Advertisement
ಚಿತ್ರಕಲಾವಿದರು, ವ್ಯಂಗ್ಯಚಿತ್ರಕಾರರು, ಛಾಯಾಚಿತ್ರಕಾರರು ಇಲ್ಲಿ ಬೀಡುಬಿಟ್ಟಿದ್ದಾರೆ. ಕಲಾಮೇಳದಲ್ಲಿ ಪ್ರತ್ಯಕ್ಷವಾಗಿ ಶಿಲ್ಪ, ಚಿತ್ರ ರಚನೆಯೂ, ಪ್ರದರ್ಶನವೂ ನಡೆಯವುದು. ಕಲಾ ಮೇಳದ ಜತೆ ಜತೆಗೆ ಸ್ವದೇಶೀ ಮೇಳವನ್ನೂ ವ್ಯವಸ್ಥೆಗೊಳಿಸಲಾಗಿದೆ.
ಕೊಲ್ಕತಾ ನಾತುಂಗ್ ರಾಮ್ ಆಟಿಕೆ, ಕೋಲ್ಕತಾ ಡೋಕ್ರ ಕಲೆ, ಕನ್ಯಾಕುಮಾರಿ ಮರದ ಆಟಿಕೆಗಳು, ಚೆನ್ನಪಟ್ಟಣ ಆಟಿಕೆಗಳು, ಮೈಸೂರು ಮಿನಿಯೇಚರ್ ಆರ್ಟ್ಸ್, ಮರದ ಶೈಕ್ಷಣಿಕ ಆಟಿಕೆಗಳು, ಕೈಯಲ್ಲೇ ತಯಾರಿಸಿದ ಬಟ್ಟೆಗಳು ಹೀಗೆ ಹಲವಾರು ಬಗೆಯ ಕಲಾತ್ಮಕ ವಸ್ತುಗಳು ಪ್ರದರ್ಶನ ಮಾರಾಟ ಮಳಿಗೆಗಳಿವೆ.
Related Articles
ಮಂಗಳವಾರ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ರಾಜ್ಯ, ಹೊರರಾಜ್ಯಗಳ ವಿವಿಧ ಜಿಲ್ಲೆಗಳಿಂದ ಸರಕಾರಿ, ಖಾಸಗಿ ಬಸ್‌ಗಳಲ್ಲಿ, ಇತರ ವಾಹನಗಳು ಜಾಂಬೂರಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು, ಶಿಕ್ಷಕರನ್ನು ಇಳಿಸುವಲ್ಲಿ, ನೋಂದಣಿ ವಿಭಾಗದಲ್ಲಿ ಭಾರೀ ಜನಸಂದಣಿ ಕಂಡು ಬಂದಿತು. ಮೂಡುಬಿದಿರೆಯಲ್ಲಿ ವಾಹನಗಳ ಓಡಾಟದ ಒತ್ತಡ ವಿಪರೀತವಾಗಿ ಕಂಡುಬಂದಿದೆ. ಮಾರುಕಟ್ಟೆ ಮತ್ತಿತರ ಕಡೆ ಮಂಗಳವಾರ ಸಂಜೆ ತರಾತುರಿಯಲ್ಲಿ ಡಾಮರು ಹಾಕುವ ಪ್ರಕ್ರಿಯೆ ಕಂಡುಬಂದಿವೆ.
Advertisement
ವಿದ್ಯುದ್ದೀಪಗಳಿಂದ ಶೃಂಗಾರ ವಿದ್ಯಾಗಿರಿಯ ಕಟ್ಟಡಗಳೆಲ್ಲ ವಿದ್ಯುದ್ದೀಪಗಳಿಂದ ಜಗಮಗಿಸುತ್ತಿವೆ. ವಿದ್ಯಾಗಿರಿ-ಮೂಡುಬಿದಿರೆ ಪೇಟೆ ಯಲ್ಲಿ ಹೊಸದಾಗಿ ಹಾಕಲಾದ ಹೈಮಾಸ್ಟ್ ದೀಪ ಸ್ತಂಬಗಳೂ ಬೆಳಕು ಚೆಲ್ಲುತ್ತಿವೆ. ಪೇಟೆಯಲ್ಲಿ ಕಟ್ಟಡಗಳು, ಹೊಟೇಲ್, ಸೊಸೈಟಿ ಸಹಿತ ಕಟ್ಟಡಗಳೂ ವರ್ಣರಂಜಿತ ವಿದ್ಯುದ್ದೀಪಗಳಿಂದ ಸಿಂಗರಿಸಲ್ಪಟ್ಟಿವೆ.
* ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಕ್ರಾಫ್ಟ್, ಆವೆಮಣ್ಣಿನ ಕಲಾಕೃತಿ, ಪೇಂಟಿಂಗ್, ಗಾಳಿಪಟ ತಯಾರಿಕೆ, ಗೂಡುದೀಪ ತಯಾರಿಕೆಯ ಬಗ್ಗೆ ತರಬೇತಿ. ಒಟ್ಟು 38 ಕೊಠಡಿಗಳಲ್ಲಿ ಇವನ್ನೆಲ್ಲ ವ್ಯವಸ್ಥೆಗೊಳಿಸಲಾಗಿದೆ.* ಹತ್ತು ಕೊಠಡಿಗಳಲ್ಲಿ ಆಹ್ವಾನಿತ ಕಲಾವಿದರ ಕಲಾಕೃತಿ ಚಿತ್ರ ಪ್ರದರ್ಶನ.
* 7 ದಿನಗಳಲ್ಲಿ ರಾಷ್ಟ್ರ ಮಟ್ಟದ 50 ಮಂದಿ ಕಲಾವಿದರು ತಲಾ ಎರಡು ಚಿತ್ರಗಳ ಪ್ರದರ್ಶನ ಮಾಡಲಿದ್ದಾರೆ.
* 20 ವ್ಯಂಗ್ಯ ಚಿತ್ರಕಾರರ ಎರಡು ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.
* ಬುಡಕಟ್ಟು ಕಲಾವಿದರಿಗಾಗಿ 36 ಸ್ಟಾಲ್‌ಗಳನ್ನು ಹಾಕಲಾಗಿದೆ.
* ಚಿತ್ರ, ಕೈಯಲ್ಲಿ ಮಾಡಿದ ಬಟ್ಟೆ, ಆಟಿಕೆಗಳ ಪ್ರದರ್ಶನ ವಿಶೇಷವಾಗಿದೆ.