗಳನ್ನು ಕಳೆಯುತ್ತಾರೆ, ಇನ್ನೂ ಕೆಲವರು ರೀಲ್ಸ್ ಗಾಗಿ ತಮ್ಮ ಜೀವವನ್ನೇ ಅಪಾಯಕ್ಕೆ ಸಿಲುಕಿಸಿದ್ದೂ ಉಂಟು ಇದಕ್ಕೆ ಒಂದು ಉದಾಹರಣೆ ಮುಂಬೈ ಮೂಲದ ಫರ್ಹಾತ್ ಎಂಬ ಯುವಕ.

ಈತನಿಗೆ ರೀಲ್ಸ್ ಮಾಡುವ ಹುಚ್ಚು ಅದರಂತೆ ತನ್ನದೇ ಆದ ಅಕೌಂಟ್ ಕ್ರಿಯೇಟ್ ಮಾಡಿ ಅದರಲ್ಲಿ ಅನೇಕ ರೀಲ್ಸ್ ಗಳನ್ನು ಅಪ್ ಲೋಡ್ ಮಾಡುತ್ತಿದ್ದ ಇತ್ತೀಚಿನ ದಿನಗಳಲ್ಲಿ ಆತನ ಒಂದು ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಅದು ಯಾವುದೆಂದರೆ ಚಲಿಸುತ್ತಿರುವ ರೈಲಿನ ಬಾಗಿಲಿನಲ್ಲಿ ನೇತಾಡುವ ವಿಡಿಯೋ. ಇದು ವೈರಲ್ ಆಗುತ್ತಿದ್ದಂತೆ ರೈಲ್ವೆ ಪೊಲೀಸರು ಯುವಕನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಅಲ್ಲದೆ ಆತ ನೆಲೆಸಿರುವ ಪ್ರದೇಶದ ಜಾಡು ಹಿಡುದು ಹೋದ ಪೊಲೀಸರು ಆತನ ಸ್ಥಿತಿಯನ್ನು ಕಂಡು ದಂಗಾಗಿದ್ದಾರೆ.

ಚಲಿಸುತ್ತಿದ್ದ ರೈಲಿನಲ್ಲಿ ರೀಲ್ಸ್ ಮಾಡಲು ಹೋಗಿ ಅಯತಪ್ಪಿ ಬಿದ್ದು ಎಡ ಕೈ, ಎಡ ಕಾಲು ಎರಡನ್ನೂ ಕಳೆದುಕೊಂಡಿರುವ ವಿಚಾರ ಆತನ ಮನೆಗೆ ಭೇಟಿ ನೀಡಿದ ಬಳಿಕ ಪೊಲೀಸರಿಗೆ ಗೊತ್ತಾಗಿದೆ, ಆತನ ಸ್ಥಿತಿಯನ್ನು ಕಂಡ ಪೊಲೀಸರೇ ಶಾಕ್ ಗೆ ಒಳಗಾಗಿದ್ದಾರೆ.

Advertisement

ಅಲ್ಲದೆ ಪೊಲೀಸರ ಬಳಿ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ ಜೊತೆಗೆ ಯಾರೂ ಕೂಡ ಅಪಾಯಕಾರಿ ರೀಲ್ಸ್ ಮಾಡುವ ಹುಚ್ಚಾಟಕ್ಕೆ ಕೈಹಾಕಿ ನಾನು ಅನುಭವಿಸುತ್ತಿರುವ ನರಕಯಾತನೆ ಸಾಕು ನೀವು ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಯುವಕನ ಹೇಳಿಕೆಯನ್ನು ವಿಡಿಯೋ ಮಾಡಿದ ರೈಲ್ವೆ ಪೊಲೀಸರು ‘X’ ನಲ್ಲಿ ಹಂಚಿಕೊಂಡಿದ್ದು ರೈಲುಗಳಲ್ಲಿ ಸಾಹಸ ಪ್ರದರ್ಶನ ಮಾಡುವುದು ಅಪಾಯದ ಜೊತೆಗೆ ನಿಷಿದ್ಧ, ಒಂದು ವೇಳೆ ಇಂತಹ ತಪ್ಪು ಕೆಲಸಕ್ಕೆ ಕೈ ಹಾಕಿದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸಂದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next