ರಾಂಚಿ: ಭಾರತವನ್ನು ಎರಡು ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಎಂ.ಎಸ್.ಧೋನಿ ನಿವೃತ್ತಿ ವಿಚಾರವಾಗಿ ವರ್ಷಗಳಿಂದ ವಿವಿಧ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಲೇ ಇದೆ. ಆದರೆ ಧೋನಿ ಇದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ, ಮೌನವಾಗಿಯೇ ಏನೂ ಆಗಿಲ್ಲ ಎನ್ನುವಂತೆ ತಮ್ಮ ಪಾಡಿಗೆ ತಾವಿದ್ದಾರೆ. ಅಂತಹ ಧೋನಿ ಇದೀಗ ಪೂರ್ಣಾವಧಿ ಕ್ರಿಕೆಟ್ ತರಬೇತುದಾರನಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಹೌದು, ಸದ್ಯ ಜಾರ್ಖಂಡ್‌ನಲ್ಲಿರುವ ಧೋನಿ ಜುಲೈ2 ರಂದು ಆನ್‌ಲೈನ್ ಕ್ರಿಕೆಟ್ ಅಕಾಡೆಮಿಯನ್ನು ಆರಂಭಿಸುತ್ತಿದ್ದಾರೆ. ಇದರೊಂದಿಗೆ ಧೋನಿ ಮುಂದಿನ ದಿನಗಳಲ್ಲಿ ಕ್ರಿಕೆಟ್ ಜೀವನಕ್ಕೆ ಹಠಾತ್ ನಿವೃತ್ತಿ ಘೋಷಿಸಿದರೂ ಅಚ್ಚರಿ ಇಲ್ಲ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
Advertisement
ಸುಸಜ್ಜಿತ ಅಕಾಡೆಮಿ: ಜಾರ್ಖಂಡ್‌ನಲ್ಲಿ ಅಕಾಡೆಮಿಗೆ ಸ್ವತಃ ಧೋನಿ ಚಾಲನೆ ನೀಡಲಿದ್ದಾರೆ. ಒಟ್ಟಾರೆ ಯೋಜನೆಯ ಮುಖ್ಯಸ್ಥನಾಗಿ ಧೋನಿ ಇರಲಿದ್ದಾರೆ. ಇವರೊಂದಿಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ದಿಗ್ಗಜ ಡ್ಯಾರಿಲ್ ಕುಲ್ಲಿನಾನ್ ಇದ್ದಾರೆ. ಇವರು ಅಕಾಡೆಮಿಯ ಕೋಚಿಂಗ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಅಕಾಡೆಮಿಗೆ 200ಕ್ಕೂ ಹೆಚ್ಚು ತರಬೇತುದಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆನ್ ಲೈನ್ ಮೂಲಕ ಸದ್ಯ ತರಬೇತಿ ಆರಂಭಿಸಲಾಗುತ್ತಿದೆ. ಆದರೆ ಅದರ ರೂಪುರೇಷ, ಕಾರ್ಯ ವೈಖರಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಧೋನಿ 2017ರಲ್ಲಿ ದುಬೈನಲ್ಲಿ ಕ್ರಿಕೆಟ್ ಅಕಾಡೆಮಿ ತೆರೆದಿದ್ದರು. ಆದರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದರಿಂದ ಧೋನಿಗೆ ಅದರತ್ತ ಹೆಚ್ಚಿನ ಗಮನ ಕೊಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಕಾಡೆಮಿ ಅರ್ಧಕ್ಕೆ ನಿಂತು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಐಪಿಎಲ್ ನಡೆಯದಿದ್ದರೆ ಧೋನಿ ಕ್ರಿಕೆಟ್‌ಗೆ ನಿವೃತ್ತಿ?
ನಿವೃತ್ತಿ ವಿಚಾರಗಳು ಧೋನಿಯ ಸುತ್ತ ತಿರುಗುತ್ತಲೇ ಇದೆ. ಆದರೆ ಧೋನಿ ಮಾತ್ರ ಇದಕ್ಕೆಲ್ಲ ಕ್ಯಾರೆ ಎಂದಿಲ್ಲ, ತಮ್ಮ ಕುಟುಂಬದೊಂದಿಗೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದಾರೆ. 13ನೇ
ಆವೃತ್ತಿ ಐಪಿಎಲ್‌ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರತಿನಿಧಿಸು ವುದು ಖಾತ್ರಿಯಾಗಿತ್ತು. ಆದರೆ ಐಪಿಎಲ್ ನಡೆಯು ವ ಬಗ್ಗೆ ಇನ್ನೂ ಖಚಿತತೆ ಇಲ್ಲ. ಒಂದು ವೇಳೆ ಐಪಿಎಲ್ ನಡೆಯ ದಿದ್ದರೆ ಧೋನಿಗೆ ಮುಂಬರುವ ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟವಾಗಬ ಹುದು, ಇದನ್ನೆಲ್ಲ ಗಮನಿಸುತ್ತಿದ್ದರೆ ಐಪಿಎಲ್ ಆಯೋಜನೆಯಾಗದಿ ದ್ದರೆ ಧೋನಿ ನಿವೃತ್ತಿ
ಹೇಳುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ.
ಸಾವಯವ ಕೃಷಿ: ವಿಡಿಯೊ ವೈರಲ್
ಸಾವಿರಾರು ಕೋಟಿ ರೂ. ಒಡೆಯನಾದರೂ ಧೋನಿಗೆ ಸ್ವಲ್ಪವೂ ಅಹಂಕಾರವೆಂಬುದು ಇಲ್ಲ. ಸಮಯ ಬಂದರೆ ಟ್ರ್ಯಾಕ್ಟರ್ ಹಿಡಿದು ಉಳುಮೆ ಮಾಡಲು ಕೂಡ ಸಿದ್ಧ ಎನ್ನುವುದನ್ನು ಧೋನಿ ತೋರಿಸಿಕೊಟ್ಟಿದ್ದಾರೆ. ರಾಂಚಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಧೋನಿ ಸಾವಯವ ಕೃಷಿಯಲ್ಲಿ ನಿರತರಾಗಿದ್ದಾರೆ. ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿ ಧೋನಿ ಉಳುಮೆ ಮಾಡುತ್ತಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. 2019ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಧೋನಿ ಅಲ್ಲಿಂದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.