Advertisement

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

09:10 AM Apr 18, 2024 | Team Udayavani |

ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ಸಾಂಸ್ಕೃತಿಕ, ಆರ್ಥಿಕ ಅಥವಾ ರಾಜಕೀಯ  ಕ್ಷೇತ್ರ, ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಮಹಿಳೆಯರು.

Advertisement

ಅಷ್ಟೆ ಅಲ್ಲ ಮನೆಯಲ್ಲಿ ಒಬ್ಬ ತಾಯಿಯಾಗಿ, ಗಂಡನಿಗೆ ಹೆಂಡತಿಯಾಗಿದ್ದುಕೊಂಡು ಮನೆಯ ಸಂಸಾರವನ್ನು ನಿಭಾಯಿಸುವುದರಲ್ಲಿ ಹಿಂದೇಟು ಹಾಕಿಲ್ಲ. ಕೇವಲ ಸೂರಿನ ಅಡಿಯ ಕೆಲಸಕ್ಕೆ ಸೀಮಿತವಾಗಿದ್ದ ಮಹಿಳೆ ಇಂದು ಎಲ್ಲ  ಕ್ಷೇತ್ರಗಳಲ್ಲಿಯೂ ಕೂಡ ಸಾಧನೆ ಮಾಡುತ್ತಿರುವಂತಹದ್ದು ಸಂತಸದ ವಿಷಯ.

ಆದರೆ ಮಹಿಳೆ ಪ್ರಸ್ತುತ ಸಂದರ್ಭದಲ್ಲಿ ವೈಜ್ಞಾನಿಕವಾಗಿ ತಾಂತ್ರಿಕವಾಗಿ ಶೈಕ್ಷಣಿಕವಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಕೂಡ ಆ ಸಾಧನೆ ಪೈಕಿಯಲ್ಲಿರುವಂತಹದ್ದು ಕೇವಲ ಕೆಲವೇ ಕೆಲವು ಹೆಣ್ಣು ಮಕ್ಕಳು ಮಾತ್ರ.

ಅನೇಕ ಹೆಣ್ಣು ಮಕ್ಕಳ ಸ್ಥಿತಿ ಇಂದು ಕೆಟ್ಟ ವಿಕೃತ ಮನಸ್ಸುಗಳ ಕೈಗೆ ಸಿಕ್ಕಿ ಅತ್ಯಾಚಾರ ಮಾಡುವುದು, ಆಸಿಡ್‌ ದಾಳಿ ಮಾಡುವುದು, ಬಾಲ್ಯ ವಿವಾಹ ಮಾಡುವುದು, ವರದಕ್ಷಿಣೆ ಕಿರುಕುಳ ನೀಡುವುದು, ಲೈಂಗಿಕ ದೌರ್ಜನ್ಯ ಎಸಗುವುದು ಹಾಗೂ ಇನ್ನಿತರ ಕೌಟುಂಬಿಕ ಕಲಹಗಳಿಗೆ ಹೆಣ್ಣನ್ನೇ ಗುರಿಯಾಗಿಸಿಕೊಂಡು ಚಿತ್ರ ಹಿಂಸೆ ಕೊಡುತ್ತಿರುವಂತಹ ಸನ್ನಿವೇಶಗಳನ್ನು ನಾವು ಇಂದು ನೋಡಬಹುದು.

ಭ್ರೂಣ ಹತ್ಯೆಗಳ ಸಂಖ್ಯೆಯು ಕೂಡ ಇತ್ತೀಚಿಗೆ ಹೆಚ್ಚಾಗುತ್ತದೆ. ಅಷ್ಟೆಲ್ಲ ನೋವಿನಲ್ಲಿಯೂ ಹೆಣ್ಣು ಒಳ್ಳೆಯದನ್ನೇ ಬಯಸುತ್ತಾಳೆ. ಇದು ಅವಳಲ್ಲಿರುವ ಮಮತೆಯ ಗುಣ. ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಕೇವಲ ಒಂದಷ್ಟು ಮಹಿಳೆಯರು ಸಾಧನೆ ಮಾಡಿದರಷ್ಟೇ ಸಾಲದು ಪ್ರತಿಯೊಂದು ಹೆಣ್ಣು ಮಗುವಿಗೂ ಯಾವುದೇ ರೀತಿಯ ಜೀವ ಭಯವಿಲ್ಲದೆ ನಿರ್ಭಯವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ತಾನೇ ಸ್ವಂತ ನಿರ್ಧಾರದ ಮೂಲಕ ಸ್ವಾವಲಂಬಿಯಾಗಿ ನಿಲ್ಲುವಂತಹ ಅವಕಾಶವನ್ನು ಈ ಸಮಾಜ ನೀಡಬೇಕು ಆಗ ಮಾತ್ರ ಹೆಣ್ಣು ಮಕ್ಕಳು ಮತ್ತಷ್ಟು ಸಮಾಜದ ಮುಂದೆ ಬಂದು ಸಾಧನೆ ಮಾಡಲು ಸಾಧ್ಯ.

Advertisement

ಪ್ರಪಂಚದಲ್ಲಿ ಹಾಗೂ ನಮ್ಮ ದೇಶದಲ್ಲಿ ಅನೇಕ ಅತ್ಯಾಚಾರಗಳ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಸನ್ನಿವೇಶಗಳಲ್ಲಿ ಕೇವಲ ಹೋರಾಟಗಳನ್ನಷ್ಟೇ ಮಾಡಿ ಸುಮ್ಮನಾದರೆ ಆ ಹೆಣ್ಣು ಮಗುವಿಗೆ ನ್ಯಾಯ ದೊರೆತಂತಾಗುವುದಿಲ್ಲ, ತಪ್ಪು ಮಾಡಿದವನಿಗೆ ಕಠಿಣ ಶಿಕ್ಷೆಯನ್ನು ನೀಡಿದಾಗ ಮಾತ್ರ ಮುಂದೆ ಮತ್ಯಾರು ಆ ರೀತಿಯ ತಪ್ಪುಗಳನ್ನು ಮಾಡಲು ಬರುವುದಿಲ್ಲ, ಶೋಷಣೆಗಳ ಸರಮಾಲೆಗಳನ್ನು ಹೊತ್ತಿರುವಂತಹ ಹೆಣ್ಣನ್ನು ಗುಡಿ ಗೋಪುರಗಳ ಮುಂದೆ ತಾಯಿ ಎಂದು ಪೂಜಿಸಿದರೆ ಏನು ಅರ್ಥವಿರುವುದಿಲ್ಲ ಅವಳಿಗೆ ಸಮಾನತೆಯನ್ನು ಒದಗಿಸಿಕೊಡಬೇಕು ಸಮಾಜದಲ್ಲಿ ಯಾವುದೇ ರೀತಿಯ ಭಯವಿಲ್ಲದೆ ಧೈರ್ಯವಾಗಿ ಎಲ್ಲಾ ರೀತಿಯ ಸಮಸ್ಯೆಗಳನ್ನ ಭೇದಿಸಿ ನಿಲ್ಲುವಂತಹ ಶಕ್ತಿ ಅವಳಿಗೆ ಪ್ರಕೃತಿದತ್ತವಾಗಿ ದೊರೆತ್ತಿದ್ದರೂ ಕೂಡ ಸಮಾಜದಿಂದಲೂ ಪ್ರೋತ್ಸಾಹ ಬೇಕೆ ಬೇಕು.

-ಅಂಬಿಕಾ ಬಿ.ಟಿ.

ಹಾಸನ

Advertisement

Udayavani is now on Telegram. Click here to join our channel and stay updated with the latest news.

Next