Advertisement

ಉದ್ದಿಮೆ ಕನಸಿಗೆ ಮುದ್ರಾ : ಯಾವ ಬ್ಯಾಂಕ್‌ಗಳಲ್ಲಿ ಸಾಲ ಲಭ್ಯ

12:57 AM Jul 04, 2022 | Team Udayavani |

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿಯೇ ಇರುವುದಿಲ್ಲ. ಎಷ್ಟೋ ಯೋಜನೆಗಳು ಮಾಹಿತಿ ಇದ್ದವರ ಅಥವಾ ಪ್ರಭಾವಿಗಳ ಪಾಲಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಅಗತ್ಯವಿರುವ ಜನರಿಗೆ ಈ ಮಾಹಿತಿಗಳು ತಲುಪುವುದೇ ಇಲ್ಲ. ಅರ್ಹರಿಗೆ ವಿವಿಧ ಯೋಜನೆಗಳ ಪ್ರಯೋಜನ ಸಿಗಬೇಕೆನ್ನುವ ಉದ್ದೇಶದಿಂದ “ಪ್ರಯೋಜನ’ ಅಂಕಣ ಆರಂಭಿಸಲಾಗಿದೆ.

Advertisement

ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ದೇಶದ ಕೃಷಿಯೇತರ ಮತ್ತು ಕಾರ್ಪೋರೆಟ್‌ ಅಲ್ಲದ ಸೂಕ್ಷ್ಮ, ಸಣ್ಣ ವ್ಯವಹಾರ ವ್ಯಾಪಾರ ಘಟಕಗಳ ಅಭಿವೃದ್ಧಿ ಹಾಗೂ ಅವುಗಳಿಗೆ ಆರ್ಥಿಕ ನೆರವು ನೀಡಲು ಆರಂಭಿಸಲಾದ ಕೇಂದ್ರ ಸರಕಾರದ ಯೋಜನೆಯೇ ಮುದ್ರಾ. ಇದರ ಉದ್ದೇಶ- ಸೂಕ್ಷ¾ ಮತ್ತು ಸಣ್ಣ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಮಾಡುವುದು. ಕೊಡುವ ಸಾಲದ ಪ್ರಮಾಣದ ಆಧಾರದ ಮೇಲೆ ಮುದ್ರಾ ಯೋಜನೆಯನ್ನು ಶಿಶು, ಕಿಶೋರ, ತರುಣ ಸಾಲ ಎಂದು 3 ಭಾಗಗಳಿವೆ.

ಯಾವ ಬ್ಯಾಂಕ್‌ಗಳಲ್ಲಿ ಸಾಲ ಲಭ್ಯ
ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಕೋ ಆಪರೇಟಿವ್‌ ಬ್ಯಾಂಕ್‌ಗಳು, ಕಿರು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೂಲಕ ಸಾಲ ವಿತರಿಸಲಾಗುತ್ತದೆ.

ಸಾಲ ಪಡೆಯಲು ಯಾರು ಅರ್ಹರು
ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳು, ಹಣ್ಣು ಮತ್ತು ತರಕಾರಿ ಮಾರಾಟಗಾರರು, ವ್ಯಾಪಾರಿಗಳು, ಅಂಗಡಿಯವರು, ಇತರ ಸೇವಾ ವಲಯದ ಚಟುವಟಿಕೆಗಾಗಿ ವ್ಯಾಪಾರ ಸಾಲ, ಸಾರಿಗೆ ವಾಹನಗಳ ಖರೀದಿಗೆ ಸಾಲ (ವಾಣಿಜ್ಯ ಬಳಕೆಗೆ ಮಾತ್ರ), ಕುಶಲಕರ್ಮಿ ಗಳು, ಕೃಷಿ ಸಂಬಂಧಿತ, ಕೃಷಿಯೇತರ ಆದಾಯದ ಚಟುವಟಿಕೆಗಳಿಗೆ ಸಾಲ (ಜಾನುವಾರು ಸಾಕಣೆದಾರರು, ಕೋಳಿ ಮತ್ತು ಮೀನುಸಾಕಣೆ ಇತ್ಯಾದಿ).

ದಾಖಲೆಗಳೇನು ಬೇಕು?
– 2 ಪಾಸ್‌ಪೋರ್ಟ್‌ ಸೈಜ್‌ ಫೋಟೊ
– ಸರಕಾರಿ ಗುರುತಿನ ಚೀಟಿ
– ವಿಳಾಸ ಕುರಿತ ದಾಖಲೆ
– ಆದಾಯ ಪ್ರಮಾಣ ಪತ್ರ
– ಆರು ತಿಂಗಳ ಬ್ಯಾಂಕ್‌ ಖಾತೆ ವಿವರ

Advertisement

ವಯೋಮಿತಿ : 18 65 ವರ್ಷಗಳು
ಬಡ್ಡಿ : 7.30% (ವಾರ್ಷಿಕ ಬಡ್ಡಿ)
ಸಾಲ ಮರು ಪಾವತಿ : 5 ವರ್ಷ

ಅರ್ಜಿ ಸಲ್ಲಿಕೆ ಹೇಗೆ

(www.udyamimitra.in) ಭೇಟಿ ನೀಡಿ ನಿಮಗೆ ಯಾವ ವಿಭಾಗದಲ್ಲಿ ಸಾಲ ಬೇಕೋ ಅದರಲ್ಲಿ ಭರ್ತಿ ಮಾಡಿ, ಅಗತ್ಯವಿರುವ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಬ್ಯಾಂಕ್‌ಗಳಲ್ಲಿ ಸಲ್ಲಿಸುವುದು.

– ನಾಗಪ್ಪ

Advertisement

Udayavani is now on Telegram. Click here to join our channel and stay updated with the latest news.

Next