Advertisement

ಚಂದ್ರ ಗ್ರಹಣ ಏನು ಫ‌ಲ?

10:14 AM Jul 14, 2019 | Vishnu Das |

ಚಂದ್ರನನ್ನು ಭೂಮಿಯು ಸಂಪೂರ್ಣವಾಗಿ ಮರೆಮಾಚಿದಾಗ ಘಟಿಸುವುದು ಚಂದ್ರಗ್ರಹಣ. ಈ ಪ್ರಕ್ರಿಯೆ ಅನಾದಿ ಕಾಲದಿಂದ ಇದ್ದರೂ, ಸೂರ್ಯ ಚಂದ್ರಾದಿ ಗ್ರಹಗತಿಗಳ ಚಲನೆಯಲ್ಲಿ ನಂಬಿಕೆ ಇಟ್ಟಿರುವ ಭಾರ ತೀಯ ಸಂಸ್ಕೃತಿಯಲ್ಲಿ ಗ್ರಹಣ ತನ್ನದೇ ಆದ ಪ್ರಭಾವವನ್ನೂ ಬೀರು ತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಜು.16ರಂದು ಸಂಭವಿಸುತ್ತಿರುವ ಖಗ್ರಾಸ ಚಂದ್ರಗ್ರಹಣದ ಮಹತ್ವವೇನು? ಯಾವ ರಾಶಿಗೆ ಯಾವ ಫ‌ಲವಿದೆ? ಅದರ ಒಂದು ನೋಟ ಇಲ್ಲಿದೆ…

Advertisement

ಖಗ್ರಾಸ ಚಂದ್ರಗ್ರಹಣ
ಗ್ರಹಣ ಸ್ಪರ್ಶ ಕಾಲ: ಜು. 16ರ ರಾತ್ರಿ 1.32 (ರೈಲ್ವೆ ಟೈಮ…)
ಗ್ರಹಣ ನಕ್ಷ ತ್ರ: ಉತ್ತ ರಾ ಷಾಢ ನಕ್ಷ ತ್ರ, ಮೊದ ಲನೇ ಚರ ಣ
ಗ್ರಹಣ ಪರ್ವ: 2.48 ನಿಮಿಷಗಳು
ಗ್ರಹಣ ಸ್ಪರ್ಶ ಕಾಲ: ರಾ. 1.32, ಗ್ರಹಣ ಮಧ್ಯಕಾಲ- ರಾ. 3 ಗಂಟೆ 1 ನಿಮಿಷ, ಗ್ರಹಣ ಮೋಕ್ಷ ಕಾಲ ಬೆ. 4.30
(ಮೇಲಿನ ಕಾಲಗಣನೆ ಪೂರ್ಣ ಭಾರತಕ್ಕೆ ಅನ್ವಯಿಸುತ್ತದೆ. ಭಾರತೀಯ ರೈಲ್ವೆ ಕಾಲಮಾನದಂತೆ, 16 ಜುಲೈ ರಾತ್ರಿಯೆಂದರೆ 17ರಂದು ಗ್ರಹಣ ಗೋಚರ. ಗ್ರಹಣವು ಭಾರತದಾದ್ಯಂತ ಖಂಡಗ್ರಾಸವಾಗಿ ಗೋಚರ)
ಎ ಲ್ಲೆ ಲ್ಲಿ?: ಭಾರತ ಸಹಿತ ಪೂರ್ಣ ಏಷ್ಯಾ, ಯುರೋಪ್‌, ಆಫ್ರಿಕ, ದಕ್ಷಿಣ ಅಮೆರಿಕ, ರಷ್ಯಾದ ದಕ್ಷಿಣ ಭಾಗ, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಪೆಸಿಫಿಕ್‌, ಅಟ್ಲಾಂಟಿಕ್‌, ಹಿಂದೂ ಮಹಾಸಾಗರಗಳಲ್ಲಿ ಗೋಚ ರ.
ಪುಣ್ಯಕಾಲ: ಗ್ರಹಣ ಸ್ಪರ್ಶದಿಂದ ಮೋಕ್ಷದ ವರೆಗೆ.
ಗ್ರಹಣ ವೇದಾರಂಭ: ಈ ಗ್ರಹ ಣವು ರಾತ್ರಿ ಮೂರನೆಯ ಪ್ರಹರಿಯಲ್ಲಿರುವುದರಿಂದ ಇದರ ಮೂರು ಪ್ರಹರಿ ಮೊದಲು ಅಂದರೆ, ಜುಲೈ 16ರ ಮಂಗಳವಾರ ಸಂಜೆ 4ರಿಂದ ರಾತ್ರಿಯ ಗ್ರಹಣ ಮೋಕ್ಷದ ವರೆಗೆ ವೇದಕಾಲವಿರು ತ್ತದೆ.

