Advertisement
ನಗರದ ಮುಡಾಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಿವೇಶನಗಳಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಡಾ ಹಾಗೂ ಭೂ ಮಾಲೀಕರ ಜಂಟಿಸಹಯೋಗದಲ್ಲಿ 50:50 ಅನುಪಾತದಲ್ಲಿಬಡಾವಣೆ ನಿರ್ಮಿಸಲು ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ದೊರೆತಿದೆ.ಈಗಾಗಲೇ ಸುಮಾರು 700 ಎಕರೆ ಜಮೀನನ್ನು ಗುರುತಿಸಲಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಂದರ್ಭಿಕ ಪರಿಹಾರ ಕಂಡುಕೊಳ್ಳುವಸಲುವಾಗಿ ಜಮೀನು ಮಾರಾಟ ಮಾಡಿದರೆವಂಶಪಾರಂಪರ್ಯವಾಗಿ ಬಂದಿದ್ದ ಭೂ ಮಾಲೀಕತ್ವ ರೈತರ ಕೈತಪ್ಪುತ್ತದೆ. ಅಲ್ಲದೆ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೂ ದೊರೆಯುವುದಿಲ್ಲ. ನಮ್ಮ ಈ ಯೋಜನೆಯಿಂದ ಜಮೀನಿನ ಮಾಲೀಕತ್ವ ರೈತರ ಬಳಿಯೇ ಉಳಿಯಲಿದ್ದು, ಅವರ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ. ಈ ಸಂಬಂಧ ರೈತರೊಂದಿಗೆ ಸಂವಾದ ನಡೆಸಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಜಮೀನು ನೀಡಲು ರೈತರು ಒಪ್ಪಿಕೊಂಡಿದ್ದು, ಒಪ್ಪಂದದ ಬಳಿಕ ಬಡಾವಣೆ ಅಭಿವೃದ್ಧಿ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ತಿಳಿಸಿದರು.
Related Articles
Advertisement
18 ತಿಂಗಳಲ್ಲಿ ಯೋಜನೆ ಪೂರ್ಣ : ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲುಉದ್ದೇಶಿಸಿರುವ ಯೋಜನೆಗಳನ್ನು ಸಂಬಂಧಪಟ್ಟ ಎಲ್ಲಾ ಭೂಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡ18 ತಿಂಗಳೊಳಗೆ ಯೋಜನೆ ಪೂರ್ಣಗೊಳಿಸ ಲಾಗುವುದು. ಪರಸ್ಪರ ಒಪ್ಪಿಗೆ ಪತ್ರ ನೀಡಿ ಒಪ್ಪಂದದಕರಾರಿಗೆ ಒಳಪಡುವ ಭೂಮಾಲೀಕರಿಗೆ ಮುಂಗಡವಾಗಿ 10 ಲಕ್ಷ ರೂ.ನೀಡಲಾಗುವುದು. ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಅಧಿಸೂಚಿಸಿದಜಮೀನುಗಳಿಗೆ ಪರಿಹಾರವಾಗಿ ಯೋಜಿತ ಬಡಾವಣೆ ರಚಿಸಿದ ಬಾಬ್ತು ಲಭ್ಯವಾಗುವ ಒಟ್ಟು ನಿವೇಶನಗಳಲ್ಲಿ ಶೇ.50-50ರ ಅನುಪಾತದಲ್ಲಿ ನಿಯಮಗಳನ್ವಯ ಭೂ ಮಾಲೀಕರಿಗೆ ನಿವೇಶನ ನೀಡಲಾಗುವುದು ಎಂದು ರಾಜೀವ್ ವಿವರಿಸಿದರು.
ಖಾಸಗಿಯವರಿಂದಲೂ ಬೇಡಿಕೆ: ರಾಜೀವ್ : ಮುಡಾದ ಈ ಯೋಜನೆಗೆ ರೈತರಿಂದಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಖಾಸಗಿ ಡೆವಲಪರ್ಸ್‌ಗಳೂ ಸಹ ತಾವು ಖರೀದಿಸಿರುವ ಜಮೀನನ್ನು50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿಕೊಡುವಂತೆ ಬೇಡಿಕೆಇಡುತ್ತಿದ್ದಾರೆ. ಖಾಸಗಿಯವರು ನಮ್ಮಯೋಜನೆ ಆರಂಭವಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಹಲವು ಗೊಂದಲಸೃಷ್ಟಿಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಮಾಲೀಕರಿಗೆ ಪ್ರಾಧಿಕಾರದ ಮೇಲೆ ವಿಶ್ವಾಸ ಇರುವುದರಿಂದ ಅಂತಹ ಯಾವುದೇ ಪ್ರಯತ್ನ ಸಫಲವಾಗುವುದಿಲ್ಲ ಎಂದು ರಾಜೀವ್ ಹೇಳಿದರು.
ವ್ಯಾಜ್ಯ ಇತ್ಯರ್ಥಕ್ಕೆ ಜಾಗೃತದಳ ರಚನೆ : ಮುಡಾದಲ್ಲಿ ನಕಲಿ ದಾಖಲೆ, ವಂಚನೆ ಮೊದಲಾದ ಅಕ್ರಮಗಳನ್ನು ತಡೆಗಟ್ಟಲು ಬಿಡಿಎ ಮಾದರಿಯಲ್ಲಿ ಜಾಗೃತದಳ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಡಾದಿಂದ ಯಾವುದಾದರೂ ಒಂದು ಠಾಣೆಗೆ ದೂರು ನೀಡಿದರೆ ಪ್ರಕರಣ ಇತ್ಯರ್ಥಪಡಿಸಲುವಿಳಂಬವಾಗುವುದಲ್ಲದೆ ಹಲವು ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ಪ್ರತ್ಯೇಕ ಜಾಗೃತದಳ ರಚಿಸಲು ಮುಂದಾಗಿದ್ದೇವೆ. ಡಿವೈಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಂತದ ಅಧಿಕಾರಿಗಳ ನ್ನೊಳಗೊಂಡ ಜಾಗೃತದಳ ರಚಿಸಿದರೆ ಸಾರ್ವಜನಿಕರಿಂದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಲಿದೆ ಎಂದ ಅವರು, ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿಯನ್ನು ಕಬಳಿಸಲು ಯತ್ನಿಸುವವರ ವಿರುದ್ಧಕಠಿಣ ಕ್ರಮಕ್ರಮಕೈಗೊಳ್ಳುವುದಾಗಿ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಎಚ್ಚರಿಸಿದರು.