Advertisement

Mudipinadka-ಸುಳ್ಯಪದವು: ರಸ್ತೆ ಹೊಂಡ ತಪ್ಪಿಸುವುದೇ ಸಾಹಸ!

04:31 PM Oct 23, 2024 | Team Udayavani |

ಬಡಗನ್ನೂರು: ಮುಡಿಪಿನಡ್ಕ -ಸುಳ್ಯಪದವು ಲೋಕೋಪಯೋಗಿ ರಸ್ತೆಯ ಮೈಂದನಡ್ಕ, ಪಳ್ಳತ್ತಾರು ಹಾಗೂ ಕನ್ನಡ್ಕ ಭಾಗದಲ್ಲಿ ದೊಡ್ಡ ಗಾತ್ರದ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಭಾರೀ ಸಮಸ್ಯೆಯಾಗುತ್ತಿದೆ.

Advertisement

ಎರಡು ವರ್ಷದ ಹಿಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಮೈಂದನಡ್ಕದಿಂದ ಕನ್ನಡ್ಕ ದವರೆಗೆ ಸುಮಾರು 2.5 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದ್ದರೂ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಅಂದು ಮೈಂದನಡ್ಕದಿಂದ ಪದಡ್ಕ ವರೆಗೆ ಕಾಂಕ್ರೀಟ್‌ ರಸ್ತೆ ಮಾಡಲಾಗಿತ್ತು. ಅದರೆ ಕಳಪೆ ಕಾಮಗಾರಿ ನಡೆದು ದರಿಂದ ಒಂದೇ ವರ್ಷದಲ್ಲಿ ಕಾಂಕ್ರೀಟ್‌ನ ಬೇಬಿ ಜಲ್ಲಿ ಹಾಗೂ ಮರಳು ಎದ್ದು ಹೋಗಿತ್ತು. ದುರಸ್ತಿ ಕಾರ್ಯ ನಡೆದಿತ್ತಾದರೂ ಅದು ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂದು ರಸ್ತೆ ಬಳಕೆದಾರರು ದೂರಿದ್ದಾರೆ.

ಈ ಪ್ರದೇಶದಲ್ಲಿ ಒಂದುಷ್ಟು ಉದ್ದಕ್ಕೆ ರಸ್ತೆ ಅರಣ್ಯ ಭಾಗದಲ್ಲಿದ್ದು ಇಲ್ಲಿ ರಸ್ತೆಯಲ್ಲಿ ದೊಡ್ಡ ದೊಡ್ಡ ಗಾತ್ರದ ಹೊಂಡ ಸೃಷ್ಟಿಯಾಗಿದೆ.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣ ಗೊಂಡರೂ ಗುತ್ತಿಗೆದಾರರು ಮುಂದಿನ 5 ವರ್ಷದ ವರೆಗೆ ರಸ್ತೆ ನಿರ್ವಹಣೆ ಮಾಡಬೇಕು ಎಂಬ ಷರತ್ತು ಇದೆಯಾದರೂ 2 ವರ್ಷಗಳಿಂದ ರಸ್ತೆ ದುರಸ್ತಿ ಮಾಡಿಲ್ಲ ಎಂದಿರುವ ಸ್ಥಳೀಯರು ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ
ಅಗ್ರಹಿಸಿದ್ದಾರೆ. ರಸ್ತೆ ಬದಿ ಕಳೆ ಗಿಡಗಳು ಕೆಲವೆಡೆ ರಸ್ತೆಯವರೆಗೂ ಬೆಳೆದಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರೂ ಇದೆ.

Advertisement

ಹಕ್ಕೊತ್ತಾಯ ಆರಂಭ
ಕೋಟಿ ಚೆನ್ನಯರ ಹುಟ್ಟೂರು ಪಡುಮಲೆ ಐತಿಹಾಸಿಕ ತಾಣವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಕಾರಣ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವಂತೆಯೂ ಜನರ ಹಕ್ಕೊತ್ತಾಯ ಆರಂಭವಾಗಿದೆ.

ರಸ್ತೆ ವಿಸ್ತರಣೆ ಅಗತ್ಯ
ಮುಡಿಪಿನಡ್ಕ- ಮೈಂದನಡ್ಕ ರಸ್ತೆ ರಸ್ತೆ ಅಗಲಕಿರಿದಾಗಿದ್ದು ಎರಡು ಘನವಾಹನ ಎದುರು ಬದುರಾದಾಗ ಚಾಲಕರು ವಾಹನ ಚಲಾಯಿಸಲು ಪರದಾಡುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ಲೋಕೋಪಯೋಗಿ ಇಲಾಖಾಧಿಕಾರಿಗಳು ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆಯೂ ಜನ ಆಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next