Advertisement

Zaid Khan: ʼಕಲ್ಟ್‌ʼ ಚಿತ್ರಕ್ಕೆ ಮುಹೂರ್ತ; ಝೈದ್‌ ಖಾನ್‌ ಗೆ ರಚಿತಾ ನಾಯಕಿ

03:51 PM Sep 09, 2024 | Team Udayavani |

ಝೈದ್‌ ಖಾನ್‌ ನಾಯಕರಾಗಿ ನಟಿಸುತ್ತಿರುವ “ಕಲ್ಟ್’ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಅನಿಲ್‌ ಕುಮಾರ್‌ ಅವರ ಶ್ರೀಮತಿ ಆರಂಭ ಫ‌ಲಕ ತೋರಿದರು. ಝೈದ್‌ ಖಾನ್‌ ಅವರ ಅಜ್ಜಿ ಕ್ಯಾಮೆರಾ ಚಾಲನೆ ಮಾಡಿದರು.

Advertisement

ಅನಿಲ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಲೋಕಿ ಸಿನಿಮಾಸ್‌ ನಿರ್ಮಿಸುತ್ತಿದೆ. ಚಿತ್ರದಲ್ಲಿ ನಾಯಕಿಯರಾಗಿ ರಚಿತಾ ರಾಮ್‌ ಹಾಗೂ ಮಲೈಕಾ ನಟಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ಅಚ್ಯುತ ಕುಮಾರ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಮುಹೂರ್ತ ವೇಳೆ ಮಾತನಾಡಿದ ನಿರ್ದೇಶಕ ಅನಿಲ್‌, ಯವಜನತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರಕ್ಕೆ ಕಲ್ಟ್ ಎಂದು ಶೀರ್ಷಿಕೆಯಿಟ್ಟಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಜೆ.ಎಸ್‌ ವಾಲಿ ಛಾಯಾಗ್ರಹಣ, ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್‌ ಸಂಕಲನ, ರವಿವರ್ಮ ಸಾಹಸ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next