Advertisement

2024 ರ ಚುನಾವಣೆ ವೇಳೆ ಪರಿವಾರವಾದಿಗಳಿಂದ ಅಯೋಧ್ಯೆಯಲ್ಲಿ ಕರಸೇವೆ : ಯೋಗಿ

01:19 PM Feb 26, 2022 | Team Udayavani |

ಲಕ್ನೋ : 2024 ರ ಲೋಕಸಭಾ ಚುನಾವಣೆಯ ಸಮಯಕ್ಕೆ ನಾವು ಹಿಂತಿರುಗಿದರೆ, ಈ ಪರಿವಾರವಾದಿಗಳಲ್ಲಿ ಹೆಚ್ಚಿನವರು ಅಯೋಧ್ಯೆಯಲ್ಲಿ ರಾಮಭಕ್ತರೊಂದಿಗೆ ‘ಕರಸೇವೆ’ ಮಾಡುವುವುದನ್ನು ಕಾಣಬಹುದು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಪಕ್ಷಗಳನ್ನು ಲೇವಡಿ ಮಾಡಿದ್ದಾರೆ.

Advertisement

ಅಂಬೇಡ್ಕರ್ ನಗರದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಅನ್ನು ನಂಬುತ್ತದೆ ಎಂದರು.

ಆನೆ ಅಲ್ಲಿ ಇಲ್ಲಿ ಮಲಗುತ್ತಿದೆ…ಸೈಕಲ್ ಅನ್ನು ಸುಲಭವಾಗಿ ಪಂಕ್ಚರ್ ಮಾಡಬಹುದು… ಬಡವರ ಪಡಿತರ ತಿಂದವರಿಗೆ ಬುಲ್ಡೋಜರ್‌ಗಳನ್ನು ಇಟ್ಟಿದ್ದೇವೆ. ಬುಲ್ಡೋಜರ್‌ನ ಶಕ್ತಿಯು ನಿರ್ಮಾಣಕ್ಕಾಗಿ ಮತ್ತು ಮಾಫಿಯಾಗಳು, ಭ್ರಷ್ಟ ಮಂತ್ರಿಗಳ ಅಕ್ರಮ ಆಸ್ತಿಯನ್ನು ನೆಲಸಮಗೊಳಿಸಲು ಬಳಸಲ್ಪಡುತ್ತದೆ ಎಂದು ಬಿಎಸ್ ಪಿ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

4 ಹಂತದ ಮತದಾನದ ನಂತರ, ಬಿಜೆಪಿ ಪರ ಅಲೆ ಇದೆ ಮತ್ತು ಅದು ಸಂಪೂರ್ಣ ಬಹುಮತವನ್ನು ಪಡೆಯುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಮತ್ತೊಮ್ಮೆ ಬಿಜೆಪಿ 300 ಸ್ಥಾನಗಳ ಗಡಿ ದಾಟಲಿದೆ ಎಂದು ಯೋಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next