Advertisement

ದಿಲ್ಲಿಗೆ ಮುಂಗಾರು ಮೂರು ದಿನ ವಿಳಂಬ: ಐಎಂಡಿ; ಒಂದು ವಾರ ತಡ: ಸ್ಕೈಮೆಟ್‌

10:08 AM Jun 07, 2019 | Sathish malya |

ಹೊಸದಿಲ್ಲಿ : ಮುಂಗಾರು ಮಾರುತಗಳು ಈ ಬಾರಿ ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಮೂರು ದಿನ ತಡವಾಗಿ ತಲುಪಲಿವೆ; ಹಾಗಿದ್ದರೂ ಮಾಮೂಲಿಯಂತೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Advertisement

ಆದರೆ ಖಾಸಗಿ ಹವಾಮಾನ ಅಂದಾಜು ಸಂಸ್ಥೆ ಸ್ಕೈಮೆಟ್‌ ಪ್ರಕಾರ ದಿಲ್ಲಿಗೆ ಮುಂಗಾರು ಮಳೆ ಒಂದು ವಾರ ತಡವಾಗಿ ತಲುಪಲಿದೆ.

ಐಎಂಡಿ ಹೇಳಿರುವಂತೆ ಕೇರಳಕ್ಕೆ ಮುಂಗಾರು ಮಳೆ ಎರಡು ದಿನ ತಡವಾಗಿ ಜೂನ್‌ 8ರಂದು ಬರಲಿದೆ.

ಸಾಮಾನ್ಯವಾಗಿ ಮಾನ್ಸೂನ್‌ ದಿಲ್ಲಿಯನ್ನು ತಲುಪುವುದು ಜೂ.29ರ ಸುಮಾರಿಗೆ. ಈ ಬಾರಿಗೆ ಕೇರಳ ಕರಾವಳಿಗೆ ಮುಂಗಾರು ಪ್ರವೇಶ ಎರಡು ದಿನ ವಿಳಂಬವಾಗಲಿರುವುದರಿಂದ ಇದೇ ರೀತಿಯ ವಿಳಂಬ ಮುಂದುವರಿದು ಅದು ದಿಲ್ಲಿಯನ್ನು ಎರಡರಿಂದ ಮೂರು ದಿನಗಳ ವಿಳಂಬದೊಂದಿಗೆ ತಲುಪಲಿದೆ ಎಂದು ಐಎಂಡಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next