Advertisement

ರಸ್ತೆ ದಾಟಲು ವಾಹನ ಸವಾರರ ಪರದಾಟ

11:31 AM Jun 19, 2021 | Team Udayavani |

ಮುಂಡಗೋಡ: ಇಲ್ಲಿನ ಚಿಕ್ಕ ನೀರಾವರಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯಿಂದ ಯಲ್ಲಾಪುರ ರಸ್ತೆಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಪಾದಾಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಚಿಕ್ಕ ನೀರಾವಾರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ನಡುವೆ ಸಮನ್ವಯ ಇಲ್ಲದ್ದರಿಂದ ಕಳೆದ ಒಂದು ವರ್ಷದಿಂದ ಸವಾರರು ಮತ್ತು ಜನರು ಪರದಾಡುವಂತಾಗಿದೆ.

ಪಟ್ಟಣದ ಯಲ್ಲಾಪುರಮುಖ್ಯ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಕಳೆದ ವರ್ಷ ಇಲ್ಲಿನ ಸಣ್ಣ ನೀರಾವರಿ ಇಲಾಖೆ ಅಮ್ಮಾಜಿ ಕೆರೆಯಿಂದ ಹೆಚ್ಚುವರಿ ನೀರು ಹರಿದು ಹೋಗಲು ಅವೈಜ್ಞಾನಿಕವಾಗಿ ಕಂದಕ ತೋಡಿದ್ದರು. ಆದರೆ ಇದರಿಂದ ಆ ಭಾಗದ ರೈತರು ತಮ್ಮ ಗದ್ದೆಗಳಿಗೆ ಮಳೆ ನೀರು ಹರಿದು ಬೆಳೆ ಹಾನಿಯಾಗುತ್ತದೆ. ಹಾಗೂ ನಿಯಮದಂತೆ ಕಾಲುವೆ ನಿರ್ಮಿಸಿಲ್ಲ ಎಂದು ಪ್ರತಿಭಟಿಸಿ ನ್ಯಾಯಾಲಯದ ಮೊರೆ ಹೋಗಿದ್ದು ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಒಟ್ಟಿನಲ್ಲಿ ಚಿಕ್ಕ ನೀರಾವಾರಿ ಇಲಾಖೆಯ ಬೇಜವಾಬ್ದಾರಿಯಿಂದ ಈ ವರ್ಷವು ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ.

ತಾಲೂಕಿನಾದ್ಯಂತ ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನೀರು ಕಂದಕಗಳಲ್ಲಿ ತುಂಬಿ ಹೆಚ್ಚಾಗಿ ರಸ್ತೆಯ ಮೇಲೆ ನಿಂತು ಕೆರೆಯಾಗಿದೆ. ಕಂದಕಗಳಿಂದ ತುಂಬಿಕೊಂಡು ಬಂದು ರಸ್ತೆಯ ಮೇಲೆ ನಿಂತ ನೀರು ದಾಟಿ ಹೋಗಲು ಸಾಹಸಪಡಬೇಕಾಗಿದೆ. ಇದಲದೇ ನೀರು ಹರಿದು ಹೋಗಲು ಮರಗಳ ಬುಡದ ಪಕ್ಕದಲ್ಲಿಯೇ ಅಗಲವಾದ ಕಂದಕಗಳನ್ನು ತೋಡುತ್ತಾ ಹೋಗಿದ್ದರು. ಇದರಿಂದ ಬೇರುಗಳು ಸಡಿಲಗೊಂಡು 4 ಮರಗಳು ಮತ್ತು ಮರದ ಬೃಹತ್‌ ಟೊಂಗೆ ಮುರಿದು ಬಿದ್ದಿದೆ. ಮುಂದಿನ ದಿನಗಳಲ್ಲಿಯೂ ಬೃಹತ್‌ ಮರಗಳು ಧರೆಗೆ ಉರುಳಬಹುದು ಎಂದುಆ ಭಾಗದ ರೈತರು ತಿಳಿಸಿದ್ದಾರೆ.  ಇದು ಲೋಕೋಪಯೋಗಿ ಇಲಾಖೆಗೆ ಸಂಬಂ ಸಿದ್ದು ಅವರನ್ನು ಕೇಳಿ ಎಂದು ಎಇಇ ಸಣ್ಣ ನೀರಾವರಿ ಇಲಾಖೆ ಗಿರೀಶ ಜೋಶಿ ಪ್ರತಿಕ್ರಿಯಿಸಿದರು.

ಕಳೆದ ವರ್ಷವೂ ನಾವು ಈ ಸ್ಥಳವನ್ನು ದಾಟಿ-ಹೋಗಲು ಪರದಾಡಿದೆವು. ಈಬಾರಿಯೂ ಅದೇ ಪರಿಸ್ಥಿತಿಯಾಗಿದೆ. ಬೈಕ್‌ ಸವಾರರು ಎದ್ದು-ಬಿದ್ದು ಹೋಗುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳೇನು ಮಲಗಿದ್ದಾರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. -ಅಕ್ಕಮ್ಮಾ ವಿ., ಕರವಳ್ಳಿ ಗ್ರಾಮದ ನಿವಾಸಿ.

Advertisement

ಚಿಕ್ಕ ನೀರಾವರಿ ಇಲಾಖೆಯವರು ಮೊದಲು ಕೋಡಿ ಹೋಗುವಮೂಲಮಾರ್ಗ ಪತ್ತೆ ಹಚ್ಚಿ ತೆರವುಗೊಳಿಸಿದರೆ ಈ ಸಮಸ್ಯೆ ಬಗೆ ಹರಿಯುತ್ತದೆ. ನೀರಾವರಿ ಇಲಾಖೆಯವರೇ ನಮ್ಮ ರಸ್ತೆಯನ್ನು ಆಕ್ರಮಿಸಿ ಅಪಾಯಕಾರಿ ಕಾಲುವೆ ನಿರ್ಮಿಸಿದ್ದಾರೆ. ರಸ್ತೆಹಾಳಾದರೆ ಮತ್ತು ಯಾವುದೇ ಅಪಾಯವಾದರೆ ಇವರೇ ಹೊಣೆಗಾರರಾಗಿದ್ದಾರೆ. ಈ ಬಗ್ಗೆ ಅವರ ಇಲಾಖೆಗೆ ಇಂದೇ ಪತ್ರ ಬರೆಯುತ್ತೇನೆ. ಇದರಲ್ಲಿ ನಮ್ಮ ಇಲಾಖೆಯಿಂದ ನಿರ್ಲಕ್ಷ್ಯವಿಲ್ಲ. -ವಿ.ಎಂ. ಭಟ್ಟ, ಪಿಡಬ್ಲ್ಯುಡಿ ಹೆಚ್ಚುವರಿ ಪ್ರಭಾರಿ ಎಇಇ

 

ಮುನೇಶ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next