Advertisement
ಮೂಡಬಿದಿರೆಯ ಬಸ್‌ನಿಲ್ದಾಣದ ಪ್ರವೇಶ ಭಾಗದಲ್ಲಿ ನಡೆದ ರಸ್ತೆ ತಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ, ಮುಸ್ಲಿಂ ಉದ್ಯಮಿಯ ವ್ಯವಹಾರ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ , ಯಾವುದೇ ಪೊಲೀಸ್ ಕೇಸ್‌ಗಳಿಲ್ಲದ, ಅಮಾಯಕ ಹಿಂದೂ ಯುವಕನನ್ನು ಮತಾಂಧ ಶಕ್ತಿಗಳು ಕೊಲೆ ಮಾಡಿವೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ನೀಡುತ್ತಿರುವ ಹೇಳಿಕೆಗಳು ಕರಾವಳಿಯಲ್ಲಿ ಸಂಘರ್ಷದ ವಾತಾವರಣವನ್ನು ಉಂಟು ಮಾಡುತ್ತಿವೆ. ಹಿಂದೂಗಳನ್ನು ಹತ್ಯೆಗೈಯುತ್ತಿರುವ ಪಿಎಫ್‌ಐಯಂಥ ಸಂಘಟನೆಗಳನ್ನು ನಿಷೇಧಿಸಬೇಕಾಗಿದೆ ಎಂದು ಆಗ್ರಹಿಸಿದರು. ಉಸ್ತುವಾರಿ ಸಚಿವರ ಹೊಣೆಗಾರಿಕೆಯಲ್ಲಿ ನಡೆಯುವ ಇಂಥ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ಹಿಂದೂ ಸಂಘಟನೆಗಳಿಗೆ ಇದೆಯಾದರೂ ಕಾನೂನನ್ನು ಗೌರವಿಸಿ ಸಾಂಕೇತಿಕ, ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು. ರಸ್ತೆ ತಡೆ ನಡೆಸಿದವರು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪುರಸಭಾ ಸದಸ್ಯ ನಾಗರಾಜ ಪೂಜಾರಿ ಮಾತನಾಡಿ, ಮನೆಗೆ ಆಧಾರಸ್ತಂಭವಾಗಿದ್ದ ದೀಪಕ್‌ನನ್ನು ಕಳಕೊಂಡ ಕುಟುಂಬಕ್ಕೆ ಸರಕಾರ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.