ಗಣತಿ ನಿರ್ದೇಶನಾಲಯ ಬಿಡುಗಡೆ ಮಾಡಿದ ವರದಿಯು ಈ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಕೆಲವೇ ಕೆಲವು ಸಾವಿರ ಜನರು ಈ ಭಾಷೆಗಳನ್ನು ಮಾತ ನಾಡುತ್ತಿದ್ದು, ದೇಶದಲ್ಲಿ ಸುಮಾರು 40 ಭಾಷೆಗಳನ್ನು 10 ಸಾವಿರಕ್ಕಿಂತಲೂ ಕಡಿಮೆ ಜನರು ಮಾತನಾಡುತ್ತಿದ್ದಾರೆ. ಹೀಗಾಗಿ ಇವು ಅಳಿವಿನಂಚಿಗೆ ಸಾಗುತ್ತಿವೆ ಎಂದು ಪರಿಗಣಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
Advertisement
ದೇಶದಲ್ಲಿರುವ 22 ಅಧಿಸೂಚಿತ ಭಾಷೆಗಳ ಹೊರತಾಗಿ, 31 ಇತರ ಭಾಷೆಗಳಿದ್ದು, ಅವುಗಳಿಗೆ ಆಯಾಯ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಧಿಕೃತ ಭಾಷೆ ಸ್ಥಾನಮಾನ ವನ್ನು ನೀಡಿವೆ ಎಂಬ ಅಂಶವನ್ನೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಸಂಶೋಧನೆ ನಡೆಸಿದ್ದು, ವಿಶೇಷ ಯೋಜನೆ ಯಡಿಯಲ್ಲಿ ಇದು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಗುರುತಿಸಿ ರಕ್ಷಿಸುವ ಕೆಲಸ ಮಾಡುತ್ತಿದೆ. ವ್ಯಾಕರಣ ವಿವರಗಳು, ಶಬ್ದಕೋಶಗಳು, ಭಾಷೆಯ ಮೂಲಾಂಶಗಳು, ಇತರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. 1,635 ವೈವಿಧ್ಯದ ಭಾಷೆ!: ದೇಶದಲ್ಲಿ ಒಟ್ಟು 1,635 ವೈವಿಧ್ಯದ ಮಾತೃಭಾಷೆಗಳಿವೆ. 234 ಗುರುತಿಸಬಹುದಾದ ಮಾತೃಭಾಷೆಗಳು ಮತ್ತು 22 ಪ್ರಮುಖ ಭಾಷೆಗಳಿವೆ ಎಂದು ಗಣತಿಯ ದತ್ತಾಂಶದಲ್ಲಿ ವಿವರಿಸಲಾಗಿದೆ.