ಒಂದು ಕಪ್ ನೆನೆಸಿದ ಹೆಸರುಬೇಳೆ, 1 ಕಪ್ ತುಪ್ಪ, 1 ಕಪ್ ಸಕ್ಕರೆ, 50 ಗ್ರಾಂ ಖೋವಾ, 2 ಚಿಟಿಕೆ ಏಲಕ್ಕಿ ಪುಡಿ, 4 ಚಮಚ ರೋಸ್ಟೆಡ್ ಬಾದಾಮಿ ಚೂರು, ತುಸು ಬೆಳ್ಳಿ ರೇಕು.
Advertisement
ತಯಾರಿಸುವ ವಿಧಾನ:ನೆನೆಸಿದ ಬೇಳೆಯನ್ನು (ಅದಷ್ಟೂ ನೀರು ಬೆರೆಸದೆ) ತರಿತರಿಯಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ರುಬ್ಬಿದ ಬೇಳೆ ಹಾಕಿ ನಿಧಾನವಾಗಿ ಬಾಡಿಸಿ. ಈಗ ಅದೇ ಬಾಣಲೆಗೆ ಖೋವಾ ಹಾಕಿ, ಅದನ್ನು ಬೆಚ್ಚಗಾಗುವಂತೆ ಬಾಡಿಸಿ. ನಂತರ ಇದಕ್ಕೆ ಏಲಕ್ಕಿ ಪುಡಿ ಹಾಕಿ, ನಂತರ ಒಂದೆಳೆ ಸಕ್ಕರೆ ಪಾಕ ತಯಾರಿಸಿ ಇದನ್ನು ಸಿದ್ಧಪಡಿಸಿದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಬೆರೆಸಿ. ಚೆನ್ನಾಗಿ ಬೆರೆತ ಮಿಶ್ರಣವನ್ನು ತುಪ್ಪ ಸವರಿದ ಟ್ರೇಗೆ ಹಾಕಿ ಸಮವಾಗಿ ಹರಡಿ. ನಂತರ ಬೆಳ್ಳಿ ರೇಕು, ಬಾದಾಮಿ ಚೂರುಗಳನ್ನು ಹಾಕಿ
ಡೈಮಂಡ್ ಆಕಾರದಲ್ಲಿ ಕತ್ತರಿಸಿ. ಈಗ ಮೂಂಗ್ ದಾಲ್ ಬರ್ಫಿ ರೆಡಿ.