ಯಳಂದೂರು: ಕಳೆದ ನಾಲ್ಕೈದು ದಿನ ಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನಲ್ಲಿ 10 ಕ್ಕೂ ಹೆಚ್ಚು ಮನೆಯ ಗೋಡೆ ಕುಸಿದು ಬಿದ್ದ ಘಟನೆಗಳು ಸಂಭವಿಸಿದೆ.
ಪಟ್ಟಣ ಸೇರಿದಂತೆ ತಾಲೂಕಿನ ಕೆಸ್ತೂರು, ಹೊನ್ನೂರು, ದುಗ್ಗಹಟ್ಟಿ ಸೇರಿದಂತೆ 10ಕ್ಕೂ ಹೆಚ್ಚು ಮನೆಯ ಗೋಡೆಗಳು ಕುಸಿದ್ದು ಹೋಗಿದ್ದು, ಇದ್ದರಿಂದ ಮನೆಗಳಲ್ಲಿ ಜೀವನ ನಡೆಸಲು ಬಹಳ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊನ್ನೂರು ಗ್ರಾಮದ ಮಹದೇವಮ್ಮ, ಕೆಸ್ತೂರು ಗ್ರಾಮದ ಜಯಮ್ಮ, ಯಳಂ ದೂರು ಪಟ್ಟಣ ಸರೋಜಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕನ ಪ್ರಜೋದನಕಾರಿ ಭಾಷಣ
ಪರಿಹಾರಕ್ಕೆ ಮೊರೆ: ಮಳೆ ಪ್ರಮಾಣ ಹೆಚ್ಚಾದ ಕಾರಣ ಹೊಲದಲ್ಲ ಬೆಳೆದ ರಾಗಿ, ಜೋಳ, ಬೆಳೆಕೂಡ ಹಾಳಾಗಿದೆ. ಇದೇ ವೇಳೆ ಮನೆಯ ಗೋಡೆಯೂ ಕುಸಿದಿದೆ. ಮನೆಯಲ್ಲಿ ಮಹಿಳೆಯರು, ಮಕ್ಕಳು ಇದ್ದಾರೆ. ಜೀವನ ನಡೆಸುವುದು ದುಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಮಗೆ ಸೂಕ್ತಪರಿಹಾರ ನೀಡಬೇಕೆಂದು ನಿವಾಸಿಗಳ ಆಗ್ರಹಿಸಿದ್ದಾರೆ.
ತಹಶೀಲ್ದಾರ್ ಭರವಸೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇದುವರೆಗೆ 10ಕ್ಕೂ ಹೆಚ್ಚು ಮನೆ ಗೋಡೆಗಳು ಕುಸಿದು ಬಿದ್ದು ಹಾನಿಯಾಗಿರುವ ಬಗ್ಗೆ ಗ್ರಾಮ ಲೆಕ್ಕಧಿ ಕಾರಿಗಳಿಂದ ಮಾಹಿತಿ ನೀಡಿದ್ದಾರೆ. ಇವು ಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಗತ್ಯ ದಾಖಲೆಯಗಳಾದ ಅಸೆಸ್ ಮೆಂಟ್, ಫೋಟೋ ಅರ್ಜಿ ನೀಡಿದ್ದಾರೆ. ಶೀಘ್ರ ಪರಿ ಹಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸಲಾ ಗುವುದು ಎಂದು ತಹಶೀಲ್ದಾರ್ ಜಯ ಪ್ರಕಾಶ್ ಭರವಸೆ ನೀಡಿದ್ದಾರೆ.