ಮಳೆಗಾಲ ಎಂದ ಕೂಡಲೇ ರಸ್ತೆಯಲ್ಲಿನ ಹೊಂಡಗಳಲ್ಲಿ ನೀರು ತುಂಬಿರುತ್ತದೆ. ಅಂತಹ ರಸ್ತೆಗಳನ್ನು ಸರಿಪಡಿಸದಿರುವುದು ಒಂದು ರೀತಿಯ ತಪ್ಪಾದರೆ, ಅದರ ಮೇಲೆ ಚಲಿಸುವ ವಾಹನ ಚಾಲಕರು ಇನ್ನೊಂದು ರೀತಿಯ ತಪ್ಪು ಎಸಗುತ್ತಾರೆ.
ರಸ್ತೆಯಲ್ಲಿ ಶಾಲೆಗೆ ಹೊರಟು ಬರುತ್ತಿರುವ ಪುಟ್ಟ- ಪುಟ್ಟ ವಿದ್ಯಾರ್ಥಿಗಳು ಮೈತುಂಬ ಯೂನಿಫಾರ್ಮ್ ಹಾಕಿ ಸ್ವಚ್ಛಂದವಾಗಿ ಮನೆಯಿಂದ ಹೊರಟು ಬರುತ್ತಾರೆ. “ಮೈ ಸ್ವಚ್ಛವಿದ್ದರೆ ಮನಸು ಸ್ವಚ್ಛವಿರುತ್ತದೆ’ ಎಂಬ ಮಾತಿದೆ.
ಹೀಗೆ ಮೈ ಮನದಲ್ಲಿ ಕಲ್ಮಶವಿಲ್ಲದೇ ರಸ್ತೆಯಲ್ಲಿ ಬರುತ್ತಿರುವ ವಿದ್ಯಾರ್ಥಿಗಳ ಮೇಲೆ ರಭಸವಾಗಿ ಬಂದ ವಾಹನಗಳು ರಸ್ತೆ ಹೊಂಡದಲ್ಲಿದ್ದ ಕೆಸರು ನೀರನ್ನು ಹಾಯಿಸಿ ಬಿಡುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೂ ಈ ಅನುಭವ ಆಗಿರಬಹುದು. ಪಾಪ.. ಆ ಮುಗª ಮಕ್ಕಳಿಗೆ ಅಂತಹ ಬಲಾಡ್ಯ ಕಾರನ್ನಾಗಲಿ, ಅದರಲ್ಲಿರುವ ವ್ಯಕ್ತಿಯನ್ನಾಗಲಿ ಎದುರಿಸುವ ಶಕ್ತಿ ಇರುವುದಿಲ್ಲ. ಮನಸಲ್ಲಿ ಅವರನ್ನು ತಿನ್ನುವಷ್ಟು ಕೋಪ ಬಂದರು ಅದನ್ನು ಅವರ ಎದುರಲ್ಲಿ ವ್ಯಕ್ತಪಡಿಸಲಾಗದು ಎಂಬ ಸತ್ಯ ತಿಳಿದು ವಿದ್ಯಾರ್ಥಿಗಳು ಬಾಯಿ ತೆರೆಯಲು ಹೆದರುತ್ತಾರೆ.
