Advertisement

ಈಶ್ವರಪ್ಪ, ಸಿಎಂ ಕೂತು ಗೊಂದಲ ಬಗೆಹರಿಸಿಕೊಳ್ಳಲಿ: ಸಂಸದ ಬಚ್ಚೇಗೌಡ ಸಲಹೆ

03:39 PM Apr 04, 2021 | Team Udayavani |

ವಿಜಯಪುರ: ಮುಖ್ಯಮಂತ್ರಿಗಳಿಗೆ ಅವರದೇ ಆದ ಅಧಿಕಾರವಿದೆ. ಯಾವ ಇಲಾಖೆಗೆ ಎಷ್ಟು ಹಣ ಬಿಡುಗಡೆ ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ. ರಾಜಕೀಯದಲ್ಲಿರುವ ಗೊಂದಲ ಬಗೆಹರಿಯಲಿ. ವಿರೋಧ ಪಕ್ಷಗಳು ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಅವಕಾಶ ನೀಡದಿರಿ ಎಂದು ಚಿಕ್ಕಬಳ್ಳಾಪುರ ಸಂಸದ ಬಿ.ಎನ್‌.ಬಚ್ಚೇಗೌಡ ಸಲಹೆ ನೀಡಿದರು.

Advertisement

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಸಂಸದ ಬಚ್ಚೇಗೌಡ, ಬೆಂಡಿಗಾನಹಳ್ಳಿ ಕುಟುಂಬದವರಿಂದ ನಡೆದ ಸ್ವಾಮಿಯವರ ಪುಷ್ಪ ಪಲ್ಲಕ್ಕಿ ಉತ್ಸವ ಸೇವೆಗೆ ಚಾಲನೆ ನೀಡಿ ಮಾತನಾಡಿದರು.

ಹಣಕಾಸು ಖರ್ಚು ವೆಚ್ಚದ ಬಗ್ಗೆ ಮಾರ್ಚ್‌ ಅಂತ್ಯದೊಳಗೆ ತಿಳಿದರೆ ಮುಂದಿನ ಬಜೆಟ್‌ ಮಂಡನೆಗೆ ಅನುಕೂಲ ಎಂದು ಮುಖ್ಯಮಂತ್ರಿಗಳು ಮಾಡಿರುವ ಕರ್ತವ್ಯ, ಲೋಪದೋಷವಲ್ಲ ಎಂದು ಹೇಳಿದರು

ವಿರೋಧ ಪಕ್ಷಗಳಿಗೆ ಆಸ್ಪದ ಕೊಡಬೇಡಿ: ಈ ವಿಚಾರವಾಗಿ ಸಚಿವ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಧ್ಯೆ ಗೊಂದಲ ಉಂಟಾಗಿದೆ. ಇದು ಇಬ್ಬರೂ ಕೂತು ಮಾತಾಡಿ ಬಗೆಹರಿಸಿಕೊಳ್ಳುವ ವಿಚಾರ. ಹೀಗಿರುವಾಗ ಹಿರಿಯ ಸಚಿವ ರೆನಿಸಿಕೊಂಡ ಈಶ್ವರಪ್ಪನವರು ದೂರು ಕೊಡುವ ಹಂತಕ್ಕೆ ಹೋಗಿರುವುದು ಆಶ್ಚರ್ಯಕರ. ಹೈಕಮಾಂಡ್‌ ಏನು ತೀರ್ಮಾನ ಮಾಡುವುದೋ ತಿಳಿದಿಲ್ಲ. ವಿರೋಧ ಪಕ್ಷಗಳು ಲಾಭ ಪಡೆಯಲು ಆಸ್ಪದ ಕೊಡಬಾರದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next