Advertisement

ಭೂಚೋರರ ವರದಿ ನೀಡಲು ಜಿಲ್ಲಾಧಿಕಾರಿಗೆ ತಿಂಗಳ ಗಡುವು

12:36 AM Mar 19, 2020 | Lakshmi GovindaRaj |

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನು ಕಬಳಿಸಿದವರ ವರದಿ ನೀಡುವಂತೆ ಸರ್ಕಾರಿ ಭೂಮಿ ಸಂರಕ್ಷಣಾ ಸಮಿತಿಯು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ 1 ತಿಂಗಳ ಗಡುವು ನೀಡಿದೆ! ಸರ್ಕಾರಿ ಕೆರೆ, ಸ್ಮಶಾನ, ಗೋಮಾಳ, ಸರ್ಕಾರಿ ಕುಂಟೆ, ಖರಾಬು ಕುಂಟೆಯ ಜಮೀನು ಸರ್ಕಾರಿ ಎಂದು ಉಲ್ಲೇಖವಿದ್ದರೂ, ಆ ಜಮೀನು ಮಾರಾಟ ಕರಾರು ಆಗಿ ಅದು ನೋಂದಣಿಯು ಆಗುತ್ತಿವೆ.

Advertisement

ಇದರಿಂದ ಸರ್ಕಾರಕ್ಕೆ ಅಪಾರ ನಷ್ಟವಾಗಿದ್ದು, ಈ ನಿಟ್ಟಿನಲ್ಲಿ ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದ ಸರ್ಕಾರಿ ಭೂಮಿ ಸಂರಕ್ಷಣಾ ಸಮಿತಿಯು ಇತ್ತೀಚೆಗೆ ಸಭೆ ಸೇರಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದೆ.

ಬಿಬಿಎಂಪಿ, ಬಿಡಿಎ, ಬೆಂಗಳೂರು ನಗರದ ಸರ್ಕಾರಿ ಜಮೀನಿನ ಸರ್ವೇ ನಂಬರ್‌ಗಳಲ್ಲಿಯೇ ಹೆಚ್ಚಾಗಿ ನಕಲಿ ದಾಖಲೆ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿ ದ್ದು, ರಾಜ್ಯದ ಅರಣ್ಯ ಭೂಮಿಯನ್ನೇ ಹೆಚ್ಚಾಗಿ ಕಬಳಿಸಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿರುವ ಹಿನ್ನಲೆ ಸಮಿತಿಯು ವರದಿಯನ್ನು ಕೇಳಿದೆ.

50 ಸಾವಿರ ಎಕರೆಗೆ ನಕಲಿ ದಾಖಲೆ ಸೃಷ್ಟಿ?: ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ 50 ಸಾವಿರ ಎಕರೆ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾ ಗಿದ್ದು, ಅದರಲ್ಲೂ ರಾಜಧಾನಿಯಲ್ಲಿ 3 ಸಾವಿರ ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

ಅಧಿವೇಶನದಲ್ಲಿಯೂ ಪ್ರಸ್ತಾಪ: ಯಲಹಂಕ ತಾಲೂಕಿನ ಜಾಲ ಹೋಬಳಿಯ ಚೊಕ್ಕನಹಳ್ಳಿಯಲ್ಲಿ 8 ಎಕರೆ ಸರ್ಕಾರಿ ಜಮೀನನ್ನು ಕಾಚರಕನಹಳ್ಳಿ ಪ್ರಭಾರ ಉಪನೋಂದಣಿ ಅಧಿಕಾರಿಯಾಗಿದ್ದ ಬಿ.ಪ್ರಶಾಂತ ಎಂಬುವವರು 2020 ಜ. 27ರಂದು ಕಾನೂನು ಬಾಹಿರ ಕ್ರಯದ ಕರಾರು ದಸ್ತಾವೇಜು ನೋಂದಾಯಿ ಸಿದ್ದಾರೆ. ಈ ಬಗ್ಗೆ ಬಜೆಟ್‌ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಕುರಿತು ಕಂದಾಯ ಸಚಿವರು ಸೂಕ್ತ ಕ್ರಮಕೈಗೊ ಳ್ಳುವುದಾಗಿ ತಿಳಿಸಿದ್ದಾರೆ.

