ಹೊಸದಿಲ್ಲಿ: ಭಾರತೀಯ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ, ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ಗಿಂತ ಸಿರಿವಂತರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ನ ಮಾತೃಸಂಸ್ಥೆ ಯಾದ “ಮೆಟಾ ಪ್ಲಾಟ್‌ಫಾರ್ಮ್ ಇಂಕ್’ ಕಂಪೆನಿಯು ಗುರು ವಾರ ಒಂದೇ ದಿನ ಷೇರು ಮಾರುಕಟ್ಟೆಯಲ್ಲಿ 2.1 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ. ಅದರ ಪರಿಣಾಮ, ಫೋರ್ಬ್ಸ್ ಮೆಟಾ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ರವರ ಒಟ್ಟು ಆಸ್ತಿ ಮೌಲ್ಯ 6.34 ಲಕ್ಷ ಕೋಟಿ ರೂ.ಗಳಿಗೆ ಇಳಿದಿದೆ. ಈ ಮೂಲಕ ಅವರು, “ಫೋರ್ಬ್ಸ್ ರಿಯಲ್ ಟೈಂ’ ಸಿರಿವಂತರ ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದನ್ನೂ ಓದಿ:ಪರಿಸರ ರಕ್ಷಣೆ ತುರ್ತು ಆದ್ಯತೆಯಾಗಲಿ: ಸಿಎಂ ಬಸವರಾಜ ಬೊಮ್ಮಾಯಿ
ಆದರೆ ಈ ಪಟ್ಟಿಯಲ್ಲಿ ಇವರಿಗಿಂತ ಮೇಲಿನ ಸ್ಥಾನಗಳಲ್ಲಿ ಭಾರತದ ಗೌತಮ್ ಅದಾನಿ, ಮುಕೇಶ್ ಅಂಬಾನಿ ಇದ್ದಾರೆ. 7.1 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಅದಾನಿ 10ನೇ ಸ್ಥಾನದಲ್ಲಿದ್ದರೆ, 6.6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿ ರುವ ಮುಕೇಶ್ ಅಂಬಾನಿ 11ನೇ ಸ್ಥಾನದಲ್ಲಿದ್ದಾರೆ. ಅಲ್ಲಿಗೆ ಮಾರ್ಕ್ ಝುಕರ್‌ಬರ್ಗ್‌ಗಿಂತ ಭಾರತದ ಇಬ್ಬರು ಉದ್ಯಮಿ ಗಳು ಶ್ರೀಮಂತರೆನಿಸಿದ್ದಾರೆ.
ಈ ಸಾಧನೆಯ ಮೂಲಕ ಗೌತಮ್ ಅದಾನಿ ಅವರು ಏಷ್ಯಾದ ಅತೀ ಸಿರಿವಂತ ಉದ್ಯಮಿಯೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.