Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನ್ನು ಪರಿವಾರವಾದಿ, ಕುಟುಂಬ ರಾಜಕಾರಣ ಪಕ್ಷ ಎಂದೇ ಪ್ರಧಾನಿ ದೂರುತ್ತಿದ್ದರು. ಈಗ ಅದೇ ಪರಿವಾರವಾದಿ, ಕುಟುಂಬ ರಾಜಕಾರಣ ಪಕ್ಷವನ್ನು ತಬ್ಬಿಕೊಳ್ಳಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
Related Articles
Advertisement
ಆಮ್ ಆದ್ಮಿ ಪಾರ್ಟಿಯನ್ನು ರಾಜ್ಯದಲ್ಲಿ ಸಂಘಟಿಸುವ ಉದ್ದೇಶದಿಂದ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತಲಾ ಐದು ದಿನ ಪ್ರವಾಸ ಮಾಡಲಾಗುವುದು. ಎಲ್ಲಾ ಸೇರೋಣ… ಬನ್ನಿ ಮಾತನಾಡೋಣ ಎಂಬ ಘೋಷವಾಕ್ಯದೊಂದಿಗೆ ಜನರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲಾಗುವುದು. ಉಚಿತವಾಗಿ ಪಕ್ಷದ ಸದಸ್ಯತ್ವ ಆಂದೋಲನ ನಡೆಸಲಾಗುವುದು. ಮುಂದಿನ ಜಿಲ್ಲಾ, ತಾಲೂಕು, ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗುವುದು ಎಂದು ತಿಳಿಸಿದರು.
ದೇಶದಲ್ಲಿನ ಭ್ರಷ್ಟಾಚಾರ, ಲೂಟಿ, ಕೋಮುವಾದದ ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಆಪ್ ಇಂಡಿಯಾ…ಜೊತೆ ಗುರುತಿಸಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಪಂಜಾಬ್, ದೆಹಲಿ ಮಾದರಿಯಂತೆ ಕರ್ನಾಟಕದಲ್ಲೂ ಕೆಲವಾರು ಸ್ಥಾನಗಳಲ್ಲಿ ಸ್ಪರ್ಧೆಗೆ ಅವಕಾಶಕ್ಕೆ ಕೋರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.