Advertisement
ಸಮರೇಶ ಬಸು ಒಬ್ಬ ಹೆಸರಾಂತ ಬಂಗಾಲಿ ಲೇಖಕ. 1924ರಿಂದ 1988ರ ವರೆಗೆ ಜೀವಿಸಿದ್ದ ಬಸು ಹುಟ್ಟಿದ್ದು ಇಂದಿನ ಬಾಂಗ್ಲಾದೇಶದ ಢಾಕಾದಲ್ಲಿ, ಬೆಳೆದು ನೆಲೆಸಿದ್ದು ಕೋಲ್ಕತಾ ಪರಿಸರದಲ್ಲಿ. ಬಡತನವನ್ನೇ ಜೀವನದ ಊರುಗೋಲನ್ನಾಗಿ ಮಾರ್ಪಡಿಸಿಕೊಂಡ ಸಾಧಕರು. ಅಂದರೆ ಲೇಖನ ಸಾಹಿತ್ಯಕ್ಕೆ ಬಡತನವನ್ನು ಚೆನ್ನಾಗಿ ದುಡಿಸಿಕೊಂಡರು. ಒಂದು ಕಾಲದಲ್ಲಿ ತಲೆ ಮೇಲೆ ಮೊಟ್ಟೆಯನ್ನು ಇಟ್ಟು ಮಾರಿದ, ಕನಿಷ್ಠ ದಿನಗೂಲಿ ನೌಕರನಾಗಿ, ಫಿರಂಗಿ ಕಾರ್ಖಾನೆಯಲ್ಲಿ ದುಡಿದ ಬಡತನದ ಅನುಭವ ಇತ್ತು. ಕಾರ್ಮಿಕ ಸಂಘಟನೆ ಮತ್ತು ಕಮ್ಯೂನಿಸ್ಟ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. 1949-50ರಲ್ಲಿ ಇವರನ್ನು ಜೈಲಿಗೆ ಹಾಕಿದಾಗ ಜೈಲಿನಲ್ಲಿಯೇ “ಉತ್ತರಂಗ’ ಎಂಬ ಪ್ರಥಮ ಕೃತಿಯನ್ನು ರಚಿಸಿದರು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ವೃತ್ತಿಪರ ಬರೆಹಗಾರರಾದರು. 200 ಸಣ್ಣಕತೆಗಳು, 100 ಕಾದಂಬರಿಗಳನ್ನು ಬರೆದರು. ಬರವಣಿಗೆಯಲ್ಲಿ ರಾಜಕೀಯ ಚಟುವಟಿಕೆಯಿಂದ ಹಿಡಿದು ಕಾರ್ಮಿಕರು, ಲೈಂಗಿಕತೆ ವರೆಗೂ ಇತ್ತು. ಪುರಾಣ ಕ್ಷೇತ್ರವನ್ನೂ ಬಿಟ್ಟವರಲ್ಲ. “ಶಂಬ’ ಹೆಸರಿನಲ್ಲಿ ಪುರಾಣ ಮತ್ತು ಇತಿಹಾಸಗಳನ್ನು ಮರುಚಿಂತನೆಗೆ ಒಳಪಡಿಸಿದರು. ಇವರಿಗೆ ಮನಮುಟ್ಟಿದ ಘಟನೆ ಮೇ 8ರಂದು (ನಾಳೆ) ಆಚರಣೆಯಾಗುತ್ತಿರುವ ವಿಶ್ವ ತಾಯಂದಿರ ದಿನಕ್ಕೆ ಅನ್ವಯವಾಗುತ್ತದೆ.
