Advertisement
ಚರಂಡಿ ವ್ಯವಸ್ಥೆಯೂ ಇಲ್ಲಮುಡಿಪಿರೆ – ದೇವರಗುಂಡಿ ರಸ್ತೆ ಪಂಚಾಯತ್ ರಸ್ತೆಯಾಗಿದ್ದು ಈ ರಸ್ತೆ ಅಭಿವೃದ್ಧಿ ಕಂಡಿಲ್ಲ. ಈ ಭಾಗದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿದ್ದು ಮಚ್ಚಿನ ನಾಳ ಸಂಪರ್ಕ ರಸ್ತೆಯಾಗಿದ್ದು ಮಚ್ಚಿನ ರೇಷ್ಮೆ ರೋಡ್ ಮೂಲಕ ಒಡಿಳ್ನಾಲವನ್ನು ಸಂಪರ್ಕ ಮಾಡಬಹುದು. ಮಚ್ಚಿನದಿಂದ ಮುಡಿಪಿರೆವರೆಗೆ ಮಾತ್ರ ಡಾಮರು ರಸ್ತೆ ಅನಂತರ ಮಣ್ಣಿನ ರಸ್ತೆಯಾಗಿದ್ದು ರಸ್ತೆ ಬದಿ ಚರಂಡಿ ವ್ಯವಸ್ಥೆ ಇಲ್ಲದೆ ಸಂಪೂರ್ಣ ಹದಗೆಟ್ಟಿದೆ.
ಮಚ್ಚಿನದ ಹಲವೆಡೆ ಎಂಆರ್‌ಪಿಎಲ್, ಎಚ್‌ಪಿಸಿಎಲ್ ಪೈಪ್‌ಲೈನ್ ಹಾದುಹೋಗಿದ್ದು ಅಪಾರ ಹಾನಿಯಾಗಿದೆ. ಈ ಭಾಗದಲ್ಲಿಯೂ ಪೈಪ್ ಲೈನ್ ಹಾದುಹೋಗಿದ್ದು ರಸ್ತೆಯಲ್ಲಿ ಅಡ್ಡವಾಗಿ ಕಣಿವೆ ತೆಗೆಯಲಾಗಿತ್ತು. ಮಳೆಗಾಲದಲ್ಲಿ ಮಣ್ಣು ಮೆದುವಾಗಿ ರಸ್ತೆ ಮಧ್ಯೆ ಹೊಂಡ ನಿರ್ಮಾಣವಾಗುತ್ತಿದೆ. ಪೈಪ್‌ಲೈನ್ ಅಧಿಕಾರಿಗಳು ತಮ್ಮ ಕೆಲಸ ಮುಗಿಸಿ ಹೋಗಿದ್ದಾರೆ ನಮ್ಮ ಅಳಲು ಕೇಳುವವರು ಯಾರೂ ಇಲ್ಲದಾಗಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ದೇವಸ್ಥಾನಕ್ಕೂ ಸಂಬಂಧ
ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವ ಸಂದರ್ಭ ದೇವರ ಗುಂಡಿಗೆ ಜಳಕಕ್ಕೆ ಹೋಗುವ ಪದ್ದತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ದೇವರಗುಂಡಿ ಎಂಬಲ್ಲಿ ಸಣ್ಣ ಬಾವಿಯಿದ್ದು ಅದರಲ್ಲಿ ದೇವರ ಮೂರ್ತಿಯನ್ನು ಜಳಕಮಾಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ. ಈ ಸಮಯದಲ್ಲಿಯೂ ಹದಗೆಟ್ಟ ರಸ್ತೆಯಿಂದಾಗಿ ಭಕ್ತರು ಕಷ್ಟ ಅನುಭವಿಸಬೇಕಾಗುತ್ತದೆ.
Related Articles
ಮಚ್ಚಿನದಿಂದ ಮುಡಿಪಿರೆ ರಸ್ತೆಯಾಗಿ ನಾಳಕ್ಕೆ ಸುಮಾರು 6 ಕಿ.ಮೀ. ಇದ್ದರೆ ಮಡಿಪಿರೆ ಕಟ್ಟದಬೈಲು ರಸ್ತೆಯಾಗಿ ಒಡಿಳ್ನಾಲಕ್ಕೆ 5 ಕಿ.ಮೀ. ದೂರ ಇದೆ. ಇವೆರಡು ರಸ್ತೆಗಳು ಈ ಭಾಗದ ಜನತೆಗೆ ಬೆಳ್ತಂಗಡಿ ತಾಲೂಕು ಕೇಂದ್ರಕ್ಕೆ ತಲುಪಲು ಸಮೀಪದ ರಸ್ತೆಯಾಗಿದೆ.
Advertisement
ಸಂಪರ್ಕ ರಸ್ತೆಗೆ ಬೇಡಿಕೆ ಮಡಿಪಿರೆ, ಪೆಲತ್ತಜೆ, ಪೆರ್ನಡ್ಕ, ದೇವರಗುಂಡಿ, ಎನ್ನೋìಡಿ, ಬೈಕುಡೆ, ಕೋಲಾಜೆ, ಓನಿಯಡ್ಕ ಜನತೆಗೆ ಮುಖ್ಯ
ರಸ್ತೆಯಾಗಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಮಚ್ಚಿನ-ನಾಳ, ಮಚ್ಚಿನ-ಒಡಿಲಾ°ಳ ಸಂಪರ್ಕ ರಸ್ತೆಗೆ ಬೇಡಿಕೆ ಇಟ್ಟಿತ್ತು. ಸಂಸದರ ಅನುದಾನದಲ್ಲಿ ದೇವರಗುಂಡಿ ಬಳಿ ಸೇತುವೆ ನಿರ್ಮಾಣವಾಗಿ ಸುಮಾರು 12 ವರ್ಷ ಕಳೆಯಿತು, ಆದರೆ ರಸ್ತೆಗೆ ಇನ್ನೂ ಡಾಮರು ಕಾಣಲಿಲ್ಲ. ಡಾಮರಿಗೆ ಬೇಡಿಕೆ ಇಟ್ಟಿದ್ದು ಪಂಚಾಯತ್‌ಗೆ ಮನವಿ ನೀಡಲಾಗಿದೆ .
– ಹೆನ್ರಿ ಮೊಂತೆರೋ, ಗ್ರಾ. ಪಂ. ಮಾಜಿ ಸದಸ್ಯ