Advertisement

ವಾಟ್ಸ್‌ಆ್ಯಪ್‌ನಲ್ಲಿ ಮಗನ ಮದುವೆ ವೀಕ್ಷಿಸಿ ಹರಿಸಿದ ತಂದೆ-ತಾಯಿ!

06:34 AM May 14, 2020 | Suhan S |

ಹೊಸನಗರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ವಂತಃ ಮಗನ ಮದುವೆಗೆ ಹೋಗಲಾರದೇ ವಾಟ್ಸ್‌ಆ್ಯಪ್‌ ವಿಡಿಯೋ ಮೂಲಕ ತಂದೆ-ತಾಯಿ ಮಗನಿಗೆ ಹಾರೈಸಿದ ಅಪರೂಪದ ಘಟನೆ ತಾಲೂಕಿನ ಕೊಡೂರು ಗ್ರಾಮದಲ್ಲಿ ನಡೆಯಿತು.

Advertisement

ತಾಲೂಕಿನ ಕೊಡೂರು ಜ್ಯೋತಿಷಿ ಲಕ್ಷ್ಮೀ ನಾರಾಯಣ ಜೋಯಿಸ್‌ ಹಾಗೂ ಅಲ್ಲಿನ ಗ್ರಾಪಂ ಸದಸ್ಯೆ ಜಯಲಕ್ಷ್ಮೀ ಅವರ ಪುತ್ರ ಶಿವಶ್ಚಂದ್ರ ಜೋಯ್ಸ ಅವರ ವಿವಾಹ ಬುಧವಾರ ಬೆಳಗ್ಗೆ 7.30ಕ್ಕೆ ವೃಷಭ ಲಗ್ನ ಶುಭ ಮುಹೂರ್ತದಲ್ಲೇ ಬೆಂಗಳೂರಿನ ಶೈಲಜಾ ಮತ್ತು ಚಂದ್ರಶೇಖರ್‌ ಅವರ ಪುತ್ರಿ ಕಾವ್ಯ ಅವರೊಂದಿಗೆ ಪುರೋಹಿತರ ಹಾಗೂ ಆಯ್ದ ಬಂಧು-ಮಿತ್ರರ ಸಮ್ಮುಖದಲ್ಲಿ ನೆರವೇರಿತು.

ಬೆಂಗಳೂರು ಬಸವನಗುಡಿಯ ಶಂಕರಪುರಂ ಪಂಪಮಹಾಕವಿ ರಸ್ತೆ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂದಿರದಲ್ಲಿ ಬೆಳಗ್ಗೆ ವಿವಾಹ ಸಂಭ್ರಮ ನಡೆಸಲು ಈ ಮೊದಲೇ ನಿಶ್ಚಯಿಸಿದ್ದು ಮಹಾಮಾರಿ ಕೋವಿಡ್ ವಿಶ್ವದಲ್ಲೇ ಆತಂಕ ಸೃಷ್ಟಿ ಮಾಡಿದ ಕಾರಣ ಸಂಭ್ರಮದ ಅದ್ಧೂರಿ ಮದುವೆಯನ್ನು ರದ್ದುಗೊಳಿಸಿ ಅಪಾರ್ಟಮೆಂಟಿನ ಕೆಳ ಅಂತಸ್ತಿನಲ್ಲಿ ಸರಳವಾಗಿ ನಡೆಸಲಾಯಿತು.

ಬೆಂಗಳೂರಿನಲ್ಲಿ ಸಾಪ್ಟವೇರ್‌ ಇಂಜಿನಿಯರ್‌ ಆಗಿರುವ ಶಿವಸ್‌ ಚಂದ್ರ ಜೋಯಿಸ್‌ ಅವರು ಭರತನಾಟ್ಯ ಕಲಾವಿದೆ ಶಿಕ್ಷಕಿ ಕಾವ್ಯಳ ಕೈಹಿಡಿದಾಗ 300 ಕಿಲೋ ಮೀಟರ್‌ ದೂರದಿಂದಲೇ ವರನ ತಂದೆ-ತಾಯಿ ಹರಿಸಿದರು. ಮಹಾಮಾರಿ ಕೋವಿಡ್ ಸಂಬಂಧ ಮದುವೆಗೆ ಹೋಗಲಾಗದ ಕಾರಣ ತಮ್ಮ ಮನೆಯಲ್ಲಿದ್ದ ಟಿವಿಯಲ್ಲಿ ವಾಟ್ಸಪ್‌ ಮೂಲಕ ಬರುತ್ತಿದ್ದ ನೇರಪ್ರಸಾರವನ್ನು ಸಂಭ್ರಮದ ಕ್ಷಣಗಳನ್ನು ತುಂಬಿಕೊಂಡು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next