Related Articles
Advertisement
ಮಾತು-ಬದುಕಿನ ತಾಳಮೇಳ: ದೊಡ್ಡ ದೊಡ್ಡ ಹುದ್ದೆಯಲ್ಲಿ ಅಲಂಕರಿಸಿದ ಮಕ್ಕಳ ಮರ್ಜಿಯಿಂದ ಮನೆಯಲ್ಲಿ ಏಕಾಂಗಿಯಾಗಿರುವ, ವೃದ್ಧಾಶ್ರಮದಲ್ಲಿರುವ ತಂದೆ, ತಾಯಿಗಳ ಸ್ಥಿತಿ ಇನ್ನೂ ಘನಗಂಭೀರ. ಇಂತಹ ಸ್ಥಿತಿಯಲ್ಲಿಯೂ ತನ್ನ ಮಗ, ಮಗಳು ಅಮೆರಿಕದಲ್ಲಿದ್ದಾರೆ, ಆಸ್ಟ್ರೇಲಿಯಾದಲ್ಲಿದ್ದಾರೆಂದು ಬೀಗುವ ತಂದೆತಾಯಿಗಳಿಗೂ ಕೊರತೆ ಏನಿಲ್ಲ. ಹೆತ್ತವರಿಂದಲೇ ಈ ಹಂತ ಮುಟ್ಟಿದ್ದೇವೆಂಬ ನೆನಪು ಮಕ್ಕಳಿಗೂ ಇಲ್ಲ, ಅಂತಹ ಸಂಸ್ಕಾರವನ್ನು ಹೆತ್ತವರೇ ಕೊಟ್ಟಿದ್ದಾರೆನ್ನಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಯಾಕಾದರೂ ಬದುಕಿದ್ದಾರೆ’ ಎಂದು ಹೇಳುವವರೂ ಇದ್ದಾರೆನ್ನುವುದು ಉತ್ಪ್ರೇಕ್ಷೆಯಲ್ಲ. ಈಗಂತೂ ಫೋಟೋ ಪೋಸ್ ಕೊಟ್ಟು, ಸ್ಟೇಟಸ್‌ನಲ್ಲಿ ಹಾಕಿದಷ್ಟೂ ಮನತಣಿಯದು. ಅತ್ತ ಹೆಣ ಇರುವಾಗಲೇ ಇತ್ತ ಹಣ-ಆಸ್ತಿಗಾಗಿ ನಡೆಯುವ ಮುಸುಕಿನ ಒಳ- ಹೊರಗಿನ ಕದನದ ನಡುವೆ ಸತ್ತ ಬಳಿಕ ಹರಿಯುವ ಕೃತಕ ಕಣ್ಣೀರು, ಮದುವೆಯಂತಹ ಸಮಾರಂಭಗಳಲ್ಲಿ ಕಂಡುಬರುವ ಕೃತಕ ನಗುವಿನ ಕಿಲಕಿಲ ಸದ್ದಿಗೆ ಯಾವುದೇ ಅರ್ಥವಿರುವುದಿಲ್ಲ. ಬದುಕಿದಂತೆ ನುಡಿಯುತ್ತಿರಬೇಕು ಅಥವಾ ನುಡಿದಷ್ಟಕ್ಕೆ ತಕ್ಕುನಾಗಿ ಬದುಕಬೇಕು ಎಂಬ ನೀತಿ ಅಳವಡಿಸಿಕೊಂಡರೆ ಉಳಿದೆಲ್ಲವೂ ಸ್ವಸ್ಥವಾಗುತ್ತದೆ.
ದೈವತ್ವವೆಲ್ಲಿ?: ನಮ್ಮೆಲ್ಲರ ಬಹುತೇಕ ಬದ್ಧತೆಯು ಲಾಭದ ಮೇಲೆ ಅವಲಂಬಿತವಾಗಿರುತ್ತದೆ. ಕುಂಭಮೇಳದಲ್ಲಿ ಕಂಡುಬಂದ ವ್ಯಕ್ತಿಯ ಬದ್ಧತೆಯೊಂದಿಗೆ ನಿಸ್ಪೃಹತೆ (ಗೀತೆಯಲ್ಲಿ ಕೃಷ್ಣ ಹೇಳಿದಂತೆ ಫಲಾಪೇಕ್ಷೆ ಇರದ ನಿಷ್ಕಾಮ ಕರ್ಮ) ಇರುವುದರಿಂದಲೇ ಬೆಲೆ ಕಟ್ಟಲಾಗದು. ಬೆಲೆ ಕಟ್ಟಲಾಗದ್ದೇ ದೈವತ್ವವಿರಬಹುದಲ್ಲವೆ? ಇಲ್ಲವಾದರೆ ದೈವತ್ವ ಇನ್ನೆಲ್ಲಿ ಇರುವುದು? ಹೀಗಾಗಿಯೇ ಸಮರೇಶರ ಚಿತ್ತವನ್ನು ಈ ದೃಶ್ಯ ಸೆರೆ ಹಿಡಿಯಿತು, ಆತನ ಪಾದದ ಧೂಳಿ ಹಣೆ ಮೇಲೇರಿತು. ಕಮ್ಯೂನಿಸ್ಟನ ಹಣೆಗೆ ಈ ಧೂಳು ಪ್ರಸಾದವಾಯಿತು.
-ಮಟಪಾಡಿ ಕುಮಾರಸ್ವಾಮಿ