Advertisement

ಮೂಡಿಗೆರೆ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ; ವಿಡಿಯೋ ವೈರಲ್

03:43 PM Oct 23, 2022 | Team Udayavani |

ಮೂಡಿಗೆರೆ: ಮುಂಬರುವ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಎಲ್ಲ ಪಕ್ಷಗಳಲ್ಲಿ ಹಲವಾರು ಅಭ್ಯರ್ಥಿಗಳು ಕ್ಷೇತ್ರದಾದಂತ ಬಿರುಸಿನ ಪ್ರವಾಸ ಕೈಗೊಂಡಿದ್ದು, ಮಾಜಿ ಸಚಿವೆ ಮೊಟಮ್ಮನವರ ಪುತ್ರಿ ನಯನ ಸಹ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ಹೈಕಮಾಂಡ್ ನಲ್ಲಿ ಸಹ ಪ್ರಭಾವ ಹೊಂದಿದ್ದಾರೆ.

Advertisement

ಕ್ಷೇತ್ರದ್ಯಾಂತ ಸಂಚಾರ ನಡೆಸಿ ಚುನಾವಣೆಗೆ ತಯಾರಿ ನಡೆಸುತ್ತಿರುವ ವಿರುದ್ಧ ಮೂಡಿಗೆರೆಯ ಹಿರಿಯ ಕಾಂಗ್ರೆಸ್ ಮುಖಂಡರ ಒಬ್ಬರ ಮನೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ನ ಪ್ರಮುಖರ ರಹಸ್ಯ ಸಭೆ ನಡೆದಿದ್ದು, ನಯನ ಮೋಟಮ್ಮನವರ ವಿರುದ್ಧ ಪ್ರಮುಖ ನಾಯಕರು ರಣಕಹಳೆ ಊದಿದ್ದಾರೆ.

ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹೈಕಮಾಂಡ್ ಗೂ ನಯನ ಮೊಟ್ಟಮ್ಮರಿಗೆ ಟಿಕೆಟ್ ನೀಡಬಾರದೆಂದು ಸ್ಪಷ್ಟ ಸಂದೇಶ ರವನಿಸಲಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next