ಬದಿಯಡ್ಕ: ಮಲೆನಾಡು ರಸ್ತೆಗಳ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಜನಪರ ಸಮಿತಿಯ ಹೂಡುತ್ತಿರುವ 13ನೇ ದಿನಕ್ಕೆ ಕಾಲಿಟ್ಟಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಬೆಂಬಲ ಘೋಷಿಸಿ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್ ರಝಾಕ್ ಬುಧವಾರ ಅಗಮಿಸಿದುದು ಸಮರ ಸಮಿತಿಯ ಉತ್ಸಾಹಕ್ಕೆ ಪುಷ್ಠಿ ನೀಡಿತು.
ನಡೆಯುತ್ತಿರುವ ಮುಷ್ಕರ ಸಂಚಾರ ಸ್ವಾತಂತ್ರ್ಯಕ್ಕೆ ಬೇಕಾಗಿರುವ ನಾಯ್ಯವಾದ ಹೋರಾಟವಾಗಿದ್ದು, ಈ ವಿಷಯದಲ್ಲಿ ಪಾರ್ಲಿಮೆಂಟಿನ ಒಳಗಡೆ ಮತ್ತು ಹೊರಗಡೆ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅವರು ಮುಷ್ಕರ ನಿರತರಿಗೆ ಬೆಂಬಲ ಸೂಚಿಸಿ ತಿಳಿಸಿದರು.
ಜನಸಾಮಾನ್ಯರು ತಮ್ಮ ಅತ್ಯಗತ್ಯ ಮೂಲಸೌಕರ್ಯಗಳಿಗಾಗಿ ಪರಿತಪಿಸು ವುದು ಮತ್ತು ಅದರ ನೆರವೇರಿಸು ವಿಕೆಗೆ ಸರಕಾರಕ್ಕೆ ಕಾಡಿ ಬೇಡುವ ಪರಿಸ್ಥಿತಿ ಎದುರಾಗಿರುವುದು ಪ್ರಜಾ ಪ್ರಭುತ್ವದ ಅಣಕವೆಂದು ತಿಳಿಸಿದ ಅವರು, ಗಡಿನಾಡು ಕಾಸರಗೋಡಿನ ಅಭಿವೃದ್ಧಿಯಲ್ಲಿ ರಾಜ್ಯ ಸರಕಾರ ತಳೆಯುತ್ತಿರುವ ನಿರಂತರ ನಿರ್ಲಕ್ಷ್ಯ ಖೇದಕರವೆಂದು ತಿಳಿಸಿದರು. ಈ ನಿಟ್ಟಿನಲ್ಲಿ ಜನಸಾಮಾನ್ಯರೊಂದಿಗೆ ಜಿಲ್ಲೆಯ ಶಾಸಕರು ಪಕ್ಷ ಭೇದ ಮರೆತು ಬೇಡಿಕೆ ಈಡೇರಿಕೆಗೆ ಹೋರಾಡಲು ಬದ್ಧವೆಂದು ಭರವಸೆ ನೀಡಿದರು.
ಹಿರಿಯ ಕಾಂಗ್ರೆಸ್ ಸದಸ್ಯ ಬಾಲಕೃಷ್ಣ ಮಾಸ್ತರ್ ಓಕೂìಡ್ಲು, ಗ್ರಾ.ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಹಿರಿಯ ಪತ್ರಿಕಾ ವಿತರಕ ರಾಮಚಂದ್ರ ಚೆಟ್ಟಿಯಾರ್, ನಿವೃತ್ತ ಪ್ರಾಂಶುಪಾಲ ನಾರಾಯಣ ಭಟ್ ಮೈರ್ಕಳ, ಪುರಂದರ ನೆಟ್ಟಣಿಗೆ, ಬಾಲಕೃಷ್ಣ ಶೆಟ್ಟಿ,ಮುಷ್ಕರ ಸಮಿತಿ ಅಧ್ಯಕ್ಷ ಮಾಹಿನ್ ಕೇಳ್ಳೋಟ್, ಶ್ಯಾಮ್‌ಪ್ರಸಾದ್ ಮಾನ್ಯ, ಅನ್ವರ್ ಓಝೊàನ್, ಆಶ್ರಫ್ ಮುನಿಯೂರು, ಬಿ.ಎಸ್.ಪಿ.ಯ ವಿಜಯನ್, ರತ್ನಕರ ಓಡಂಗಲ್ಲು, ಪಿ.ಕೆ. ಗೋಪಾಲಕೃಷ್ಣ ಭಟ್, ಅವಿನಾಶ್ ರೈ, ಅಬ್ದುಲ್ ಲತಿಫ್, ಆಶ್ರಫ್ ಮೀಡಿಯಾ ಕ್ಲಾಸಿಕಲ್ಸ್ ಮೊದಲಾದವರು ಮಾತನಾಡಿದರು.
ಸತ್ಯಾಗ್ರಹ ನಿರತರಾದ ಜನಪರ ಸಮಿತಿಯ ನೌಶಾದ್ ಕಾಡಮನೆ ಹಾಗೂ, ವ್ಯಾಪಾರಿ ಮುಂದಾಳು ಜಗನ್ನಾಥ ಆಳ್ವ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.