ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಮೂಲೆ ಮೂಲೆಯಲ್ಲೂ ಕುದುರೆ, ಆನೆ, ಸಿಂಹ, ನವಿಲು, ಜಿರಾಫೆ ಸಹಿತ ವಿವಿಧ ಪ್ರಭೇದದ ಪ್ರಾಣಿ ಪಕ್ಷಿಗಳದ್ದೇ ಕಲರವ.
ಇದನ್ನೂ ಓದಿ:ಈ ದೇಶಗಳಿಂದ ಭಾರತಕ್ಕೆ ಬಂದವರಿಗೆ RT-PCR ಕಡ್ಡಾಯ: ಕೇಂದ್ರ ಸರಕಾರ
ಅದರಲ್ಲೂ ಸಿಂಹ ಗರ್ಜನೆ ಮತ್ತು ಆನೆಗಳ ಘೀಳು ನಿರಂತರವಾಗಿ ಕೇಳಿ ಬರುತ್ತಿದೆ. ಆದರೆ ವಿದ್ಯಾರ್ಥಿಗಳು ಅವುಗಳನ್ನ ನೋಡಿ ಭಯ ಪಡದೆ ಅವುಗಳ ಹತ್ತಿರ ಹೋಗಿ ಫೋಟೋಗಳನ್ನು ತೆಗೆದುಕೊಳ್ಳುತಿದ್ದಾರೆ. ಯಾಕೆಂದರೆ ಅವು ಜೀವ ಇರುವ ಪ್ರಾಣಿಗಳಲ್ಲ, ಬದಲಿಗೆ ಮನೋರಂಜನೆಗೆ ರೂಪಿತವಾದ ಯಾಂತ್ರಿಕ ಗೊಂಬೆಗಳು.
ತಂತ್ರಜ್ಞಾನ ಮತ್ತು ಧ್ವನಿವರ್ಧಕಗಳನ್ನು ಬಳಸಿಕೊಂಡು ಅವುಗಳಿಗೆ ಚಲನೆ ಮತ್ತು ಧ್ವನಿಯನ್ನ ನೀಡಲಾಗಿದೆ. ಹೆಚ್ಚು ಜನರ ಓಡಾಟ ಇರುವ ಜಾಗಗಳಾದ ನುಡಿಸಿರಿ, ಕೃಷಿಸಿರಿ ವೇದಿಕೆಗಳ ಬಳಿಯಲ್ಲಿ ಈ ಯಾಂತ್ರಿಕ ಗೊಂಬೆಗಳನ್ನಿಡಲಾಗಿದೆ. ಪುಟಾಣಿಗಳು, ವಿದ್ಯಾರ್ಥಿಗಳು ಫೋಟೊ ತೆಗೆದುಕೊಳ್ಳಲು ಅವುಗಳನ್ನು ಮುಟ್ಟಲು ಮುಗಿಬಿದ್ದು ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಸುಮಾರು 15ರಿಂದ 20 ಅಡಿ ಎತ್ತರ ಇರುವ ಈ ಗೊಂಬೆಗಳು ಒಂದು ಆಕರ್ಷಣೆಯ ಕೇಂದ್ರವಾಗಿವೆ.