Advertisement
ಇಂಥ ಕ್ರಮಗಳನ್ನು ಕೈಗೊಂಡದ್ದರಿಂದಲೇ 2022-23ನೇ ಸಾಲಿನ ಲ್ಲಿ ಶೇ.58 ಕಾರ್ಪೊರೇಟ್ ತೆರಿಗೆ ಸಂಗ್ರಹವಾಗಲು ಕಾರಣವಾಯಿತು. ಜತೆಗೆ ತೆರಿಗೆ ವ್ಯವಸ್ಥೆ ಸರಳೀಕರಣಗೊಳಿಸಿದ್ದು ಕೂಡ ಪಾವತಿದಾರರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಿದೆ. ರಿಟರ್ನ್ಸ್ ಸಲ್ಲಿಕೆ ಬಳಿಕ ಅದನ್ನು ಕ್ಷಿಪ್ರವಾಗಿ ಮೌಲ್ಯಮಾಪನ ಮಾಡಿ ಕ್ಲೇಮುಗಳನ್ನು ಪಡೆಯುವ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದೆ. ಇದು ಕೂಡ ತೆರಿಗೆದಾರರ ಮನ ಗೆಲ್ಲುವಲ್ಲಿ ಸಾಧ್ಯವಾಗಿದೆ. ಹೊಸ ತೆರಿಗೆ ವ್ಯವಸ್ಥೆಯನ್ನು 2020ರಲ್ಲಿ ಜಾರಿ ಮಾಡಲಾಗಿತ್ತು. ಇದನ್ನು ಕಳೆದ ವರ್ಷದಿಂದ ಕಡ್ಡಾಯಗೊಳಿಸಲಾಗಿತ್ತು. ಆದರೂ ಹಳೇ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ಇಳಿಕೆ
ಈಕ್ವಿಟಿಯಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮಾಡುವ ಹೂಡಿಕೆ ವಿಧಿಸಲಾಗುವ ಕ್ಯಾಪಿಟಲ್ ಗೈನ್ ಟ್ಯಾಕ್ಸ್ (ಬಂಡವಾಳ ಗಳಿಕೆ ತೆರಿಗೆ) ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಪ್ರಸ್ತುತ ಊ ತೆರಿಗೆಯ ಪ್ರಮಾಣ ಅದು ಶೇ.15ರಷ್ಟು ಇದ್ದು ಅದನ್ನು ಶೇ.20ರಷ್ಟಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಅದೇ ರೀತಿ 12 ತಿಂಗಳಿಗಿಂತ ಹೆಚ್ಚು ಅವಧಿಯನ್ನು ಹೊಂದಿರುವ ಹೂಡಿಕೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಶೇ.10ರಿಂದ ಶೇ.12.5ಕ್ಕೆ ಹೆಚ್ಚಿಸುವ ಪ್ರಸ್ತಾಪ ಸರಕಾರದ ಮುಂದೆ ಇದೆ. ಈಕ್ವಿಟಿ ಆಧಾರಿತ ಮ್ಯೂಚ್ಯುವಲ್ ಫಂಡ್‌ಗಳು, ಉದ್ದಿಮೆ ಆಧಾರಿತ ಟ್ರಸ್ಟ್‌ಗಳ ಮೇಲೆ ವಿಧಿಸಲಾಗುವ ಅಲ್ಪಾವಧಿ ಬಂಡವಾಳ ತೆರಿಗೆಯನ್ನು ಶೇ.15ರಿಂದ ಶೇ.20ಕ್ಕೆ ಏರಿಕೆ ಮಾಡಲಾಗಿದೆ. ಬಾಂಡ್‌ಗಳು, ಡಿಬೆಂಚರ್‌ಗಳ ಮೇಲೆ ಮಾಡುವ ದೀರ್ಘಾವಧಿ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಮಿತಿಯನ್ನು ಶೇ.20ರಿಂದ ಶೇ.12.5ಕ್ಕೆ ಇಳಿಕೆ ಮಾಡಲು ಈ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಬಾಂಡ್‌ಗಳು ಮತ್ತು ಡಿಬೆಂಜರ್ ಕ್ಷೇತ್ರಗಳಿಗೆ ಸಂಬಂಧಿಸಿದ ಅಲ್ಪಾವಧಿ ಕ್ಯಾಪಿಟಲ್ ಗೈನ್ ಟ್ಯಾಕ್ಸ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
Related Articles
Advertisement