ವಿಜಯಪುರ: ಒಡೆದ ನಾಲೆಯ ನೀರು ಜಮೀನಿಗೆ ನುಗ್ಗಿ ಜಮೀನಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ, ಬೆಳೆಯೂ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ ಘಟನೆ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ.
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಹರಿಯುವ ಮುಳವಾಡ ಏತ ನೀರಾವರಿ ಯೋಜನೆ ಕಾಲುವೆಯಿಂದ ನೀರು ಹರಿದು ಈ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೂವಿನಹಿಪ್ಪರಗಿ ಶಾಖಾ ಉಪ ಕಾಲುವೆ ಒಡೆದ ಕಾರಣ ನೀರು ನುಗ್ಗಿದ ಜಮೀನಿನಲ್ಲಿದ್ದ ಜೋಳ, ಕಡಲೆ, ಗೋಧಿ ಬೆಳೆಗೆ ಹಾನಿಯಾಗಿ, ಫಲವತ್ತಾದ ಮಣ್ಣು ಕೂಡಾ ಕೊಚ್ಚಿ ಹೋಗಿದೆ.
ಇದನ್ನೂ ಓದಿ:ಉಸಿರಾಟದ ಸಮಸ್ಯೆ: ಏಮ್ಸ್ ಗೆ ದಾಖಲಾದ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಬಿಜೆಎನ್ ಎಲ್ ಅಧಿಕಾರಿಗಳು ನಾಲೆಯ ನೀರು ತಡೆಯಲು ಮರಳಿನ ಚೀಲಗಳನ್ನು ಹಾಕಿ, ಹೆಚ್ಚಿನ ಪ್ರಮಾಣದ ನೀರು ನುಗ್ಗದಂತೆ ತಡೆಯುವ ಪ್ರಯತ್ನ ನಡೆಸಿದ್ದಾರೆ.
ಇದಲ್ಲದೇ ಬೆಳೆಹಾನಿ ಹಾಗೂ ಭೂಮಿಯ ಫಲವತ್ತಾದ ಮಣ್ಷು ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.