ಬೆಂಗಳೂರು : ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಭೇಟಿ ನೀಡಿ, ಸೋಮಶೇಖರ್ ತಾಯಿಯ ಜತೆ ಮಾತನಾಡಿದ್ದಾರೆ.
ಸೋಮಶೇಖರ್ ತಾಯಿ ಸೀತಮ್ಮ ತಿಮ್ಮೇಗೌಡರ ಎಸ್ ಎಂ ಕೃಷ್ಣರ ದೊಡ್ಡ ಅಭಿಮಾನಿಯಂತೆ. ಈ ಕಾರಣಕ್ಕೆ ಮಗನ ಜೊತೆ ನಾನು ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಬೇಕು ಎಂದು ತಮ್ಮ ಆಸೆಯನ್ನು ಹೇಳಿಕೊಂಡಿದ್ದರಂತೆ.
ಅಮ್ಮನ ಆಸೆಯನ್ನು ಈಡೇರಿಸಿದ ಸೋಮಶೇಖರ್, ತಮ್ಮ ಮನೆಗೆ ಕೃಷ್ಣರನ್ನು ಕರೆದೊಯ್ದಿದ್ದಾರೆ. ಹಲವು ದಿನಗಳ ಆಸೆ ಪೂರೈಸಿದ ಮಗ ಸೋಮಶೇಖರ್ ತಾಯಿಯ ಸಂತಸ ಕಂಡು ಹರ್ಷಗೊಂಡರು. ಸೋಮಶೇಖರ್ ಆಸೆ ತಿಳಿದ ಎಸ್ ಎಂ ಕೃಷ್ಣ, ಹಿರಿಯರಾದ ತಾಯಿ ನಮ್ಮ ಮನೆವರೆಗೆ ಬರುವುದು ಬೇಡ. ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಸೋಮಶೇಖರ್ ಮನೆಗೆ ಭೇಟಿ ನೀಡಿದ್ದಾರೆ.