ಚೀನಾ: ಚೀನಾದಲ್ಲಿ ಮತ್ತೊಮ್ಮೆ ಆಹಾರದಲ್ಲಿ ಇಲಿಯ ತಲೆ ಪತ್ತೆಯಾದ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಚೀನಾ ಡೈಲಿ ವರದಿ ಪ್ರಕಾರ, ಚೀನಾದ ಕೆಫೆಟೇರಿಯಾದ ಊಟದ ಬಾಕ್ಸ್‌ನಲ್ಲಿ ಇಲಿಯ ತಲೆಯೊಂದು ಪತ್ತೆಯಾಗಿದೆ.
ಒಂದು ತಿಂಗಳಲ್ಲಿ ಚೀನಾದಲ್ಲಿ ಇಂತಹ ಸುದ್ದಿ ಬರುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಚೀನಾದಲ್ಲಿ ಆಹಾರ ಭದ್ರತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಪ್ರಾರಂಭವಾದಂತಾಗಿದೆ.
ಚೀನಾದ ಕ್ಸಿಯುಶನ್ ಕೌಂಟಿಯಲ್ಲಿರುವ ಆಸ್ಪತ್ರೆಯ ಕೆಫೆಟೇರಿಯಾದಲ್ಲಿ ಆರ್ಡರ್ ಮಾಡಿದ ಊಟದಲ್ಲಿ ಇಲಿಯ ತಲೆ ಪತ್ತೆಯಾಗಿದ್ದು, ವ್ಯಕ್ತಿಯೊಬ್ಬರು ಹೋಟೆಲ್ ನಲ್ಲಿ ಊಟವನ್ನು ಆರ್ಡರ್ ಮಾಡಿದ್ದಾರೆ ಆದರೆ ಊಟದ ಬಾಕ್ಸ್ ತೆರೆದಾಗ ಅದರೊಳಗೆ ಇಲಿಯ ತಲೆ ಪತ್ತೆಯಾಗಿದೆ ಎಂದು ಗ್ರಾಹಕ ದೂರಿದ್ದಾರೆ.
ಕೆಫೆಟೇರಿಯಾದ ಸಿಬ್ಬಂದಿ ಆರಂಭದಲ್ಲಿ ಇದನ್ನು ಬಾತುಕೋಳಿ ಮಾಂಸ ಎಂದು ಹೇಳಿದ್ದಾರೆ. ಆದರೆ ವಿದ್ಯಾರ್ಥಿ ಇಲಿಯ ಹಲ್ಲುಗಳನ್ನು ತೋರಿಸಿ ಬಾತುಕೋಳಿಗೆ ಹಲ್ಲುಗಳು ಇರುತ್ತವೆಯೇ ಎಂದು ಪ್ರಶ್ನೆ ಮಾಡಿದ್ದಾನೆ.
ತೀವ್ರ ಟೀಕೆಗಳ ನಂತರ, ಈ ಆಹಾರವನ್ನು ತಮ್ಮ ಕೆಫೆಟೇರಿಯಾದಲ್ಲಿ ತಯಾರಿಸಲಾಗಿಲ್ಲ ಎಂದು ಆಸ್ಪತ್ರೆ ಹೇಳಿದೆ. ಅವರ ಕ್ಯಾಂಟೀನ್‌ನಲ್ಲಿ ಸಿಗುವ ಆಹಾರ ಹೊರಗುತ್ತಿಗೆಯಿಂದ ತರಿಸುವಂತದ್ದು ಎಂದು ಆಸ್ಪತ್ರೆ ತಿಳಿಸಿದೆ.
ತಿಂಗಳ ಮೊದಲ ವಾರದಲ್ಲಿ ಆಹಾರದಲ್ಲಿ ಇಲಿಯ ತಲೆ ಪತ್ತೆಯಾಗಿತ್ತು, ವಿದ್ಯಾರ್ಥಿ ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ ಇದು ಎರಡನೇ ಪರಾಕಾರಣವಾಗಿದ್ದು ಸಂಬಂಧ ಪಟ್ಟ ಆಹಾರ ಇಲಾಖೆ ಅಧಿಕಾರಿಗಳು ರೆಸ್ಟೋರೆಂಟ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಕಾದಾಟ… ಆಫ್ರಿಕನ್ ಚೀತಾ ‘ಅಗ್ನಿ’ಗೆ ಗಾಯ