Advertisement
ಲಡ್ಡು ಪ್ರಸಾದದಲ್ಲಿ ಅಪವಿತ್ರತೆಯನ್ನು ತುಂಬುವ “ದುರುದ್ದೇಶಪೂರಿತ ಪ್ರಯತ್ನಗಳು” ಎಂದು ಹೇಳಿದ್ದರ ಬಗ್ಗೆ ಪ್ರಕಾಶ್ ರಾಜ್ ಪ್ರಶ್ನೆಗಳನ್ನು ಎತ್ತಿರುವುದನ್ನು ಸನಾತನ ಧರ್ಮದ ಮೇಲಿನ ದಾಳಿ ಎಂದು ಪವನ್ ಕಲ್ಯಾಣ್ ಕರೆದಿದ್ದಾರೆ. ಏತನ್ಮಧ್ಯೆ, ಪವನ್ ಕಲ್ಯಾಣ್ ಅವರು ಆತಂಕವನ್ನು ಹರಡುವ ಬದಲು ಈ ಬಗ್ಗೆ ತನಿಖೆ ನಡೆಸಲಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
Related Articles
Advertisement
“ನಾನು ಸನಾತನ ಧರ್ಮದ ಬಗ್ಗೆ ತುಂಬಾ ಗಂಭೀರವಾಗಿರುತ್ತೇನೆ. ಅನೇಕ ವಿಮರ್ಶಕರು ಅಯ್ಯಪ್ಪ ಮತ್ತು ಸರಸ್ವತಿ ದೇವಿಯನ್ನು ಗುರಿಯಾಗಿಸಿದ್ದಾರೆ. ಸನಾತನ ಧರ್ಮಕ್ಕೆ ಅತ್ಯಂತ ಮಹತ್ವವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಹಿಂದೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇತರ ಧರ್ಮಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಉದ್ಭವಿಸಿದರೆ, ವ್ಯಾಪಕ ಆಂದೋಲನ ನಡೆಸಲಾಗುತ್ತಿತ್ತು ” ಎಂದು ಪವನ್ ಕಲ್ಯಾಣ್ ತಿರುಗೇಟು ನೀಡಿದ್ದಾರೆ.
ಪ್ರಕಾಶ್ ರಾಜ್ ಎಕ್ಸ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿ “ಪ್ರೀತಿಯ ಪವನ್ ಕಲ್ಯಾಣ್ ಅವರೇ ನಾನು ನಿಮ್ಮ ಪ್ರೆಸ್ ಮೀಟ್ ನೋಡಿದೆ.ನಾನು ಹೇಳಿದ್ದು ಮತ್ತು ನೀವು ತಪ್ಪಾಗಿ ಅರ್ಥೈಸಿಕೊಂಡಿರುವುದು ಅಚ್ಚರಿ ತಂದಿದೆ.ನಾನು ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದೇನೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಹಿಂತಿರುಗುತ್ತೇನೆ.ಅಷ್ಟರಲ್ಲಿ, ನೀವು ನನ್ನ ಪೋಸ್ಟ್ ಸರಿಯಾಗಿ ನೋಡಿ ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.