ಏನು ಮಾಡಬಹುದು? ಏನು ಮಾಡಬಾರದು?
ಜುಲೈ 16ರ ದಿನ ಸಂಜೆ 4ರ ವರೆಗೆ ಊಟ ಮಾಡಲು ಅಭ್ಯಂತ ರ ವಿಲ್ಲ. ಗ್ರ ಹಣ ವೇದ ಕಾ ಲ ದಲ್ಲಿ ಊಟ ನಿಷಿದ್ಧ. ಅನ್ನಗ್ರಹಣ ಮಾಡುವಂತಿಲ್ಲ. ನಿತ್ಯ ಕರ್ಮ, ಸ್ನಾನ, ಪೂಜೆ, ಜಪಾನುಷ್ಠಾನ, ಶ್ರದ್ಧಾ ತರ್ಪಣ ಮಾಡಬಹುದು. ಚಿಕ್ಕ ಮಕ್ಕಳು, ರೋಗಿಗಳು, ಅಶಕ್ತರು ಮತ್ತು ಗರ್ಭಿಣಿಯರು, ರಾತ್ರಿ 8.40ರ ಒಳಗೆ ಊಟ ಮುಗಿಸಿರಬೇಕು. ರಾತ್ರಿ 8.40ರ ನಂತರ ಅವ ರು ಗ್ರಹಣ ವೇದಗಳನ್ನು ಪಾಲಿಸಬೇಕು.
ಗ್ರಹಣ ಪರ್ವದಲ್ಲಿ ರಾತ್ರಿ 1.32ರಿಂದ 4.30ರ ವರೆಗೆ ನಿದ್ರೆ, ಜಲಪಾನ, ಮಲ-ಮೂತ್ರ ವಿಸರ್ಜನೆ ಮಾಡಬಾರದು. ಅಂದರೆ, ಗ್ರಹಣ ಸಮಯದಲ್ಲಿ ನಿದ್ರೆ, ಮಲಮೂತ್ರ ವಿಸರ್ಜನೆ, ದೈಹಿಕ ಸಂಪರ್ಕ ಮಾಡಬಾರದು. ಜಪ- ಯಂತ್ರ- ಮಂತ್ರಗಳಿಗೆ ಗ್ರಹಣ ಅವಧಿ ಬಹಳ ಶ್ರೇಷ್ಠ.

ಯಾರು ನೋಡಬಾರದು?
ಗ್ರಹಣದಿಂದ ಯಾರಿಗೆ ಅನಿಷ್ಟ ಫ‌ಲವಿದೆಯೋ ಅಂಥ ವರು, ಗರ್ಭಿಣಿಯರು, ಚಿಕ್ಕಮಕ್ಕಳು, ರೋಗಿಗಳು ಈ ಗ್ರಹಣವನ್ನು ನೋಡಲೇಬಾರದು.

ಗ್ರಹಣ ವಿಶೇಷ
ಇದು ಗುರು ಪೂರ್ಣಿಮಾ ಗ್ರಹಣ. ಗ್ರಹಣದ ವೇದಕಾಲದಲ್ಲಿ ಗುರುಗಳ ಆರಾಧನೆ, ಗುರುಮಂತ್ರ ಪಠಣ ಮಾಡಬಹುದು. ಕಲ್ಲು ಸಕ್ಕರೆಯನ್ನು ಮಾತ್ರವೇ ಪ್ರಸಾದವಾಗಿ ಸ್ವೀಕರಿಸಬಹುದು.

