ಬೆಳ್ತಂಗಡಿ: ಅವಿಭಜಿತ ದ.ಕ.ಜಿಲ್ಲೆ ಪರಶುರಾಮ ಸೃಷ್ಟಿಯ ನಾಡಿನಲ್ಲಿ ಕೊರಗಜ್ಜ ದೈವದ ಆಶೀರ್ವಾದದೊಂದಿಗೆ ಮೂಡಿ ಬರುತ್ತಿರುವ ಸಿನಿಮಾ ಬೆಳ್ತಂಗಡಿ ಕ್ಷೇತ್ರದಲ್ಲಿ ಮುಹೂರ್ತ ನೆರವೇರಿರುವುದು ಹರ್ಷ ತಂದಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲಂಸ್ ತ್ರಿವಿಕ್ರಮ್ ಬೆಳ್ತಂಗಡಿ ಅರ್ಪಿಸುವ ʼಕರಿಹೈದ ಕರಿ ಅಜ್ಜʼ ಚಲನಚಿತ್ರಕ್ಕೆ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿ ಮಾತನಾಡಿದರು.
ಮೂರು ಭಾಷೆಯಲ್ಲಿ ಯಶಸ್ವಿಯಾಗಲಿ. ತುಳುನಾಡಿನ ಮಂದಿ ದಕ್ಷಿಭಾರತದಲ್ಲಿ ಹೆಸರುವಾಸಿಯಾಗಿದ್ದರು. ಆದರೆ ಕಾಂತಾರ ಸಿನೆಮಾದ ಮೂಲಕ ನಮ್ಮ ಸಂಸ್ಕೃತಿಯನ್ನು ಗೌರವಿಸಿದ್ದಾರೆ. ಹಾಗೆಯೇ ಕರಿಅಜ್ಜ ಚಲನಚಿತ್ರ ಜಗತ್ತಿನಾದ್ಯಂತ ಪಸರಿಸಲಿ ಎಂದು ಹಾರೈಸಿದರು.
ಶಾಸಕ ಹರೀಶ್ ಪೂಂಜ ಕ್ಯಾಮರಾ ಚಾಲನೆ ನೀಡಿದರು. ಕಮಲಾ ಸಪಲ್ಯ ಕ್ಲಾಪ್ ಮಾಡಿದರು. ಸಿನೆಮಾ ಕನ್ನಡ, ತುಳು, ಮಳೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ಕನ್ನಡದ ಹೆಸರಾಂತ ನಟಿಯರಾದ ತಾರಾ ಅನುರಾಧ, ಭವ್ಯಾ, ಹಾಲಿವುಡ್ ನಟ ಕಬೀರ್ ಬೇಡಿ ನಟಿಸಲಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಬಂಗಾಡಿ ಎರ್ಮಾಯಿ ಫಾಲ್ಸ್, ಬಳ್ಳಮಂಜದ ಪೇರೂರು ಹಾಗೂ ಇತರೆಡೆ ಶೂಟಿಂಗ್ ನಡೆಯಲಿದ್ದು, ಡಿಸೆಂಬರ್ ಒಳಗಾಗಿ ಚಲನಚಿತ್ರ ಪೂರ್ಣಗೊಂಡು ಮುಂದಿನ ಏಪ್ರಿಲ್ ನಲ್ಲಿ ತೆರೆಕಾಣಲಿದೆ ಎಂದು ನಿರ್ಮಾಪಕ ತ್ರಿವಿಕ್ರಮ್ ಉದಯವಾಣಿಗೆ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಅನುವಂಶಿಯ ಆಡಳಿತ ಮೊಕ್ತೇಸರ ಡಾ.ಎಂ.ಹರ್ಷ ಸಂಪಿಗೆತ್ತಾಯ, ಕಮಲಾ ಸಪಲ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಮಚ್ಚಿನ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ವಿದ್ಯಾಧರ ಶೆಟ್ಟಿ, ನಿರ್ದೇಶಕ ಸುಧೀರ್ ಅತ್ತಾವರ,
ನಟ ಭರತ್ ಸೂರ್ಯ, ನಟಿ ರಿತಿಕಾ, ಮಾಸ್ಟರ್ ಹರಿ, ಅಸೋಸಿಯೇಟ್ ಡೈರೆಕ್ಟರ್ ಮಧು ಮತ್ತು ಶ್ಯಾಮ್, ಸಿನಿಮಾಟೋಗ್ರಾಫರ್ ಪವನ್ ಕುಮಾರ್, ಗಣೇಶ್ ಕೆಳಮನೆ, ಮ್ಯಾನೇಜರ್ ಶಶಾಂಕ್ ಕೋಡಿ, ಸಂಗೀತ ಕೃಷ್ಣ ರವಿದಾಸ್ ಉಪಸ್ಥಿರಿದ್ದರು. ಚೇತನ್ ನಿರೂಪಿಸಿದರು.