Advertisement

ಮೂಡುಬಿದಿರೆ: ಶುಕ್ರ”ವಾರದ’ಸಂತೆ; ಶನಿವಾರ ಕಸದ ಕಂತೆ

09:06 PM Oct 16, 2021 | Team Udayavani |

ಮೂಡುಬಿದಿರೆ: ಪುರಸಭೆಯ ದಿನವಹಿ ಮಾರುಕಟ್ಟೆ ಪೇಟೆಯಿಂದ ಸ್ವರಾಜ್ಯಮೈದಾನಕ್ಕೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಗೊಂಡು ವರುಷಗಳೇ ಉರುಳಿವೆ. ಅತ್ತ ಶರವೇಗದಲ್ಲಿ ನಿರ್ಮಾಣಗೊಳ್ಳುತ್ತಿದ್ದಂತೆಯೇ ಕೋರ್ಟ್‌ ವ್ಯಾಜ್ಯದೊಳಗೆ ಸಿಲುಕಿಕೊಂಡು “ಇಲ್ಲಿರ ಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಸ್ಥಿತಿಯಲ್ಲಿ ಹಾಗೂ ಹೀಗೂ ಕಾಲ ಸವೆಸು ತ್ತಿರುವ ಈ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆಯುವ ವಾರದ ಸಂತೆ ತೀರಾ ಅವ್ಯವಸ್ಥೆಯೊಳಗೆ ನರಳುತ್ತಿದೆ.

Advertisement

ಸಂತೆ ಎಂದಾಕ್ಷಣ ತ್ಯಾಜ್ಯ ಸಮಸ್ಯೆ ಇದ್ದದ್ದೇ. ಶುಕ್ರವಾರ ಸಂತೆ ಮುಗಿದಾಗ ವ್ಯಾಪಾರಿಗಳು ಉಳಿಕೆ, ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲೇ ಪೇರಿ ಸಿಟ್ಟು ಹೋಗಿಬಿಡುತ್ತಾರೆ. ಶನಿವಾರ ಮುಂಜಾನೆ ಬೇಗನೇ ಬಂದವರ ಕಣ್ಣಿಗೆ ರಾಚುವಂತೆ ಕಸದ ಕಂತೆ ಕಾಣಿಸುತ್ತದೆ. ಹಸಿ, ಒಣ ಕಸದ ವಿಲೇವಾರಿಗಾಗಿ ಇಲ್ಲಿ ಅಲ್ಲಲ್ಲಿ ತೊಟ್ಟಿಗಳನ್ನಿರಿಸಿದಿದ್ದರೆ ಸ್ವಚ್ಛತ ಕಾರ್ಮಿಕರಿಗೂ ಅನುಕೂಲ. ರಣಾಂಗಣದಂತೆ ಕಾಣುವ ಈ ಸ್ಥಿತಿಗೆ ಇನ್ನಾದರೂ ಮುಕ್ತಿ ಸಿಗಬಹುದೇ ಕಾದುನೋಡ ಬೇಕಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next