Advertisement
ಹೈದ್ರಾಬಾದ್ ನಿಂದ ನೇರವಾಗಿ ಕಟ್ಟಿತುಗಾಂವ್ ಗ್ರಾಮಕ್ಕೆ ಆಗಮಿಸಿದ ತಂಡ, ಸಚಿನ್ ಕುಟುಂಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದರು. ಸಚಿನ್ ಆತ್ಮಹತ್ಯೆ ಮತ್ತು ಅದಕ್ಕೆ ಕಾರಣದ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಪಡೆದರು. ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರು ಅವರ ಜತೆಗಿದ್ದರು.
Related Articles
Advertisement
ಇದೇ ವೇಳೆ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ. ಆ ಬಳಿಕ ನಮ್ಮ ತಮ್ಮನ್ನ ಕಾಪಾಡಿ ಎಂದು ಸಹೋದರಿಯರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದರು.
ಪ್ರಿಯಾಂಕಾ ಖರ್ಗೆ ಈ ಕೇಸ್ ನಲ್ಲಿ ಇದ್ದಾರೆಂದು ಪೊಲೀಸರು ದೂರು ತೆಗೆದುಕೊಳ್ಳಲಿಲ್ಲ. ಸಚಿನ್ ಆತ್ಮಹತ್ಯೆ ಕೇಸ್ ನಲ್ಲಿ ಬೆನ್ನಲುಬಾಗಿ ಪ್ರಿಯಾಂಕಾ ಇದ್ದಾರೆ. ಇನ್ನೂ ಮುಂದೆ ಅವರ ಹೆಸರು ಪ್ರಿಯಾಂಕಾ ಖರ್ಗೆಯಲ್ಲ ಅವರು ಸುಪಾರಿ ಖರ್ಗೆ ಎನ್ನಬೇಕು ಎಂದು ಜರಿದರು.
ಪರಿಹಾರ ಬೇಡ, ಸಾವಿಗೆ ನ್ಯಾಯ ಬೇಕು
ನಮಗೆ ಪರಿಹಾರದ ಹಣ ಬೇಡ, ನಮ್ಮ ಸಹೋದರನ ಸಾವಿಗೆ ನ್ಯಾಯಬೇಕು. ಅದಕ್ಕಾಗಿ ಸಿಬಿಐ ತನಿಖೆ ನಡೆಯಬೇಕು ಎಂದು ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಸಹೋದರಿಯರು ಆಗ್ರಹಿಸಿ ಸಚಿನ್ ಕುಟುಂಬಸ್ಥರು ಕಣ್ಣೀರಿಟ್ಟರು. ಬಿಜೆಪಿ ನಾಯಕರು ಪರಿಹಾರವನ್ನು ನೀಡಲು ಮುಂದಾದಾಗ ತಿರಸ್ಕರಿಸಿ, 4-5 ಬಾರಿ ಹಣ ನೀಡಲು ಮುಂದಾದರೂ ತಿರಸ್ಕರಿಸಿ ನಮ್ಮ ಮಗನಿಗೆ ನ್ಯಾಯ ಕೊಡಿಸಿ ಸಾಕು ಎಂದು ಆಗ್ರಹಿಸಿದರು.
ಖರ್ಗೆ ವಿರುದ್ಧ ವಾಗ್ದಾಳಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಅಧ್ಯಕ್ಷರ ಕುಟುಂಬಕ್ಕೆ ಸಂವಿಧಾನ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದೆ.
ತಿಪಕ್ಷದ ನಾಯಕ ಆರ್. ಅಶೋಕ್ ಅವರು ಕಿಡಿ ಕಾರಿ, ”ಆತ್ಮಹತ್ಯೆಗೆ ಖರ್ಗೆ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಕಾರಣ ಎಂದು ಆರೋಪಿಸಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ? ಎಲ್ಲರಿಗೂ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಿ ನೈತಿಕತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಸಚಿನ್ ಪಂಚಾಳ್ ಸಾವಿನಲ್ಲಿ ಖರ್ಗೆಯವರ ನಿಕಟವರ್ತಿಗಳ ಕೈವಾಡವಿದೆ ಎಂದು ಆರೋಪಿಸಿದರು.
ಖರ್ಗೆಯವರ ಆಪ್ತ ಸಹಾಯಕ ರಾಜು ಕಾಪನೂರ್ ಅವರ ಸಾವಿಗೆ ಕಾರಣ ಎಂದು ಸಚಿನ್ ಪಂಚಾಳ್ ಡೆತ್ ನೋಟ್ ನಲ್ಲಿ ಬರೆದಿದ್ದು ಹಣದ ವಿಚಾರವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಆರೋಪವನ್ನು ತಳ್ಳಿಹಾಕಿದ ಖರ್ಗೆ, ಡೆತ್ ನೋಟ್ ನಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ಈ ಬಗ್ಗೆ ಪೊಲೀಸ್ ತನಿಖೆಗೆ ಒತ್ತಾಯಿಸಿದ್ದಾರೆ.