Advertisement

25ರಂದು ಶ್ರೀ ಸಿದ್ಧಾರೂಢರ ಮಹಾರಥೋತ್ಸವ, 27ಕ್ಕೆ ಕೌದಿಪೂಜೆ

01:25 PM Feb 15, 2017 | |

ಹುಬ್ಬಳ್ಳಿ: ಸದ್ಗುರು ಸಿದ್ಧಾರೂಢರು ಆರಂಭಿಸಿದ ಮಹಾಶಿವರಾತ್ರಿ ಉತ್ಸವ ಪ್ರಸಕ್ತ ಸಾಲಿಗೆ 115 ವರ್ಷಗಳಾಗಿದ್ದು, ಈ ನಿಮಿತ್ತ ಶ್ರೀಮಠದಲ್ಲಿ ಫೆ.19ರಿಂದ 27ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.24ರಂದು ಶ್ರೀಮಠದಲ್ಲಿ ಅಹೋರಾತ್ರಿ ಜಾಗರಣೆ, 25ರಂದು ಸಂಜೆ 5:30 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. 27ರಂದು ಸಂಜೆ 6 ಗಂಟೆಗೆ ಕೌದಿ ಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. 

Advertisement

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಮಠದ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಧರಣೇಂದ್ರ ಜವಳಿ, ಫೆ.19ರಂದು ಸಂಜೆ 4 ಗಂಟೆಗೆ ಆಜೀವ ಸದಸ್ಯರು, ಆಶ್ರಯದಾತರು, ಪೋಷಕರ ಭಕ್ತರ ಮೇಲ್ಮನೆ ಸಭೆಯು ಶ್ರೀಮಠದ ನಿರಂಜನ ಭವನದಲ್ಲಿ ನಡೆಯಲಿದೆ. 

ಉತ್ಸವದ ಅಂಗವಾಗಿ ಶ್ರೀಮಠದ ಕೈಲಾಸ ಮಂಟಪದಲ್ಲಿ ಫೆ.19ರಿಂದ 25ರವರೆಗೆ ಪ್ರತಿದಿನ ಬೆಳಿಗ್ಗೆ 7:45 ಗಂಟೆಗೆ ಗೋಪಾಲಭಟ್‌ ಜೋಶಿ ಅವರಿಂದ ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪಠಣ ಹಾಗೂ 9 ಗಂಟೆಗೆ ಮಹಾತ್ಮರಿಂದ ವೇದಾಂತ ಉಪನ್ಯಾಸ ಹಾಗೂ ರಾತ್ರಿ 8 ಗಂಟೆಗೆ ರಾಜ್ಯ ಮತ್ತು ಅಂತಾರಾಜ್ಯ ಖ್ಯಾತ ಕಲಾವಿದರಿಂದ ಸಂಗೀತೋತ್ಸವ ಕಾರ್ಯಕ್ರಮ ನೆರವೇರಲಿದೆ ಎಂದರು. 

ಫೆ.24ರಂದು ಜಾಗರಣೆ ನಿಮಿತ್ತ ಪಲ್ಲಕ್ಕಿ ಉತ್ಸವವು ಶ್ರೀಮಠದಿಂದ ತೆರಳಿ ಗಣೇಶಪೇಟೆಯ ಜಡಿಸ್ವಾಮಿ ಮಠ ತಲುಪಿ ಮರಳಿ ಶ್ರೀಮಠಕ್ಕೆ ರಾತ್ರಿ ಆಗಮಿಸುವುದು. ಅನಂತರ ಅಹೋರಾತ್ರಿ ಜಾಗರಣೆ ನಡೆಯುವುದು. 25ರಂದು ಶ್ರೀಮಠದಿಂದ ಪಲ್ಲಕ್ಕಿ ಉತ್ಸವ ನಂತರ ಸಂಜೆ 5:30 ಗಂಟೆಗೆ ರಥೋತ್ಸವ ನೆರವೇರುವುದು.

ಶ್ರೀಮಠದ ಆಡಳಿತಾಧಿಕಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಶಾನಂದ ಹಾಗೂ ವಿವಿಧ ಮಠಾಧೀಶರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಹೆಗ್ಗೇರಿ ಬಳಿಯ ಡಾ| ಅಂಬೇಡ್ಕರ್‌ ಮೈದಾನದಲ್ಲಿ ಹಾಗೂ ಶ್ರೀಮಠದ ಪಕ್ಕದಲ್ಲಿರುವ ಖಾಲಿ ಜಾಗೆಯಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುವುದು.

Advertisement

ಶ್ರೀಮಠಕ್ಕೆ ಆಗಮಿಸುವ ಸುಮಾರು 3 ಲಕ್ಷ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು. ಭಕ್ತರಿಗೆ ಅನುಕೂಲವಾಗುವಂತೆ ಶ್ರೀ ಮಠದ ಕೈಲಾಸ ಮಂಟಪ ಸೇರಿದಂತೆ ಎಲ್ಲೆಡೆ ನಡೆಯುವ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳ ಕುರಿತು ಕೈಲಾಸ ಮಂಟಪದ ಮುಂಭಾಗದಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗುವುದು ಎಂದರು.

27ರಂದು ಸಂಜೆ 6 ಗಂಟೆಗೆ ಕೌದಿ ಪೂಜೆಯೊಂದಿಗೆ ಉತ್ಸವ ಸಮಾಪ್ತಿಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವೈಸ್‌ ಚೇರ¾ನ್‌ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಗೀತಾ ಎಸ್‌.ಜಿ., ಧರ್ಮದರ್ಶಿಗಳಾದ ನಾರಾಯಣಸಾ ಮೆಹರವಾಡೆ, ನಾರಾಯಣಪ್ರಸಾದ ಪಾಠಕ, ಮಹೇಂದ್ರ ಸಿಂಘಿ, ಬಸವರಾಜ ಕಲ್ಯಾಣಶೆಟ್ಟರ, ಶಾಮಾನಂದ ಪೂಜೇರಿ ಮೊದಲಾದವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next