Advertisement

ಇಂದಿನಿಂದ ಮುಡುಕುತೊರೆ ಮಲ್ಲಿಕಾರ್ಜುನ ಜಾತ್ರೆ

07:09 AM Feb 08, 2019 | |

ತಿ.ನರಸೀಪುರ: ತಾಲೂಕಿನ ಸೋಮಶೈಲ ಕ್ಷೇತ್ರವಾದ ಮುಡುಕುತೊರೆಯಲ್ಲಿ ಫೆ.14ರ ಗುರುವಾರ ಮಧ್ಯಾಹ್ನ ಭ್ರಮರಾಂಬಿಕ ಸಮೇತ ಮಲ್ಲಿಕಾರ್ಜುನಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಫೆ.17ರ ಭಾನುವಾರ ರಾತ್ರಿ ತೆಪ್ಪೋತ್ಸವ ಜರುಗಲಿದೆ.

Advertisement

ಮುಡುಕುತೊರೆಯಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭ್ರಮರಾಂಬ ದೇವಾಲಯದಲ್ಲಿ ಮಾಘಶುದ್ಧ ತೃತೀಯ ಮಾಸದ, ಶತಬಿಷ ನಕ್ಷತ್ರದ ದಿವಸ ಅಂಕುರಾರ್ಪಣೆಯೊಂದಿಗೆ ಜಾತ್ರಾ ಮಹೋತ್ಸವ ವಿಧ್ಯುಕ್ತವಾಗಿ ಆರಂಭಗೊಳ್ಳಲಿದ್ದು, 8ರಂದು ಶುಕ್ರವಾರ ಧ್ವಜಾರೋಹಣ, 9ರಂದು ಶನಿವಾರ ಚಂದ್ರ ಮಂಡಲಾರೋಹಣ, 10ರ ಭಾನುವಾರ ಅನಂತ ಪೀಠಾರೋಹಣ, 11ರ ಸೋಮವಾರ ಪುಷ್ಪ ಮಂಟಪಾರೋಹಣ, 12ರ ಮಂಗಳವಾರ ವೃಷಭಾರೋಹಣ ಹಾಗೂ 13ರ ಗಿರಿಜಾ ಕಲ್ಯಾಣ, ಗಜಾರೋಹಣ ನಡೆಯಲಿದೆ.

ನಾಮ ಸಂವಬತ್ಸರದ ಮಾಘಶುದ್ಧ ನಮ ರೋಣಿ ನಕ್ಷತ್ರ ದಿನವಾದ ಫೆ.14ರ ಗುರುವಾರ ಭ್ರಮರಾಂಬಿಕ ಸಮೇತ ಮಲ್ಲಿಕಾರ್ಜುನಸ್ವಾಮಿ ಬ್ರಹ್ಮರಥೋತ್ಸವ, 15ರಂದು ಚಿತ್ರರಥ, ಶಯನೋತ್ಸವ, 16ರಂದು ತೀರ್ಥ ಸ್ನಾನೋತ್ಸವ, ಪಲ್ಲಕ್ಕಿ ಉತ್ಸವ, 17ರಂದು ತೆಪ್ಪೋತ್ಸವ, 18ರಂದು ಮರಿ ತೆಪ್ಪೋತ್ಸವ, 19ರಂದು ಕೈಲಾಸ ವಾಹನೋತ್ಸವ, 20ರಂದು ಮಂಟಪೋ ತ್ಸವಗಳು, 22ರಂದು ಪರ್ವತಮ ಪರಿಷೆ ಹಾಗೂ 23ರಂದು ಮಹಾಭಿಷೇಕ, ಶೆಟ್ಟರ ಸೇವೆ ಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಜಾನುವಾರು ಜಾತ್ರೆ: ಜಾತ್ರೆ ಪ್ರಯುಕ್ತ ಜಾನುವಾರುಗಳ ಜಾತ್ರೆ ಹಾಗೂ ರಾಸುಗಳ ಪರಿಷೆ ಆರಂಭಗೊಳ್ಳಲಿದ್ದು, ಮುಡುಕು ತೊರೆಯತ್ತ ಜಾನುವಾರುಗಳು ಹೆಜ್ಜೆಯನ್ನಿಟ್ಟು ಬರುತ್ತಿವೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ಇನ್ನಿತರ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next