ನೋಂದಣಿ ಕೆಲಸವನ್ನು ನಿರ್ವಹಿಸಬೇಕಾದ ಮೂಲ್ಕಿ ಉಪ ನೋಂದಣಾಧಿಕಾರಿ ಕಚೇರಿ ಸರಕಾರಕ್ಕೆ ಅತಿ ಹೆಚ್ಚು ಕಂದಾಯ ತಂದುಕೊಡುತ್ತಿದ್ದರೂ, ಕಂಪ್ಯೂಟರ್ ಹಾಗೂ ಇತರ ಸಮಸ್ಯೆಗಳಿಂದಾಗಿ ಹಲವು ಸಲ ಸೇವೆಯಲ್ಲಿ ವ್ಯತ್ಯಯವಾಗಿ ಜನರ ಪರದಾಟಕ್ಕೂ ಕಾರಣವಾಗುತ್ತಿದೆ.
Advertisement
ನೋಂದಣಿಯ ಎಲ್ಲ ಕೆಲಸಗಳನ್ನು ಕಂಪ್ಯೂಟರೀಕರಣ ಮಾಡಲಾಗಿದ್ದು, ಹೊರಗುತ್ತಿಗೆ ಆಧಾರದಲ್ಲಿ ದುಡಿಯುವಸಿಬಂದಿ ಮೂಲಕ ಬಹುತೇಕವಾಗಿ ನಿರ್ವಹಿಸಲಾಗುತ್ತಿದೆ.
ಅತ್ಯಂತ ಹಳೆಯದಾಗಿರುವ ಈ ಕಟ್ಟಡ ಬಗ್ಗೆ ಇಲಾಖೆ ಪೂರ್ಣ ನಿರ್ಲಕ್ಷ್ಯ ವಹಿಸಿರುವ ಪರಿಣಾಮ, ಈ ಕಚೇರಿ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಎರಡು ವರ್ಷಗಳಿಂದ ಇಲ್ಲಿ ತಾಂತ್ರಿಕ ತೊಂದರೆಗಳು ಆಗಾಗ ಎದುರಾಗುತ್ತಿದ್ದು, ಸಾರ್ವಜನಿಕರಿಗೆ ಸೇವೆಯಲ್ಲಿ ಆಗುತ್ತಿರುವ ವ್ಯತ್ಯಯದಿಂದ ಸಾಬೀತಾಗಿದೆ.
Related Articles
Advertisement
ಸರದಿಯಲ್ಲಿ ನಿಲ್ಲಬೇಕುಸಿಬಂದಿ ಎಷ್ಟು ಕ್ರಿಯಾಶೀಲರಾದರೂ ಕಂಪ್ಯೂಟರ್ ಕೆಟ್ಟು ಹೋಯಿತೆಂದರೆ ಸರದಿಯಲ್ಲಿ ನಿಂತವರ ಕಥೆ ದೇವರಿಗೇ ಪ್ರೀತಿ ಎಂಬಂತಾಗುತ್ತದೆ. ನೋಂದಣಿ ಶುಲ್ಕದ ರೂಪದಲ್ಲಿ ಇಲಾಖೆಗೆ ನಿತ್ಯ ಲಕ್ಷಗಟ್ಟಲೆ ಆದಾಯ ಬರುತ್ತದೆ. ಅದರಲ್ಲಿ ಒಂದಂಶವನ್ನೂ ಕಚೇರಿಯ ಸೌಲಭ್ಯಗಳ ಹಾಗೂ ಆಡಳಿತ ವ್ಯವಸ್ಥೆಯ ಸುಧಾರಣೆಗೆ ಬಳಸಲು ಹಿಂದೇಟು ಹಾಕುತ್ತಿರುವ ಕಾರಣ ಈ ಬಗೆಯ ಸಮಸ್ಯೆ ಆಗುತ್ತಿದೆ. ಕೂಪನ್ ಪಡೆದು ಸರದಿಯಲ್ಲಿ ನಿಲ್ಲುವವರು ಆಸ್ತಿ ಖರೀದಿ ಅಥವಾ ಮಾರಾಟ ಮಾಡುವವರಿರುತ್ತಾರೆ. ಕೆಲವು ನಿರ್ಧಾರಗಳನ್ನು ರೂಪಿಸಿಕೊಂಡು, ಪೂರ್ವ ತಯಾರಿಯೊಂದಿಗೇ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬಂದಾಗ ಅಥವಾ ಸರದಿಯಲ್ಲಿ ಸಾಕಷ್ಟು ಹೊತ್ತು ನಿಂತ ಮೇಲೆ ಕಂಪ್ಯೂಟರ್ ತೊಂದರೆಯಿಂದ ನೋಂದಣಿ ಸ್ಥಗಿತಗೊಂಡರೆ, ಅವರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ನೇತಾಡುವ ವೈರಿಂಗ್
