Advertisement
ಮಂಗಳವಾರ ತಡರಾತ್ರಿ ಯಿಂದೀಚೆಗೆ ಮಂಗಳೂರು, ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕಿನ ವಿವಿಧೆಡೆ ಮಳೆ ಉತ್ತಮವಾಗಿ ಸುರಿದಿದೆ.
ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿಯು ತ್ತಿದೆ. ತಗ್ಗು ಪ್ರದೇಶಗಳು ಜಲಾವೃತ ಗೊಂಡಿವೆ. ಹೆದ್ದಾರಿ ಷಟ³ಥ ಕಾಮಗಾರಿ ನಡೆದ ಸ್ಥಳಗಳಲ್ಲಿ ಕೆಸರು ನೀರು ರಸ್ತೆಯಲ್ಲಿ ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಉಪ್ಪಳ ಬಸ್ ನಿಲ್ದಾಣದಲ್ಲಿ ಕೆಸರು ನೀರು ತುಂಬಿದೆ.
Related Articles
ಬೆಳ್ತಂಗಡಿ: ತಾಲೂಕಿನಾದ್ಯಂತ ಬುಧವಾರ ಕಂಡುಬಂದಿದ್ದು ಭಾರೀ ಮಳೆಯಾಗಿದ್ದು, ಮುಖ್ಯ ರಸ್ತೆಯೇ ನೀರಿನಲ್ಲಿ ಮುಳುಗಿ ಹೋಗಿದೆ. ಮಂಗಳೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಉಜಿರೆ ಜನಾರ್ದನ ಶಾಲೆಯ ಮುಂಭಾಗದಿಂದ ಸುಮಾರು 500 ಮೀ. ದೂರದವರೆಗೆ ನೀರು ರಸ್ತೆಯಲ್ಲಿ ಹರಿದ ಕಾರಣ ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಅನುಭವಿಸಿದರು. ರಸ್ತೆ ಪಕ್ಕದ ಅಂಗಡಿ, ಮನೆಗಳ ಮಂದಿಯೂ ಸಮಸ್ಯೆ ಎದುರಿಸಿದರು.
Advertisement
ಇನ್ನೂ 2 ದಿನ ಆರೆಂಜ್ ಅಲರ್ಟ್ಕರಾವಳಿಯಲ್ಲಿ ಇನ್ನೂ ಎರಡು ದಿನ ಆರೆಂಜ್ ಅಲರ್ಟ್ ಇದೆ. ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.