ಕುಂಬಳೆ: ನಮ್ಮನ್ನು ಹೊತ್ತು ಹೆತ್ತು ಸಲಹುವ ತಾಯಿಯನ್ನು ದೇವರೆಂದು ಪೂಜಿಸುವ ನಾಡು ನಮ್ಮ ಭಾರತದೇಶ. ಇಂತಹ ಮಾನವೀಯ ಸಂಬಂಧಗಳು ಮರೆಯಾಗುತ್ತಿರುವ ಈ ಕಾಲದಲ್ಲಿ ಸನಾತನಧರ್ಮದ ಚಿಂತನೆಗಳ ತಳಹದಿಯಲ್ಲಿ ಆಧುನಿಕ ಸಮಾಜವನ್ನು ಕಟ್ಟಿ ಬೆಳೆಸುವ ಧ್ಯೇಯವನ್ನಿರಿಸಿಕೊಂಡು ನಡೆಯುತ್ತಿರುವ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ತಾಯಿಯ ತ್ಯಾಗವನ್ನೂ ಪಾವಿತ್ರ್ಯವನ್ನೂ ಸಾರುವ ವಿಶಿಷ್ಟವಾದ ಮಾತೃಪೂಜನ, ಮಾತೃಭೋಜನ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶಾಲಾ ಮಾತೃಸಮಿತಿಯ ಅಧ್ಯಕ್ಷೆ ಆಶಾ ಜಯಪ್ರಕಾಶ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭಾ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರಿನ ಚೀರುಂಬಾ ಕ್ರೆಡಿಟ್ ಕೋಪರೇಟಿವ್ ಸೊಸೆ„ಟಿಯ ಅಧ್ಯಕ್ಷೆ ಶಾಂತಾ ಅವರು ಮಕ್ಕಳನ್ನು ಬೆಳೆಸುವಲ್ಲಿ ತಾಯಿಯು ತೋರುವ ಕಾಳಜಿಯನ್ನೂ, ತ್ಯಾಗ ವನ್ನೂ ವಿವರಿಸಿ ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ಆಚರಿಸುತ್ತಿರುವ ಸಂಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿಥಿ ಕುಕ್ಕಾಡಿ ಮಹಿಳಾವೇದಿಕೆಯ ಅಧ್ಯಕ್ಷೆ ಸುಜಾತಾ ಚಂದ್ರಶೇಖರ್ ಅವರು ತಾಯಿಯ ಮೇಲಿನ ಆದರಾ ಭಿಮಾನಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಬಾರದೆಂದು ಮಕ್ಕಳಿಗೆ ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ನಿತ್ಯಾನಂದ ಯೋಗಾಶ್ರಮದ ಕಾರ್ಯ ಕರ್ತೆ ಕಮಲಾಕ್ಷಿ ಮೋನಪ್ಪ ಭಂಡಾರಿ, ಶಾಲಾ ಕ್ಷೇಮ ಸಮಿತಿಯ ಅಧ್ಯಕ್ಷ ರಘು ರಾಮ್, ಶಿಶುವಾಟಿಕಾ ಮಾತೃ ಸಮಿತಿಯ ಅಧ್ಯಕ್ಷೆ ತುಳಸಿ ಹಾಗೂ ಶಾಲಾ ಮುಖ್ಯಶಿಕ್ಷಕಿ ವಾರಿಜಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕ್ರೀಡಾಕೂಟ ಹಾಗೂ ಶಾಲಾ ಕಲಾಮೇಳದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿನಿಯರಾದ ಗಾಯತ್ರೀ ಹಾಗೂ ಅಜಿತಶ್ರೀ ಪ್ರಾರ್ಥಿಸಿದರು. ಶಿಕ್ಷಕಿಯರಾದ ರೇಖಾ ಪ್ರದೀಪ್ ನಿರೂಪಿಸಿ ದರು. ರೇಶ್ಮಾ ಎಸ್ ಸ್ವಾಗತಿಸಿ, ಸುನೀತಾ ಕೆ. ವಂದಿಸಿದರು.
ಪಾದಪೂಜೆ, ಕೈತುತ್ತು
ಮಾತೃಪೂಜನ ಕಾರ್ಯಕ್ರಮದ ಅಂಗವಾಗಿ ಮಕ್ಕಳು ತಮ್ಮ ತಾಯಂದಿರ ಪಾದಪೂಜೆಯನ್ನು ಮಾಡಿ ಆರತಿ ಬೆಳಗಿ ಆಶೀರ್ವಾದ ಪಡೆದರು. ಬಳಿಕ ನಡೆದ ಮಾತೃಭೋಜನ ಕಾರ್ಯಕ್ರಮದಲ್ಲಿ ಮಾತೆಯರು ಮಕ್ಕಳಿಗೆ ಕೈತುತ್ತು ನೀಡಿದರು.