ಶಿರ್ವ : ಜೀರ್ಣೋದ್ಧಾರಗೊಂಡ ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ,ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶಿಲಾಮಯ ಗರ್ಭಗೃಹದ ನೂತನ ದೇಗುಲ ಸಮರ್ಪಣೆ,ಪುನಃಪ್ರತಿಷ್ಠಾ ಅಷ್ಟಬಂಧ,ಅಷ್ಟೋತ್ತರ ಸಹಸ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಎ. 19 ರಂದು ಸಂಜೆ ನಡೆಯಿತು.
ಬೆಳ್ಳೆಯ ಗೀತಾ ಮಂದಿರದಿಂದ ಮೂಡುಬೆಳ್ಳೆ ದೇವಸ್ಥಾನದವರೆಗೆ ನಡೆದ ಹೊರೆಕಾಣಿಕೆ ಮೆರವಣಿಗೆಗೆ ವಿಶ್ವ ಹಿಂದೂ ಪರಿಷತ್‌ನ ಉಡುಪಿ ಜಿಲ್ಲಾ ಪ್ರಮುಖ್ ವೇ|ಮೂ| ವಿಖ್ಯಾತ್ ಭಟ್‌ಪ್ರಾರ್ಥನಾ ವಿಧಿ ನೆರವೇರಿಸಿ ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.
ಮೂಡುಬೆಳ್ಳೆಯ ಪಾಣಾರ ಸಂಘ,ಉಮೇಶ್ ನಾಯಕ್ ಮೂಡುಬೆಳ್ಳೆ ,ಬೆಳ್ಳೆ ಕಟ್ಟಿಂಗೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಮಸ್ಥರು ಮತ್ತು ಭಕ್ತರ ಸಹಕಾರದೊಂದಿಗೆ ವಿವಿಧ ವಾದ್ಯ ಘೋಷ ಗಳೊಂದಿಗೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣ ಕುಂಭ ಕಲಶ ಹಿಡಿದ ಮಹಿಳೆಯರು , ಕುಣಿತ ಭಜನೆ,ಕೇರಳ ಚೆಂಡೆ,ಹುಲಿವೇಷ, ಕೀಲು ಕುದುರೆ, ಮರಕಾಲು ಕುಣಿತ, ಮಂಗಳ ವಾದ್ಯವಿದ್ದು, ವಿಶೇಷ ಆಕರ್ಷಣೆಯಾಗಿ 2 ಜತೆ ಕಂಬಳ ಕೋಣ,ನಂದಿ ಮತ್ತು ಮರಕಾಲು ಕುಣಿತದ ಪುಟಾಣಿ ಬಾಲಕಿ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ದೇಗುಲದ ಆನುವಂಶಿಕ ಮೊಕ್ತೇಸರರಾದ ಬೆಳ್ಳೆ ಮೇಲ್ಮನೆ ವಸಂತ ಶೆಟ್ಟಿ,ಬೆಳ್ಳೆ ಕೆಳಮನೆ ಡಾ| ರಾಮರತನ್ ರೈ, ಮೊಕ್ತೇಸರ/ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಹೆಚ್. ಭಾಸ್ಕರ ಶೆಟ್ಟಿ , ದೇಗುಲದ ಅರ್ಚಕರಾದ ಶಶಿಕಾಂತ ಉಪಾಧ್ಯಾಯ ,ರಾಘವೇಂದ್ರ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ, ಪವಿತ್ರಪಾಣಿ ರಾಮಮೂರ್ತಿ ಹೆಬ್ಬಾರ್, ಸುದರ್ಶನ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಬೆಳ್ಳೆ ಮೇಲ್ಮನೆ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿಬೆಳ್ಳೆ ರಾಜೇಂದ್ರ ಶೆಟ್ಟಿ,ಜತೆ ಕಾರ್ಯದರ್ಶಿಗಳಾದ ಬೆಳ್ಳೆ ನಿರಂಜನ್ ರಾವ್, ರಂಜನ್ ಶೆಟ್ಟಿ ಬೆಳ್ಳೆ ಪಡುಮನೆ, ನಾಗರಾಜ ಕಾಮತ್,ಕೋಶಾಧಿಕಾರಿ ಬೆಳ್ಳೆ ಚಂದ್ರಕಾಂತ ರಾವ್, ಮುಂಬೈ ಸಮಿತಿಯ ಅಧ್ಯಕ್ಷ ವಿನಯ ಶೆಟ್ಟಿ ಬೆಳ್ಳೆ ಪಾಲೆಮಾರ್,ಸಂಚಾಲಕರಾದ ಬೆಳ್ಳೆ ಮೇಲ್ಮನೆ ಕಿಶೋರ್ ಶೆಟ್ಟಿ ಮತ್ತು ಬೆಳ್ಳೆ ಕೆಳಮನೆ ಡಾ| ಪ್ರಕಾಶ್ಚಂದ್ರ ಶೆಟ್ಟಿ,ವೆಂಕಟರಮಣ ರಾವ್,ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ, ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಬೆಳ್ಳೆ ಮೇಲ್ಮನೆ ರೇಖಾ ಶೆಟ್ಟಿ,ಸುರೇಶ್ ಶೆಟ್ಟಿ ಪಾಲೇಮಾರ್,ಸಂದೀಪ್ ಸಾಲಿಯಾನ್, ಬೆಳ್ಳೆ ಶಿವಾಜಿ ಎಸ್.ಸುವರ್ಣ, ಕಟ್ಟಿಂಗೇರಿ ದೇವದಾಸ್ ಹೆಬ್ಟಾರ್, ವ್ಯವಸ್ಥಾಪನ ಸಮಿತಿಯ ಸದಸ್ಯರು,ಗ್ರಾಮದ ವಿವಿಧ ಧಾರ್ಮಿ ಕ ಕ್ಷೇತ್ರಗಳು ಮತ್ತು ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಗ್ರಾಮಸ್ಥರು ಮತ್ತು ಭಕ್ತರು ಉಪಸ್ಥಿತರಿದ್ದರು.