Advertisement

Karnataka: ಮೂರು ಗ್ಯಾರಂಟಿಗಳಿಗೆ ಮುಹೂರ್ತ ನಿಗದಿ

10:07 PM Jun 11, 2023 | Team Udayavani |

ಬೆಂಗಳೂರು: ಮೊದಲ ಯೋಜನೆ ಅನುಷ್ಠಾನಗೊಂಡ ಬೆನ್ನಲ್ಲೇ ಇನ್ನೂ ಮೂರು ಗ್ಯಾರಂಟಿಗಳಿಗೆ ಮುಹೂರ್ತ ನಿಗದಿಯಾಗಿದೆ.

Advertisement

ಜುಲೈ 1ರಂದು 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸುವ “ಗೃಹ ಜ್ಯೋತಿ’ ಮತ್ತು ಮಾಸಿಕ ತಲಾ ಹತ್ತು ಕೆಜಿವರೆಗೆ ಅಕ್ಕಿ ವಿತರಿಸುವ “ಅನ್ನಭಾಗ್ಯ” ಜಾರಿಗೊಳಿಸಲಾಗುವುದು. ಇದರ ಬೆನ್ನಲ್ಲೇ ಬಹುತೇಕ ಆಗಸ್ಟ್‌ 16ರಂದು ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ “ಗೃಹಲಕ್ಷ್ಮೀ” ಗ್ಯಾರಂಟಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ವಿಧಾನಸೌಧ ಆವರಣದಲ್ಲಿ “ಶಕ್ತಿ’ ಯೋಜನೆಗೆ ಚಾಲನೆ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯ ಯೋಜನೆಯಿಂದ ವಾರ್ಷಿಕ 10,100 ಕೋಟಿ ರೂ. ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಹಿಂದಿನ ಒಂದು ವರ್ಷದ ಸರಾಸರಿ ಬಳಕೆ ಆಧರಿಸಿ ಗೃಹಬಳಕೆದಾರರ ವಿದ್ಯುತ್‌ ಸರಾಸರಿ ತೆಗೆಯಲಾಗಿದೆ. ಅದರಂತೆ ಒಂದು ಕುಟುಂಬ 70 ಯೂನಿಟ್‌ ಉಪಯೋಗಿಸುತ್ತದೆ. ಅದರ ಮೇಲೆ ಶೇ.10ರಷ್ಟು ಹೆಚ್ಚುವರಿ ಉಪಯೋಗಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರತಿಪಕ್ಷಗಳು 200 ಯೂನಿಟ್‌ ಪೂರ್ಣ ನೀಡಿಲ್ಲ ಎಂದು ವಾದಿಸುತ್ತಿವೆ. ಸರ್ಕಾರ ನಡೆಸಿದವರು ಆಡುವ ಮಾತುಗಳೇ ಇವು ಎಂದು ತರಾಟೆಗೆ ತೆಗೆದುಕೊಂಡರು.

ಗೃಹ ಜ್ಯೋತಿ ಯೋಜನೆ ಜುಲೈ 1ರಂದು ಚಾಲನೆ ನೀಡುವುದರಿಂದ ಆಗಸ್ಟ್‌ 1ರಿಂದ ವಿತರಣೆಯಾಗುವ ಬಿಲ್‌ ಮೂಲಕ ಗ್ರಾಹಕರಿಗೆ ಇದರ ಲಾಭ ಸಿಗಲಿದೆ. ಇನ್ನು ಯುವನಿಧಿ ಅಡಿ 2022-23ನೇ ಸಾಲಿನ ಪದವೀಧರರು ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಪೂರೈಸಿದವರಿಗೆ ಕ್ರಮವಾಗಿ ಮಾಸಿಕ 3 ಸಾವಿರ ಹಾಗೂ 1,500 ರೂ.ಗಳನ್ನು 24 ತಿಂಗಳು ಮಾತ್ರ ಸಹಾಯಧನ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next