Advertisement

ಮೂಡಬಿದಿರೆ ಕ್ಷೇತ್ರ: ಕೈ –ಕಮಲ ಎರಡಕ್ಕೂ ಗೆದ್ದೇ ಗೆಲ್ಲುವ ವಿಶ್ವಾಸ

06:20 AM May 08, 2018 | |

ಮೂಡಬಿದಿರೆ: ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ಪ್ರಚಾರ ಭರದಿಂದ ಸಾಗುತ್ತಿದೆ. ಒಂದೆಡೆ ಈತನಕ ಸೋಲನ್ನೇ ಕಾಣದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಅಭಯಚಂದ್ರ ಅವರು ಸತತ ಐದನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಇನ್ನೊಂದೆಡೆ ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಕಮಲ ಚಿಹ್ನೆ ಅರಳಿಸಲು ಸಜ್ಜಾಗಿರುವ ಬಿಜೆಪಿ ಅಭ್ಯರ್ಥಿ ಉಮಾನಾಥ ಎ. ಕೋಟ್ಯಾನ್‌.ಇವರಿಬ್ಬರೂ ಮತದಾರರನ್ನು ಸೆಳೆಯುವ ಯತ್ನದಲ್ಲಿ ನಿರತರಾಗಿದ್ದಾರೆ.

Advertisement

ಕ್ಷೇತ್ರದಲ್ಲಿ ಚುನಾವಣ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಎಲ್ಲ ಪಕ್ಷಗಳು ಮನೆ-ಮನೆ ಪ್ರಚಾರದಲ್ಲಿ ತೊಡಗಿವೆ. ಕಳೆದ 10 ಬಾರಿ ಚುನಾವಣ ಕಣದಲ್ಲಿದ್ದ ಅಮರನಾಥ ಶೆಟ್ಟಿ ಈ ಬಾರಿ ಸ್ಪರ್ಧಿಸದ ಕಾರಣ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆಯೇ ಜಿದ್ದಾಜಿದ್ದಿನ ಪೈಪೋಟಿ ಸಾಧ್ಯತೆ ಇದೆ.ಜೆಡಿಎಸ್‌ನಿಂದ ಜೀವನ್‌ಕೃಷ್ಣ ಶೆಟ್ಟಿ, ಸಿಪಿಐಎಂನಿಂದ ಕೆ. ಯಾದವ ಶೆಟ್ಟಿ, ಪಕ್ಷೇತರರಾಗಿ ಅಶ್ವಿ‌ನ್‌ ಜೊಸ್ಸಿ ಪಿರೇರಾ ಹಾಗೂ ರೀನಾ ಪಿಂಟೋ, ಎಐಎಂಇಕೆ ಪಕ್ಷದಿಂದ ಅಬ್ದುಲ್‌ ರಹಿಮಾನ್‌ ಸಹಿತ ಒಟ್ಟು 7 ಮಂದಿ ಅಭ್ಯಥಿಗಳು ಕಣದಲ್ಲಿದ್ದಾರೆ. 2013ರಲ್ಲಿ  6 ಮಂದಿ ಸ್ಪರ್ಧಿಸಿದ್ದರು. 1962ರಿಂದ 2013ರ ವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದರೆ ಕಾಂಗ್ರೆಸ್‌ 7 ಬಾರಿ ಗೆದ್ದಿದೆ. ಅನಂತರದ ಸ್ಥಾನದಲ್ಲಿ ಜನತಾ ಪಕ್ಷವಿದ್ದು,  ಒಟ್ಟು 3 ಬಾರಿ ಆಡಳಿತ ನಡೆಸಿದೆ.

ಜಾತಿವಾರು ಲೆಕ್ಕಾಚಾರ
ಈ ಕ್ಷೇತ್ರದ ಜಾತಿವಾರು ಲೆಕ್ಕಾಚಾರ ನೋಡಿದರೆ ಬಿಲ್ಲವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅನಂತರದ ಸ್ಥಾನದಲ್ಲಿ ಕ್ರಮವಾಗಿ ಮುಸ್ಲಿಂ ಹಾಗೂ ಕ್ರೈಸ್ತರು, ಬಂಟರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರ ಮತಗಳನ್ನು ಸೆಳೆಯಲು ಕಸರತ್ತು ನಡೆಸುತ್ತಿವೆ.
ಬಿಜೆಪಿ ಬದಲಾವಣೆ ಮಂತ್ರ ಅಭಿವೃದ್ಧಿಗಾಗಿ ಬಿಜೆಪಿ ಎಂಬ ಘೋಷವಾಕ್ಯದೊಂದಿಗೆ ಬಿಜೆಪಿ ಮತಬೇಟೆ ನಡೆಸುತ್ತಿದೆ. ಕೇಂದ್ರ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡುವ ಮೂಲಕ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಸರಕಾರದ ವೈಫಲ್ಯವನ್ನು ತಿಳಿಸುವ ಕಾರ್ಯವೂ ನಡೆಯುತ್ತಿದೆ.