Advertisement

ಮನೆಯಲ್ಲಿ ವಿಗ್ರಹವಿದ್ದರೆ…
ಮನೆಯ ದೇವರ ಗೂಡಿನಲ್ಲಿ ಬೆಳ್ಳಿಯ, ಪಂಚಲೋಹದ ವಿಗ್ರಹ ಇದ್ದರೆ, ಗ್ರಹಣಕ್ಕೂ ಮೊದಲು ಅದನ್ನು ನೀರಿನೊಳಗೆ ಮುಳುಗಿ ಸಿ, ಗರಕೆ ಹುಲ್ಲು, ಸ್ವಲ್ಪ ಅರಿಶಿನ ಹಾಕಿ, ಮುಚ್ಚಿಡುವುದು. ಗ್ರಹಣ ಬಿಟ್ಟ ನಂತರ, ಮೂರ್ತಿ ಗಳನ್ನು ಸ್ವತ್ಛ ಮಾಡಿ, ಪೂಜಿಸುವುದು. ಹೀಗೆ ಮಾಡು ವು ದ ರಿಂದ ಮೂಲ ಕ ಗ್ರಹಣ ದೋಷಗಳು ಪ್ರಭಾವ ಬೀರುವುದಿಲ್ಲ.

ಗ್ರಹಣ ಫ‌ಲ
ಶುಭ ಫ‌ಲ: ಕರ್ಕಾಟಕ, ತುಲಾ, ಕುಂಭ, ಮೀನ
ಮಿಶ್ರ ಫ‌ಲ: ಮೇಷ, ಮಿಥುನ, ಸಿಂಹ, ವೃಶ್ಚಿಕ
ಅನಿಷ್ಟ ಫ‌ಲ: ವೃಷಭ, ಕನ್ಯಾ, ಧನುಸ್ಸು, ಮಕರ

