Advertisement
ಇವರ ಅಂಗಡಿಯಲ್ಲಿ ಹಲವಾರು ತಲೆಮಾರಿನಿಂದ ಸಕ್ಕರೆ ಆರತಿಯನ್ನು ಮಾಡುತ್ತಾ ಬಂದಿದ್ದಾರೆ. ಆದ ಕಾರಣ ನಾವುಗಳು ಮುಂದುವರೆಸಿಕೊಂಡು ಹೊಗುತ್ತಿದ್ದೇವೆ. ಇದಕ್ಕೆ ಹೆಚ್ಚು ಶ್ರಮ, ಅಲ್ಪ ಲಾಭವಾಗುತ್ತದೆ. ಒಂದು ಕೆಜಿ ಸಕ್ಕರೆ ಆರತಿಯನ್ನು ಮಾಡಿಕೊಡಲು 70-80ರೂಗಳನ್ನು ತೆಗೆದುಕೊಳ್ಳುತ್ತೇವೆ. ಅದರಲ್ಲಿ ಸಕ್ಕರೆ ಖರ್ಚು, ಸೌದೆ ಖರ್ಚು ಇತ್ಯಾದಿ ಖರ್ಚುಗಳನ್ನು ತೆಗೆದರೆ ನಮಗೆ ಸಿಗುವುದು ಕೆ.ಜಿಗೆ 20-30 ರೂ ಮಾತ್ರ. ನಾವು 6-7 ದಿನಗಳಿಂದ ಸಕ್ಕರೆ ಆರತಿಯನ್ನು ತಯಾರಿಸಲು ನಾಲ್ಕು ಜನ ಸೇರಿ ಆರತಿಯನ್ನು ಮಾಡುತ್ತೇವೆ. ಕೆಲವೊಮ್ಮೆ ವ್ಯಾಪಾರ ಜೋರಾದರೆ, ಮೊತ್ತೊಮ್ಮೆ ಅತೀ ಮಂದಗತಿಯಲ್ಲಿ ಸಾಗುತ್ತದೆ, ಈ ಬಾರಿ ಉತ್ತಮ ಮಳೆ ಬೆಳೆ ಆದುದರಿಂದ ರೈತರು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿರುವುದರಿಂದ ನಮ್ಮ ವ್ಯಾಪಾರ ಜೋರಾಗಿ ನಡೆಯುತ್ತಿದೆ ಎಂದು ವೆಂಕಟೇಶ ಕುಂಬಳೇಕರ್ ಅವರು ತಿಳಿಸಿದರು.
Related Articles
Advertisement
ಒಟ್ಟಾರೆ ಈ ಸಕ್ಕರೆ ಆರತಿ ತಯಾರಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿದೆ.
ಸಕ್ಕರೆ ಆರತಿ ಮಾಡಲು ಮುಖ್ಯ ಕಟ್ಟಿಗೆಯ ಚಿತ್ರಗಳ ಹಲಿಗೆ. ಅವುಗಳು ಇದರೇ ಮಾತ್ರ ಆರತಿ ತಯಾರಿಸಲು ಬರುತ್ತದೆ. ಇಲ್ಲದಿದ್ದರೆ ಸಕ್ಕರೆ ಆರತಿ ಮಾಡಲು ಬರುವುದಿಲ್ಲ. ಇಂತಹ ಕಟ್ಟಿಗೆಯ ಮೇಲೆ ಚಿತ್ರ ಕೆತ್ತನೆ ಮಾಡುವವರು ಕಡಿಮೆಯಾಗಿದ್ದಾರೆ. ಸದ್ಯ ಮನೆಯಲ್ಲಿ ಇದ ಹಳೆ ಕಟ್ಟಿಗೆಯ ಚಿತ್ರದ ಹಲಿಗೆಗಳನ್ನು ಉಪಯೋಗಿಸಿಕೊಂಡು ಸಕ್ಕರೆ ಆರತಿಗಳನ್ನು ತಯಾರಿಸುತ್ತಿದ್ದೇವೆ.– ಲಕ್ಷ್ಮೀ ವೆಂಕಟೇಶ ಕುಂಬಳೇಕರ್,ಸಕ್ಕರೆ ಆರತಿ ತಯಾರಕರು ದೋಟಿಹಾಳ.