Advertisement

ಮಳಲಿ: ಮಣ್ಣು ಕುಸಿದು ಜೆಸಿಬಿ ಚಾಲಕ ಸಾವು

12:42 AM Apr 20, 2023 | Team Udayavani |

ಬಜಪೆ: ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಳಲಿ ನಾಡಾಜೆಯಲ್ಲಿ ಜೆಸಿಬಿಯಿಂದ ಮಣ್ಣು ಅಗೆತದ ವೇಳೆ ಮಣ್ಣು ಕುಸಿದು ಜೆಸಿಬಿಯ ಮೇಲೆ ಬಿದ್ದು ಜೆಸಿಬಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಸಂಭವಿಸಿದೆ.

Advertisement

ಜೆಸಿಬಿಯ ಚಾಲಕ ಝಾರ್ಖಂಡ್‌ ಕೊಸಾರ್‌ ಅನ್ಸಾರಿ (22) ಮೃತರು. ಮಣ್ಣು ಅಗೆತದ ವೇಳೆ ನಿಂತಿದ್ದ ಟಿಪ್ಪರ್‌ ಹಿಂಬದಿಗೆ ಹಾಗೂ ಜೆಸಿಬಿಯ ಮೇಲೆ ಮಣ್ಣು ಕುಸಿದು ಬಿದ್ದು ಅದರಲ್ಲಿ ಜೆಸಿಬಿಯ ಚಾಲಕ ಸಿಲುಕಿಕೊಂಡ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ, ಬಜಪೆ ಪೊಲೀಸರು ಧಾವಿಸಿ ಬಂದಿದ್ದರು. ಸ್ಥಳೀಯರು ಹಾಗೂ ಎರಡು ಜೆಸಿಬಿ ಸಹಾಯದಿಂದ ಮಣ್ಣು ತೆಗೆಯಲಾಯಿತಾದರೂ, ಅದಾ ಗಲೇ ಚಾಲಕ ಮೃತಪಟ್ಟಿದ್ದ.

Advertisement

Udayavani is now on Telegram. Click here to join our channel and stay updated with the latest news.

Next