ಆ ಚಾಲಕರ ತಪ್ಪಿದ್ದರೆ ಕ್ಷಮೆ ಕೇಳುವ ವಿವೇಚನೆಯಾಗಲಿ, ಸಾಮಾನ್ಯ ಪ್ರಜ್ಞೆ ಆಗಲಿ ಅವರಿಗಿಲ್ಲ. ಆ ವಿದ್ಯಾರ್ಥಿಗಳು ಅದೇ ಕೆಸರು ಎರಚಿದ ಬಟ್ಟೆಯಲ್ಲಿಯೇ ಶಾಲೆ- ಕಾಲೇಜುಗಳಿಗೆ ತಲುಪುತ್ತಾರೆ. ದಿನಪೂರ್ತಿ ಕೊಳಚೆ ಬಟ್ಟೆಯಲ್ಲಿಯೇ ತರಗತಿಯಲ್ಲಿ ಕೂತ ಅವರಿಗೆ ಆ ದಿನ ಪಾಠವಾದರೂ ಹೇಗೆ ಹತ್ತಿತು..ನೀವೇ ಹೇಳಿ ? ಆಗಲೇ ಹೇಳಿದಂತೆ ಮೈ ಸ್ವತ್ಛವಿದ್ದರೆ ಮನಸ್ಸು ಸ್ವತ್ಛ ವಿರುತ್ತದೆ. ಅದೇ ಬಟ್ಟೆಯಲ್ಲಿ ಊಟವನ್ನು ಮುಗಿಸುತ್ತಾರೆ.
ಒಂದೆಡೆ ಹೇಸಿಗೆ ಇನ್ನೊಂದೆಡೆ ಯಾರು ಏನು ಅಂದುಕೊಳ್ಳುತ್ತಾರೋ ಅನ್ನುವ ಮುಜುಗರ. ವಾಹನಗಳು ರಸ್ತೆಯಲ್ಲಿಯೇ ಹೋಗಬೇಕು.ಆದರೆ,ಆ ಚಾಲಕರಿಗೆ ರಸ್ತೆಯಲ್ಲಿರುವ ಹೊಂಡ ಕಂಡೇ ಕಾಣುತ್ತದೆ. ಅದರ ಸಮೀಪವೇ ತಲುಪುವಾಗ ಯಾರಾದರೂ ಪಕ್ಕದಲ್ಲಿದ್ದಾರೆಯೇ ಎಂಬುದನ್ನು ಅರಿತು ಮುನ್ನುಗ್ಗಬೇಕು.
ಅದರ ಬದಲು ತನ್ನಲ್ಲಿ ಕಾರಿದೆ ಎಂಬ ದರ್ಪ ತಲೆಗೇರಿದರೆ ಇಂತಹ ಸಾಮಾನ್ಯರ ಕಷ್ಟ ತಿಳಿಯದು. ವಾಹನ ವಿರುವ ನೀವು ಅದರೊಳಗೆ ಬೆಚ್ಚಗೆ ಇರುತ್ತೀರಿ ಆದರೆ ರಸ್ತೆಯ ಬದಿಯಲ್ಲಿ ನಡೆದಾಡುವ ವಿದ್ಯಾರ್ಥಿಗಳು ಸಾಮಾನ್ಯ ಜನರು ಏನು ಮಾಡಬೇಕು.
ನೀವೆಷ್ಟು ಡಿಗ್ರಿಗಳನ್ನು ಪಡೆದರೂ ಇಂತಹ ಸಾಮಾನ್ಯ ಪ್ರಜ್ಞೆ ಇಲ್ಲದಿದ್ದರೆ ಆ ಡಿಗ್ರಿಗಳು ಶೂನ್ಯ.
ವಾಹನ ಚಲಿಸುವಾಗ ನಿಧಾನವಾಗಿ ಚಲಿಸಿ, ಮಾನವೀಯತೆ ಅನ್ನೋದು ಇರಲಿ ತಾನು ಬದುಕಬೇಕು ತನ್ನಂತಿರುವವರು ಬದುಕಬೇಕು ಎಂಬ ವಿವೇಕ ಹಾಗೂ ಇಂತಹ ತಪ್ಪುಗಳನ್ನು ಮಾಡಬಾರದೆಂಬ ಸಾಮಾನ್ಯ ಪ್ರಜ್ಞೆ ಯಾವಾಗಲೂ ಇರಲಿ.ಇದು ವಿದ್ಯಾರ್ಥಿಗಳ ವಿನಂತಿ.
–
ನಿಕ್ಷಿತಾ
ಮರಿಕೆ