Advertisement

ಮಾಂಟ್ರಿಯಲ್‌ ಟೆನಿಸ್‌: ಬೌಶಾರ್ಡ್‌ಗೆ ವೈಲ್ಡ್‌ಕಾರ್ಡ್‌

10:30 AM Jul 22, 2018 | |

ಮಾಂಟ್ರಿಯಲ್‌: ಮುಂದಿನ ತಿಂಗಳು ನಡೆಯಲಿರುವ, ಪ್ರಮುಖ ಹಾರ್ಡ್‌ಕೋರ್ಟ್‌ ಟೆನಿಸ್‌ ಸ್ಪರ್ಧೆಗಳಲ್ಲಿ ಒಂದಾಗಿರುವ “ಮಾಂಟ್ರಿಯಲ್‌ ಡಬ್ಲ್ಯುಟಿಎ ಟೆನಿಸ್‌’ನಲ್ಲಿ ಪಾಲ್ಗೊಳ್ಳಲು ಆತಿಥೇಯ ಕೆನಡಾದ ಆಟಗಾರ್ತಿ ಯುಗೇನಿ ಬೌಶಾರ್ಡ್‌ ಅವರಿಗೆ ವೈಲ್ಡ್‌ಕಾರ್ಡ್‌ ಲಭಿಸಿದೆ. ವರ್ಷಾಂತ್ಯದ ಗ್ರ್ಯಾನ್‌ಸ್ಲಾಮ್‌ ಕೂಟವಾದ ಯುಎಸ್‌ ಓಪನ್‌ ಟೆನಿಸ್‌ಗೆ ಇದು ಪ್ರಮುಖ ಅಭ್ಯಾಸ ಪಂದ್ಯಾವಳಿಯಾಗಿದೆ.

Advertisement

“ಯುಗೇನಿ ಬೌಶಾರ್ಡ್‌ ಇತ್ತೀಚೆಗೆ ಉತ್ತಮ ಟೆನಿಸ್‌ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮಾಂಟ್ರಿಯಲ್‌ನಲ್ಲೂ ಈ ಆಟವನ್ನು ಮುಂದುವರಿಸುವರೆಂಬ ವಿಶ್ವಾಸ ನಮ್ಮದು’ ಎಂಬುದಾಗಿ ಕೂಟದ ನಿರ್ದೇಶಕ ಯುಗೇನ್‌ ಲ್ಯಾಪಿಯರ್‌ ಹೇಳಿದ್ದಾರೆ. ಮಾಂಟ್ರಿಯಲ್‌ ಟೆನಿಸ್‌ ಪಂದ್ಯಾವಳಿ ಆ. 6ರಿಂದ ಆರಂಭವಾಗಲಿದ್ದು, ಮೊದಲ ದಿನವೇ ಯುಗೇನಿ ಬೌಶಾರ್ಡ್‌ ಕಣಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next