ಸಕಲೇಶಪುರ: ಮಳೆಯಿಂದ ಮನೆ ಕಳೆದುಕೊಂಡ ಬಡ ಕುಟುಂಬವೊಂದು ಪರಿಹಾರದ ಹಣ ಪಡೆಯಲು ಇನ್ನು ಪರದಾಡುತ್ತಿದ್ದು ಕೂಡಲೇ ಈ ಬಡಕುಟುಂಬಕ್ಕೆ ಹಣ ಬಿಡುಗಡೆ ಮಾಡಿಸಲುಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಅಧಿಕೃತವಲ್ಲ ಎಂದಿದ್ದರು: ತಾಲೂಕಿನ ಬೆಳಗೊಡು ಹೋಬಳಿಯ ಕೂಡನಹಳ್ಳಿಗ್ರಾಮದ ಕಡು ಬಡ ಕುಟುಂಬದಯುವಕ ಹರೀಶ್ ಹಾಗೂ ಆತನತಾಯಿ ವಾಸವಿದ್ದ ಮನೆ ಕಳೆದ ವರ್ಷಆ.6ರ 2020 ರಂದು ಬಿದ್ದ ಭಾರೀ ಮಳೆಗಾಳಿಗೆ ಮನೆಗೆ ಹಾನಿಯಾಗಿತ್ತು. ಈಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಕರೆಸಿ ಸ್ಥಳಮಹಜರು ಮಾಡಿದಾಗ ಶೇ.80 ಹಾನಿಯಾಗಿದೆ ಎಂದು ಅಂದಾಜಿಸಿ ಮನೆಯ ಒಟ್ಟು ಮೌಲ್ಯ 5 ಲಕ್ಷ. ಸುಮಾರು 4 ಲಕ್ಷ ನಷ್ಟವಾಗಿದೆ ಎಂದು ವರದಿ ತಯಾರಿಸಲಾಯಿತು. ಆದರೆ ಅಂತಿಮವಾಗಿ ತಹಶೀಲ್ದಾರ್, ರಾಜಸ್ವನಿರೀಕ್ಷಕರು ನೀಡಿದ ವರದಿಯಲ್ಲಿ ಈಮನೆ ಅಧಿಕೃತವಲ್ಲ ಎಂದು ಬಂದಿದ್ದರಿಂದ ಮತ್ತೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಅಧಿಕಾರಿಗಳು ಗಮನಹರಿಸಲಿ: ಈ ವಿಷಯವಾಗಿ ಕಚೇರಿಗೆ ಅಲೆದು ಅಲೆದು ಎಲ್ಲಾ ದಾಖಲೆ ಪತ್ರಗಳನ್ನುನೀಡಿದ ಫಲವಾಗಿ ರಾಜಸ್ವ ನಿರೀಕ್ಷಕರುಮಾ.22ರ 2021 ರಲ್ಲಿ ಮನೆ ಅಧಿಕೃತವಾಗಿದೆ. ಪರಿಹಾರಕ್ಕೆ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು 7 ತಿಂಗಳಕಾಲ ಅಲೆಸಿ ಮತ್ತೂಮ್ಮೆ ಬೆಲೆ 3 ಲಕ್ಷಕ್ಕೆಇಳಿಸಿ ವರದಿ ನೀಡಿದರು. ಇದಾದ ನಂತರ ಮುಂದಿನ ಹಂತಕ್ಕೆ ಕಳುಹಿಸುವಂತೆ ಅವರಲ್ಲಿ ಮನವಿ ಮಾಡಿದರೂಅಲ್ಲಿ ಹೋಗು, ಇಲ್ಲಿ ಹೋಗು ಅವರ ಬಳಿ ಹೋಗು ಎಂದು ಮತ್ತೆ ಅಲೆದಾಡಿಸುತ್ತಿದ್ದಾರೆ.
ಪರಿಹಾರಕ್ಕಾಗಿ ಅಲೆದಾಡಿ ಸುಸ್ತಾಗಿರುವ ಬಡ ಯುವಕ ಹರೀಶ್ ಹಾಗೂ ಆತನ ತಾಯಿ ಮುಂದೇನು ಮಾಡುವುದು ಎಂದುತೋಚದೆ ಆತಂಕಕ್ಕೆ ಒಳಗಾಗಿದ್ದಾರೆ. ಈಹಿನ್ನೆಲೆಯಲ್ಲಿ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.
ಮಳೆಯಿಂದ ಮನೆ ಕುಸಿತದ ಕುರಿತು ಮಾಹಿತಿ ಪಡೆಯಲಾಗುವುದು. ನಂತರ ಮುಂದಿನ ಕ್ರಮ ಕೈಗೊಳ್ಳಲು ಹೇಳಲಾಗುವುದು.
● ಜೈಕುಮಾರ್, ತಹಶೀಲ್ದಾರ್
ಅಧಿಕಾರಿಗಳು ಕೇಳಿದ್ದ ಎಲ್ಲಾ ದಾಖಲೆಗಳನ್ನುನೀಡಲಾಗಿದೆ. ಮನೆ ಪರಿಹಾರಕ್ಕಾಗಿ ಅಲೆದು ಅಲೆದು ಸಾಕಾ ಗಿದೆ. ನನಗೆ ನ್ಯಾಯ ಬೇಕು
.●ಹರೀಶ್, ನೊಂದವ
-ಸುಧೀರ್ ಎಸ್.ಎಲ್