Advertisement

ಜಮ್ಮು ಕಾಶ್ಮೀರ ಪ್ರವೇಶಿಸಿದ ಮುಂಗಾರು; ಅಲ್ಲಲ್ಲಿ ಮಳೆ

07:31 PM Jun 28, 2018 | udayavani editorial |

ಜಮ್ಮು : ಈ ಬಾರಿಯ ಮುಂಗಾರು ಮಾರುತಗಳು ಒಂದು ವಾರ ಮೊದಲೇ ಜಮ್ಮು ಕಾಶ್ಮೀರವನ್ನು ಪ್ರವೇಶಿಸಿವೆ.

Advertisement

ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ಇಂದು ಮಳೆಯಾಗಿದೆ. ಪರಿಣಾಮವಾಗಿ ಜನರಿಗೆ ಬಿಸಿಲ ಧಗೆಯಿಂದ ಕೊಂಚ ರಿಲೀಫ್ ಸಿಕ್ಕಿದಂತಾಗಿದೆ. ದಿನದ ಉಷ್ಣತೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. 

ನಿನ್ನೆ ಮಂಗಳವಾರ ಸಂಜೆಯಿಂದಲೇ ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಮಳೆಯಾಗಿತ್ತು. ವರ್ಷಂಪ್ರತಿ ಜಮ್ಮು ಕಾಶ್ಮೀರಕ್ಕೆ ಮುಂಗಾರು ಮಾರುತ ಪ್ರವೇಶ ಜುಲೈ ಮೊದಲ ವಾರದಲ್ಲಿ ಆಗುವುದು ವಾಡಿಕೆ. ಈ ಬಾರಿ ಅದು ಒಂದು ವಾರ ಮೊದಲೇ ಪ್ರವೇಶಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next