ಗೋಚಾರ ಫ‌ಲದ ರಾಶಿ ಭವಿಷ್ಯ
ಮೇಷ: ಚಂದ್ರನು 9ನೇ ಮನೆಯಲ್ಲಿರುವುದರಿಂದ, ಉದ್ಯೋಗದಲ್ಲಿ ಬದಲಾವಣೆ. ಸಾಲದಿಂದ ಮುಕ್ತಿ, ಬಹು ಕಾ ಲದ ಅವಿ ವಾ ಹಿ ತ ರಿಗೆ ಈ ವರ್ಷ ಕಂಕಣ ಭಾಗ್ಯ ಕೂಡಿಬರಲಿದೆ.
ವೃಷಭ: ಸಪ್ತಮದಲ್ಲಿ ಗುರು ಇರುವುದರಿಂದ, ವಿದ್ಯೆಯಲ್ಲಿ ಯಶಸ್ಸು. ಹೊರದೇಶದಲ್ಲಿ ವ್ಯಾಸಂಗಕ್ಕೆ ಅಡೆತಡೆ. ಶನಿ ದೋಷದ ಕಾರಣ, ಆರೋ ಗ್ಯದಲ್ಲಿ ಏರುಪೇ ರು, ಮೂಳೆ ಸಂಬಂಧಿತ ಸಮಸ್ಯೆ. ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನ ಸವಾರಿಯಿಂದ ಅಪಾ ಯ ಸಾಧ್ಯ ತೆ. ಪ್ರತಿಶನಿವಾರ ಎಳ್ಳಿನ ದೀಪ ಹಚ್ಚುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. 11 ಶನಿವಾರ ಹೀಗೆಯೇ ಮಾಡುವುದು.
ಮಿಥುನ: ಶುಕ್ರನು ಸ್ವಕ್ಷೇತ್ರದಲ್ಲಿ ಇರುವುದರಿಂದ, ರಾಹು ಉತ್ಛನಾಗಿರುವುದರಿಂದ, ಅಖಂಡ ರಾಜಯೋಗ, ಭೂಮಿ ಖರೀದಿ, ಸರ್ಕಾರಿ ಉದ್ಯೋಗದಲ್ಲಿ ಲಾಭ, ಧನಯೋಗ ಪ್ರಾಪ್ತಿ. ಶುಭ ಕಾರ್ಯದಲ್ಲಿ ಪಾಲ್ಗೊಳ್ಳುವರು.
ಕರ್ಕಾಟಕ: ಪಂಚಮದಲ್ಲಿ ಗುರು ಇರುವುದರಿಂದ ಶುಭ ಫ‌ಲ, ಅವಿವಾಹಿತರಿಗೆ ಕಂಕಣ ಭಾಗ್ಯ, ಶತ್ರುಬಾಧೆ ನಿವಾರಣೆ, ಆರೋಗ್ಯದಲ್ಲಿ ಸುಧಾರಣೆ.
ಸಿಂಹ: ಪಂಚಮದಲ್ಲಿ ಚಂದ್ರ, ಲಾಭದಲ್ಲಿ ಶುಕ್ರ ಇರುವುದರಿಂದ, ಸ್ವಂತ ಉದ್ಯೋಗದಲ್ಲಿ ಪ್ರಗತಿ, ಸಾಲದಿಂದ ಮುಕ್ತಿ ಸಿಗ ಲಿದೆ. ಹಿತೈಷಿಗಳೇ ಹಿತಶತ್ರುಗಳಾಗುವ ಸಾಧ್ಯತೆ. ನರಸಿಂಹ ಸ್ವಾಮಿಯ ಆರಾ ಧ ನೆ  ಪರಿ ಹಾರ.
ಕನ್ಯಾ: ಬುದ್ಧಿಕಾರಕ ಬುಧ ಲಾಭದಾಯಕನಾಗಿರುತ್ತಾನೆ. ಆದರೂ ಧನಹಾನಿ, ಮಾನಹಾನಿ, ಉದ್ಯೋಗ ನಷ್ಟ ಸಂಭ ವಿ ಸ ಲಿದೆ. ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ, ಪ್ರತಿ 5 ಮಂಗಳವಾರ ಕಲ್ಲು ಸಕ್ಕರೆಯನ್ನು ದಾನ ಮಾಡಿ, ಪ್ರಸಾದವಾಗಿ ಕಲ್ಲು ಸಕ್ಕರೆಯನ್ನು ಸೇವಿಸುವುದರಿಂದ ದೋಷ ನಿವಾ ರ ಣೆ.
ತುಲಾ: ಧನದಲ್ಲಿ ಗುರು ಇರುವುದರಿಂದ, ಧನಾತ್ಮಕ ಚಿಂತನೆಗಳು ಜಾಸ್ತಿ. ವ್ಯವಹಾರದಲ್ಲಿ ಚುರುಕು. ಕೋರ್ಟು- ಕಚೇರಿ ವ್ಯಾಜ್ಯ ನಿವಾರಣೆ. ಹೂಡಿಕೆಗೆ ಪ್ರಶಸ್ತ ಸಮಯ. ಅನಿ ರೀ ಕ್ಷಿತ ಧನಾ ಗ ಮ ನ. ಸನ್ಮಾರ್ಗದಿಂದ ಲಾಭ.