ಕಾಂಗ್ರೆಸ್‌ನ ಅಭಿವೃದ್ಧಿ ಮಂತ್ರ 
1972ರಲ್ಲಿ ದಾಮೋದರ ಮೂಲ್ಕಿ ಆವರು ಜನತಾ ಪಾರ್ಟಿಯ ಅಮರನಾಥ ಶೆಟ್ಟಿ ವಿರುದ್ಧ ಜಯಗಳಿಸಿದ್ದರು. 1978ರಲ್ಲಿ  ದಾಮೋದರ ಮೂಲ್ಕಿ ಮತ್ತೆ ಜನತಾ ಪಾರ್ಟಿಯ ಅಮರನಾಥ ಶೆಟ್ಟಿ ಎದುರು ಗೆಲುವು ಸಾಧಿಸಿದ್ದರು. 1989ರಲ್ಲಿ  ಕೆ. ಸೋಮಪ್ಪ ಸುವರ್ಣ ಜನತಾ ಪಾಟಿ}ಯ ಅಮರನಾಥ ಶೆಟ್ಟಿ ಅವರನ್ನು ಪರಾಭವಗೊಳಿಸಿದ್ದರು. 1999ರಲ್ಲಿ ಕೆ. ಅಭಯಚಂದ್ರ ಜನತಾದಳದ ಅಮರನಾಥ ಶೆಟ್ಟಿ ಅವರನ್ನು ಸೋಲಿಸಿದರು. 2004ರಲ್ಲಿ  ಅಭಯಚಂದ್ರರು ಜನತಾದಳದ ಅಮರನಾಥ ಶೆಟ್ಟಿ ವಿರುದ್ಧ ಜಯಗಳಿಸಿದ್ದರು. 2008ರಲ್ಲಿ ಅಭಯಚಂದ್ರರು ಬಿಜೆಪಿಯ ಕೆ.ಪಿ. ಜಗದೀಶ್‌ ಅಧಿಕಾರಿ ಎದುರು ಮತ್ತು 2013ರಲ್ಲಿ ಮತ್ತೆ ಅಭಯಚಂದ್ರ ಅವರೇ ಬಿಜೆಪಿಯ ಉಮಾನಾಥ ಕೋಟ್ಯಾನ್‌ ಎದುರು ಗೆಲುವುಸಾಧಿಸಿದ್ದರು. ಹೀಗೆ ಕಾಂಗ್ರೆಸ್‌ ಅಭ್ಯರ್ಥಿ ಹಿಂದಿನ ಸತತ ಗೆಲುವುಗಳಿಂದಾಗಿ ಈ ಬಾರಿಯೂ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. 1999ರಿಂದ 2018ರವರೆಗೆ ನಡೆದ ಅಭಿವೃದ್ಧಿ ಕಾಮಗಾರಿ, ಮೂಲಸೌಕರ್ಯಗಳಿಗೆ ಆದ್ಯತೆ ಮೊದಲಾದ ಜನಪರ ಕಾಳಜಿಗಳನ್ನು ಮುಂದಿಟ್ಟು ಪ್ರಚಾರ ತಂತ್ರ ಅನುಸರಿಸುತ್ತಿದ್ದಾರೆ.

ಅಶ್ವಿ‌ನ್‌ – ಜೆಡಿಎಸ್‌
ಜೆಡಿಎಸ್‌ ಪಕ್ಷದಿಂದ ಉಚ್ಚಾಟನೆಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಶ್ವಿ‌ನ್‌ ಜೊಸ್ಸಿ ಪಿರೇರಾ ಹಾಗೂ ಜೆಡಿಎಸ್‌ ಅಭ್ಯರ್ಥಿ ಜೀವನ್‌ಕೃಷ್ಣ ಶೆಟ್ಟಿ ಅವರ ನಡುವೆ ಅತಿ ಹೆಚ್ಚು ಮತಗಳಿಕೆ ಲೆಕ್ಕಾಚಾರದ ಪೈಪೋಟಿ ಸಂಭವಿಸುವ ಲಕ್ಷಣ ಇದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮರನಾಥ ಶೆಟ್ಟಿ ಈ ಬಾರಿ ಸ್ಪರ್ಧಿಸದಿರುವುದೇ ಇದಕ್ಕೆಲ್ಲ ಕಾರಣ. ಅಮರನಾಥ ಶೆಟ್ಟಿ ಅವರ ಬೆಂಬಲಿಗರೆಲ್ಲ ಈಗ ಬೇರೆ ಬೇರೆ ಪಕ್ಷದಲ್ಲಿ ಕಾಣುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಕ್ಷೇತರ ಅಭ್ಯರ್ಥಿ ಅಶ್ವಿ‌ನ್‌ ಹಾಗೂ ಜೆಡಿಎಸ್‌ನ ಜೀವನ್‌ ಕುಮಾರ್‌ ಆವರು ಪಡೆಯುವ ಮತಗಳೂ ಬಿಜೆಪಿ, ಕಾಂಗ್ರೆಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