Advertisement

ನಕಲಿ ದಾಖಲೆ ಹೊಂದಿದವರ್ಯಾರು?: ಸರ್ಕಾರಿ ಜಮೀನಿಗೆ ಪಹಣಿ, ಪೋಡಿ ಸೇರಿದಂತೆ ವಿವಿಧ ನಕಲಿ ದಾಖಲೆಯನ್ನು ಹೊಂದಿರುವ ಹೆಚ್ಚಿನವರು ಕರ್ನಾ ಟಕದವರಲ್ಲ. ಬದಲಾಗಿ ಆಂಧ್ರಪ್ರದೇಶ, ತಮಿಳು ನಾಡಿನಿಂದ ವಲಸೆ ಬಂದವರು ಎಂಬ ಮಾಹಿತಿ ಲಭ್ಯ ವಾಗಿದೆ. ಇದರಲ್ಲಿ ಕರ್ನಾಟಕದವರು ಕಡಿಮೆ ಪ್ರಮಾಣ ದಲ್ಲಿದ್ದಾರೆ. ಅದರಲ್ಲೂ ಉಳ್ಳವರು ಮಾತ್ರ. ವರದಿ ಯಿಂದ ಯಾರು ನಕಲಿ ದಾಖಲೆ ಹೊಂದಿದ್ದಾರೆ ಎಂಬುದು ಗೊತ್ತಾಗಲಿದೆ.

ಸಮಿತಿಗೆ ಕೊಠಡಿ, ಸಿಬ್ಬಂದಿ ಇಲ್ಲ!: ಸರ್ಕಾರಿ ಜಮೀನು ಕಬಳಿಕೆ ತಡೆಗೆ ಶಾಸಕ ಕೆ.ಜಿ.ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಭೂಮಿ ಕಬಳಿಕೆ ನಿಯಂತ್ರಣ ಸಮಿತಿಯನ್ನು ರಚಿಸಲಾಗಿದೆ. ಈವರೆಗೆ 2 ಸಭೆಗಳನ್ನು ನಡೆಸಿದೆ. ಆದರೆ, ಈ ಸಮಿತಿ ಕಾರ್ಯ ನಿರ್ವಹಿಸಲು ಕೊಠಡಿ ಮತ್ತು ಸಿಬ್ಬಂದಿಗಳನ್ನು ಒದಗಿಸಿಲ್ಲ. ಈ ಬಗ್ಗೆ ಸಮಿತಿಯು ಸರ್ಕಾರಕ್ಕೆ ಪತ್ರಗಳನ್ನು ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವಲ್ಲಿ ಸರ್ಕಾರ ಎಡವಿದೆ.

ಅಧಿಕಾರಿಗಳ ಹಸ್ತಕ್ಷೇಪವಿಲ್ಲದ ನಕಲಿ ದಾಖಲೆ ಅಸಾಧ್ಯ. ರಾಜ್ಯದಲ್ಲಿ ಸಾವಿರಾರು ಎಕರೆಗೆ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾವಾರು ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಜತೆಗೆ ಕೋರ್ಟ್‌ನಲ್ಲಿರುವ ವ್ಯಾಜ್ಯಗಳ ಬಗ್ಗೆಯೂ ಮಾಹಿತಿ ನೀಡುವಂತೆ ತಿಂಗಳ ಗಡುವು ನೀಡಲಾಗಿದೆ.
-ಎ.ಟಿ.ರಾಮಸ್ವಾಮಿ, ಸರ್ಕಾರಿ ಭೂಮಿ ಸಂರಕ್ಷಣಾ ಸಮಿತಿ ಸದಸ್ಯ

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next