ವೃಶ್ಚಿಕ: ಜನ್ಮದಲ್ಲಿ ಗುರು, ಧನದಲ್ಲಿ ಶನಿ- ಚಂದ್ರ ಇರುವುದರಿಂದ ಸೂಕ್ಷ¾ ಸ್ವಭಾವದವರು, ಮಾನಸಿಕ ತೊಂದರೆ ಅನುಭವಿಸು ವರು. ಖನ್ನತೆ ಕಾಡು ವುದು. ಧ್ಯಾನ, ಪ್ರಾಣಾಯಾಮ ಅನುಸರಿಸು ವುದು ಉತ್ತಮ. ಶಿವನ ಆರಾಧನೆ, ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡುವು ದ ರಿಂದ, ದೋಷ ಪರಿಹಾ ರ.
ಧನುಸ್ಸು: ಇದೇ ರಾಶಿಯಲ್ಲೇ ಗ್ರಹಣ ಸಂಭ ವಿಸುತ್ತಿರುವುದರಿಂದ, ಮಾನಸಿಕ ಒತ್ತಡ, ಮನೆಯಲ್ಲಿ ಕಲಹ, ಅಶಾಂತಿ. ಸಂಬಂಧಿಕರಿಂದಲೂ ಸಮಸ್ಯೆ ಎದು ರಾ ಗು ವು ದು. ಬೆಳ ಗಿನ ಜಾವ ವಿಷ್ಣು ಸ್ತೋತ್ರವನ್ನು ಜಪಿ ಸು ವುದು, ಕತ್ತಿನಲ್ಲಿ ತುಳಸಿ ಮಣಿ ಧರಿಸುವುದರಿಂದ, ಪರಿಹಾರ ಸಾಧ್ಯ.
ಮಕರ: ವ್ಯಯದಲ್ಲಿ ಶನಿ ಇರುವುದರಿಂದ, ಆಟೋಮೊಬೈಲ್‌  ಇಲ್ಲವೇ ಕಬ್ಬಿಣ ಅವ ಲಂಬಿ ತ ಕ್ಷೇ ತ್ರದ ಕೆಲಸಗಾರರಿಗೆ, ನಷ್ಟ. ಈ ಗ್ರಹಣವನ್ನು ಅವರು ನೋಡಲೇಬಾರದು. ಶನಿಯ ಮೂಲ ಜಪ ಮಂತ್ರ ಪಠಣ, ಶನಿ ದೇವ ರಿಗೆ ಎಳ್ಳು ದೀಪವನ್ನು ಹಚ್ಚಿ, ಕಲ್ಲು ಸಕ್ಕರೆ ದಾನ ಮಾಡಿದರೆ, ದೋಷ ನಿವಾರಣೆ  ಆಗುವುದು.
ಕುಂಭ: ದಶಮದಲ್ಲಿ ಗುರು, ಲಾಭದಲ್ಲಿ ಶನಿ ಇರುವುದರಿಂದ, ಹೊರ ದೇಶಕ್ಕೆ ಹೋಗುವ ಸಾಧ್ಯತೆ, ಧನ ಸಂಪತ್ತು ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ. ಗುರು ಆರಾಧನೆ ಮಾಡಿ, ಸಾಯಿ ಬಾಬಾ ದೇಗುಲಕ್ಕೆ ಹೋಗಿ, ಬೆಲ್ಲದಲ್ಲಿ ಮಾಡಿರುವಂಥ ಪ್ರಸಾದ ದಾನ ಮಾಡಿದರೆ, ಉತ್ತಮ ಫ‌ಲ.
ಮೀನ: ಕೇಂದ್ರ ಸ್ಥಾನದಲ್ಲಿ ಶನಿ ಇರುವುದರಿಂದ ಧನಬಲ. ಹೊಸ ವ್ಯವಹಾರಗಳಲ್ಲಿ ಪ್ರಗತಿ. ಸಂಗಾತಿಯಿಂದ ಲಾಭ. ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲವೆಂದಾದರೆ, ಮಕ್ಕಳ ಮೂಲಕ ಸಾಮರಸ್ಯ. ಅನಾ ರೋಗ್ಯ ನಿವಾ ರಣೆ. ವಿಷ್ಣು ದೇವಸ್ಥಾನಕ್ಕೆ ಹೋಗಿ, ಬೆಲ್ಲದಲ್ಲಿ ಮಾಡಿದಂಥ ಸಿಹಿ ಪದಾರ್ಥವನ್ನು, ಸಮರ್ಪಣೆ ಮಾಡಿ, ನಮಸ್ಕಾರ ಮಾಡಿ, ಶುಭಫ‌ಲ ಪ್ರಾಪ್ತಿ.