Advertisement

ಕ್ಷೇತ್ರದಲ್ಲಿ ಕಳೆದಸಾಲಿನಲ್ಲಿ ಮಾಡಿದ ಜನೋಪಯೋಗಿ ಕಾರ್ಯಗಳನ್ನು ಜನರು ಬೆಂಬಲಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. ಜನಾಶೀರ್ವಾದ, ಪ್ರೀತಿ, ವಿಶ್ವಾಸ ಇದೆ. ನನ್ನ ಆಡಳಿತದ ಅವಧಿ ಯಲ್ಲಿ ಪುರಸಭೆಗೆ ನೀರಿನ ವ್ಯವಸ್ಥೆ, ಕಿನ್ನಿಗೋಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಶೇ.  90 ರಸ್ತೆ ಅಭಿವೃದ್ಧಿ ಕಾಮಗಾರಿ ಆಗಿದೆ. ಕ್ಷೇತ್ರ ದಲ್ಲಿ ಶೇ. 20ರಷ್ಟು ನೀರಿನ ಸಮಸ್ಯೆ ಇದೆ. ಮುಂಬರುವ ದಿನಗಳಲ್ಲಿ ಅದಕ್ಕೆ ಆದ್ಯತೆ ನೀಡಲಿದ್ದೇನೆ.
– ಅಭಯಚಂದ್ರ, 
ಕಾಂಗ್ರೆಸ್‌ ಅಭ್ಯರ್ಥಿ

ಕ್ಷೇತ್ರದ ಜನರ ಮೂಲ ಆವಶ್ಯಕತೆಗಳಾದ ನೀರು, ಒಳಚರಂಡಿ, ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತೇನೆ. ಮೂಡಬಿದಿರೆಯನ್ನು ಮಾದರಿ ತಾಲೂಕು ಆಗಿ ರೂಪಿಸುವುದು ಸಹಿತ ಮಾರುಕಟ್ಟೆ ಆಧುನೀಕರಣ, ರಸ್ತೆ ವಿಸ್ತರಣೆ, ಮೂಡಬಿದಿರೆಗೆ ಟ್ರಾಫಿಕ್‌ ಪೊಲೀಸ್‌ ಸ್ಟೇಷನ್‌, ಕಡಲಕೆರೆ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗುವುದು. ಮೂಲ್ಕಿಗೆ ಶಾಶ್ವತ ತಹಶೀಲ್ದಾರ್‌ ನೇಮಿಸಲು ವಿಶೇಷ ಒತ್ತು ನೀಡಲಿದ್ದೇನೆ.
– ಉಮಾನಾಥ ಎ. ಕೋಟ್ಯಾನ್‌, ಬಿಜೆಪಿ ಅಭ್ಯರ್ಥಿ

ಶಾಂತಿ, ಅಭಿವ್ರದ್ಧಿ ನಮ್ಮ ಗುರಿ. ಕ್ಷೇತ್ರದಲ್ಲಿ ಮೂಲಸೌಕಯ} ಆದ್ಯತೆ ನೀಡಲಾಗುವುದು. ಕ್ಷೇತ್ರದ ಜನರು ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ. ಮಠ, ಮಂದಿರ, ಬೀಚ್‌ ಸಂಪಕ} ರಸ್ತೆಗಳಿರುವುದರಿಂದ ಪ್ರವಾಸೋದ್ಯಮವನ್ನು ಅಭಿವ್ರದ್ಧಿಪಡಿಸಲು ವಿಶೇಷ ಕಾಳಜಿ ವಹಿಸುತ್ತೇನೆ. 
– ಜೀವನ್‌ ಕೃಷ್ಣ ಶೆಟ್ಟಿ, ಜೆಡಿಎಸ್‌ ಅಭ್ಯರ್ಥಿ

ಒಟ್ಟು  ಮತದಾರರು: 1,94,947
ಪುರುಷರು: 94,397
ಮಹಿಳೆಯರು:1,00,541
ಇತರರು:  0

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next