ಮಳೆ ಬಂದಾಗ ಕಟ್ಟಡ ಸೋರುತ್ತದೆ. ವೈರಿಂಗ್ ಕಿತ್ತು ನೇತಾಡುತ್ತಿದೆ. ಕಂಪ್ಯೂಟರ್ ಬಳಕೆಗೆ ಅರ್ಥಿಂಗ್‌ನಂತಹ ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ, ಕಂಪ್ಯೂಟರ್‌ಗಳು ಆಗಾಗ ಕೆಡುತ್ತಿವೆ. ಎರಡು ವರ್ಷಗಳಿಂದ ಇಂತಹ ಸಮಸ್ಯೆಗಳು ಮರುಕಳಿಸುತ್ತಿದ್ದರೂ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಲ್ಲಿರುವ ಶೌಚಾಲಯ ದುರಸ್ತಿಗೊಳಿಸಿ, ಜನರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕು. ಉತ್ತಮ ಗುಣಮಟ್ಟದ ಸರ್ವರ್ ಒದಗಿಸಿ, ಅದು ಕೈಕೊಟ್ಟಾಗ ಕಾರ್ಯ ನಿರ್ವಹಿಸಲು ಬದಲಿ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ತಾಂತ್ರಿಕ ತಜ್ಞರಿಲ್ಲ
ಕಚೇರಿಯ ಕಂಪ್ಯೂಟರ್ ವ್ಯವಸ್ಥೆಯನ್ನು ಹೊರಗುತ್ತಿಗೆ ವ್ಯವಸ್ಥೆಯ ಮೂಲಕ ಇಲಾಖೆ ನಿರ್ವಹಿಸುತ್ತಿದ್ದು, ಕೆಲವೊಮ್ಮೆ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಾಗ ಇಲ್ಲಿ ತಜ್ಞರು ಲಭ್ಯರಿಲ್ಲದೆ ದೊಡ್ಡ ಪ್ರಮಾಣದ ಸಮಸ್ಯೆಯಾಗುತ್ತಿದೆ. ತತ್‌ಕ್ಷಣ ಮೇಲಧಿಕಾರಿಗಳು ಹಾಗೂ ತಜ್ಞರನ್ನು ಸಂಪರ್ಕಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಮ್ಮ ವ್ಯವಸ್ಥೆಯೊಳಗೆ ಕೆಲಸ ನಿರ್ವಹಿಸುತ್ತೇವೆ. ಎಲ್ಲವೂ ಕಂಪ್ಯೂಟರೀಕರಣ ಆಗಿರುವ ಕಾರಣ, ಮ್ಯಾನ್ಯುವಲ್ ಕೆಲಸ ಮಾಡಲು ಅವಕಾಶ ಇಲ್ಲದೆ ಕೆಲವು ಬಾರಿ ಅಡಚಣೆ ಆಗುತ್ತಿದೆ.
– ಗೋಪಾಲಕೃಷ್ಣ,
ಪ್ರಭಾರ ನೋಂದಣಾಧಿಕಾರಿ ವಿಶೇಷ ವರದಿ