ಅಶುಭ ಫ‌ಲದ ರಾಶಿಯವರಿಗೆ ಪರಿಹಾರ
ಅಶುಭ ರಾಶಿಯವರು ಬೆಳ್ಳಿಯಲ್ಲಿ 2 ಚಂದ್ರ ಮೂರ್ತಿಗಳ ನ್ನು ಮಾಡಿಸಬೇಕು. ಬಿಳಿಯ ಬಟ್ಟೆಯಲ್ಲಿ ಅಕ್ಕಿಯ ಜತೆಗೆ ಒಂದು ಚಂದ್ರ, ಕಂದು ಬಣ್ಣದ ಬಟ್ಟೆಯಲ್ಲಿ ಹುರುಳಿಯ ಜತೆಗೆ ಒಂದು ಚಂದ್ರ ನನ್ನು ಇಟ್ಟು ಗಂಟು ಕಟ್ಟ ಬೇಕು. ನಂತರ ಅದನ್ನು ದಾನ ಮಾಡ ಬೇಕು. ಮುತ್ತು- ರತ್ನ ಗಳನ್ನು ಉಡು ಗೊರೆ ರೂಪ ದಲ್ಲಿ ಪಡೆ ಯ ಬೇಕು.

ದೇಶ- ವಿದೇಶ ಭವಿಷ್ಯ
ದವಸ ಧಾನ್ಯ ಗಳ ಬೆಲೆ ಏರಿಕೆ, ಕಬ್ಬಿಣ, ಉಕ್ಕು ಉತ್ಪ ನ್ನ ಹಾಗೂ ಬೆಳ್ಳಿ- ಬಂಗಾರಗಳ ಬೆಲೆ ಹೆಚ್ಚಳ, ಸಣ್ಣ ಮತ್ತು ಬೃಹತ್‌ ಕೈಗಾ ರಿಕಾ ಉದ್ಯ ಮಿ ಗಳಿಗೆ ಆರ್ಥಿಕ ನಷ್ಟ, ಕಾರ್ಮಿಕ  ವಲಯಕ್ಕೆ ಹಿನ್ನ ಡೆ, ದೇಶ ದಲ್ಲಿ ಮಂತ್ರಿಗಳಿಗೆ- ಯೋಧರಿಗೆ- ವೈದ್ಯರಿಗೆ- ಚಿತ್ರ ನಿರ್ಮಾಪಕರಿಗೆ ನಷ್ಟ ಸಂಭವ, ಅಗ್ನಿ ದುರಂತ, ಭೂ ಕುಸಿತ, ಸುನಾಮಿ, ಉತ್ತರ ಭಾರತದಲ್ಲಿ ಭಯೋತ್ಪಾದನೆ ಆಗುವ ಸಾಧ್ಯತೆ, ಹಿಂದೂ ಮಹಾ ಸಾಗರದಲ್ಲಿ ಗಂಡಾಂತರ, ಅಮೆರಿಕ- ಇರಾನ್‌ ನಡುವೆ ಯುದ್ಧ ಭೀತಿ, ಕೃಷಿ ಕ ರಿಗೆ ಅಶುಭ, ಅತಿವೃಷ್ಟಿ ಯಿಂದ ದೇಶದ ಕೆಲವು ಭಾಗಗಳಲ್ಲಿ ಪ್ರಾಣ ಹಾನಿ ಸಂಭವಿಸಲಿದೆ. ರಾಷ್ಟ್ರನಾಯಕ  ನರೇಂದ್ರ ಮೋದಿ ಅವ ರದ್ದು ವೃಶ್ಚಿಕ ರಾಶಿಯಾಗಿದ್ದು, ಆರೋಗ್ಯದ ಬಗ್ಗೆ ಎಚ್ಚರ. ಶತ್ರು ಗಳಿಂದ ದಾಳಿ ಸಾಧ್ಯ ತೆ.

ರಾಜ್ಯದ ಭವಿಷ್ಯ
ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿ ರುವ ಅಲ್ಲೋಲ ಕಲ್ಲೋಲ ಕೇವಲ ತಾತ್ಕಾಲಿಕ. ಗ್ರಹಣ ವಾದ 48 ದಿನಗಳೊಳಗೆ ಹೊಸ ಸ್ಥಿರ ಸರ್ಕಾರ ಬರುವ ಸಾಧ್ಯತೆ. ರಾಜ್ಯವೂ ಅದ ರಿಂದ ಸುಭಿಕ್ಷವಾಗಲಿದೆ. ಆದರೆ, ಭವಿಷ್ಯದಲ್ಲಿ ಮತ್ತೆ ರಾಜ್ಯ ರಾಜಕಾರಣದಲ್ಲಿ ಇನ್ನೂ ಎರಡು ಸಲ ಹೈಡ್ರಾಮ ನಡೆಯಲಿದೆ.

– ಪವನ್‌ ಶರ್ಮಾ, ಜ್ಯೋತಿಷ್ಯ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next